ಅರೆಬೆತ್ತಲೆ ಮೆರವಣಿಗೆ – ಪ್ರತಿಭಟನೆ…!!!

ಅರೆಬೆತ್ತಲೆ ಮೆರವಣಿಗೆ – ಪ್ರತಿಭಟನೆ.

ಬಿಜೆಪಿ ಸರ್ಕಾರವು ಕೂಲಿ ಸಮಾಜದ ಪರ್ಯಾಯ ಪದಗಳನ್ನು ಎಸ್ ಟಿ ಗೇ ಸೇರಿಸುವುದಾಗಿ ಪದೇಪದೇ ಹುಸಿ ಭರವಸೆಗಳನ್ನು ನೀಡಿ ವಂಚಿಸುತ್ತಿರುವದನ್ನು ಖಂಡಿಸಿ ಸೆಪ್ಟೆಂಬರ್ 16ರಂದು ಕಲಬುರ್ಗಿ ನಗರದಲ್ಲಿ ಅರೆಬೆತ್ತಲೆ ಮೆರವಣಿಗೆಯನ್ನು ಎಸ್. ಟಿ. ಹೋರಾಟ ಸಮಿತಿ ಹಮ್ಮಿಕೊಂಡಿದ್ದು. ಹೋರಾಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಪಾಲ್ಗೊಳ್ಳುವ ಮೂಲಕ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ್ ಕಾಶಿ ಅವರು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯ ಮೂಲಕ ಮಾತನಾಡಿದ ಅವರು ನಗರದ ಜಗತ್ ವೃತ್ತದಿಂದ ಸರ್ದಾರ ವಲ್ಲಭಾಯಿ ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟನಾ ಪತ್ರವನ್ನು ಸಲ್ಲಿಸಲಾಗುತ್ತಿದ್ದೂ. ಸಂಘಟನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿ ಮಾಡಿದರು..

ವರದಿ. ಬಸಯ್ಯ ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend