ಸೆ.25 ರಿಂದ ಆ.2 ವರೆಗೆ ಮಧ್ಯವ್ಯಸನಿಗಳ ಸಮಾಲೋಚನೆ ಸಭೆ.
ಸಿಂಧನೂರು.ಸ.17.ಕುಡಿತದಿಂದ ಮನೆಗೆ ಬಾರವಾಗಿರುವ ಮದ್ಯವ್ಯಸನಿಗಳನ್ನು ಕುಡಿತದಿಂದ ಬಿಡಿಸಲು ಸೆ.25ರಿಂದ ಆ.2 ವರೆಗೆ ಸಮಾಲೋಚನೆ ಸಭೆಯನ್ನು ನಗರದ ಗೊಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾದ ಎಮ್. ಬಾಸ್ಕರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ಪಿಡುಗಾದ ಮದ್ಯ ವ್ಯಸನವನ್ನು ಸಮಾಜದ ಜನರ ಭಾಗವಹಿಸುವಿಕೆಯ ಮೂಲಕ ಹಾಗೂ ವೈದ್ಯಕೀಯ ಚಿಕಿತ್ಸೆ,ಮನೋರೋಗ ತಜ್ಞರ ಸಲಹೆ, ಮಾರ್ಗದರ್ಶನ ನೀಡಿ ರೋಗಿಯ ಸಮಸ್ಯೆಯಾದ ಒಬ್ಬಂಟಿತನದ ಜಿಗುಪ್ಪೆ,ಕೋಪ,ನಿರಾಶೆ, ಕೀಳರಿಮೆ ಮತ್ತು ಕೌಟುಂಬಿಕ ಸಮಸ್ಯೆಗಳ ನಿವಾರಿಸುವುದು, ಕುಟುಂಬ ಹಾಗೂ ಸಮಾಜದಲ್ಲಿ ಸ್ಥಾನಮಾನ ಮತ್ತು ಗೌರವಗಳನ್ನು ಕಲ್ಪಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ಮಾತನಾಡಿದರು.
ಈ ಶಿಬಿರಗಳಿಂದ ಅಮಲು ರೋಗಿಗಳು ಮಧ್ಯ ವ್ಯಸನ ಮುಕ್ತರಾಗಿ ಜೀವನದಲ್ಲಿ ಆತ್ಮಸ್ಥೆರ್ಯ ತುಂಬಿ ಮುಂದೆ ನವಜೀವನ ಸಮಿತಿಗೆ ಸೇರಿಕೊಂಡು ತಾವು ಸಂತೋಷ ಜೀವನ ನಡೆಸುವುದರೊಂದಿಗೆ, ಪರಿಸರದ ಮದ್ಯವ್ಯಸನಿಗಳ ಮೇಲೆ ಪ್ರಭಾವ ಬೀರಿ ಅವರನ್ನು ಪಾನ ಮುಕ್ತರನ್ನಾಗಿ ನೆರವಾಗುತ್ತದೆ. ಆದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ (ರಿ )ಸಂಸ್ಥೆ ಜನ ಜಾಗೃತಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮನೆ ಭೇಟಿ ಸಮಾವೇಶ, ಮಧ್ಯವರ್ಜನ ಶಿಬಿರ, ಗ್ರಾಮ ಸುಭೀಕ್ಷಾ ಕಾರ್ಯಕ್ರಮ, ಸರಳಜೀವನ ಸಮಿತಿ ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸುಮಾರು 92 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡು 52ಸಾವಿರ ಜನರು ಮಧ್ಯಪಾನ ಮುಕ್ತರಾಗಿ ಜನರು ಸುಖ ಶಾಂತಿಯಿಂದ ಬದುಕುತ್ತಿದ್ದಾರೆ ಎಂದರು.
ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅಮಲು ರೋಗಿಗಳನ್ನು ಗುರುತಿಸಿ ಚಿಕಿತ್ಸೆನೀಡಿ ಔಷಧಪಚಾರ ಮಾಡಿ ಅವರ ಕುಟುಂಬದವರಿಗೆ ತರಬೇತಿದಾರರಿಂದ ಕೌನ್ಸಿಲಿಂಗ್ ನೀಡಿ ಅವರಿಂದ ಒಪ್ಪಿಗೆ ಪತ್ರ ಪಡೆದು 8 ದಿನಗಳ ಕಾಲ ಊಟ ಉಪಚಾರ ದೊಂದಿಗೆ ನೋಡಿಕೊಳ್ಳಲಾಗುವುದು. ಜನರು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು 80 ರಿಂದ 100 ಜನರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಾಸರಿ ಸತ್ಯನಾರಾಯಣ ಮದ್ಯ ವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಕೋಶಾಧಿಕಾರಿ ಎನ್.ಅಮರೇಶ ಶಿವನಾಗಪ್ಪ, ರಾಜು ಅಡವಿಬಾವಿ, ಮರಿಬಸವ ಬೊಮ್ಮನಾಳ, ವಿರೇಶ್, ಕಾರ್ಯದರ್ಶಿಗಳಾದ ನಂದಾ ಕಂದ್ರೆ, ಪ್ರತಿಭಾ.ಬಿ, ಹನುಮಂತ ಕದ್ರಿ, ಡಾ. ಶರಣಪ್ಪ ಗೋರೆಬಾಳ ಸೇರಿದಂತೆ ಇತರರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
