ಸಿಂಧನೂರು ಗೆಳೆಯರ ಬಳಗ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆ…!!!

ಸಿಂಧನೂರು ಗೆಳೆಯರ ಬಳಗ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆ.

ಸಿಂಧನೂರು: ನಗರದ ಶ್ರೀ ರಾಜಾ ಭಕ್ಷಿ ಯಮನೂರಪ್ಪ ದರ್ಗಾದ ಆವರಣದಲ್ಲಿ ಸಿಂಧನೂರು ಗೆಳೆಯರ ಬಳಗ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ನಿವೃತ್ತ ಎ.ಎಸ್.ಐ. ಹುಸೇನ್ ಸಾಬ್ ಭಾಗವಹಿಸಿ, ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಿಂಧನೂರು ಗೆಳೆಯರ ಬಳಗವು ತಾಲೂಕಿನಲ್ಲಿ ರಾಜಕೀಯ ರಹಿತವಾಗಿ ಸಮಾಜಮುಖಿಯಾಗಿ ಕಾರ್ಯಕ್ರಮಗಳನ್ನು ಯಾವುದೇ ಧಾನಿಯ ಸಹಾಯವಿಲ್ಲದೆ. ಸ್ವಂತ ಬಳಗದ ಸದಸ್ಯರಿಂದ ಸಂಗ್ರಹಿಸಿದ ಹಣದಿಂದ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ನಾನು ಸೇವೆಯಿಂದ ನಿವೃತ್ತ ಗೊಂಡ ನಂತರ ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸಿ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಸಿಂಧನೂರು ಗೆಳೆಯರ ಬಳಗದ ಸಂಘಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಸಿಂಧನೂರು ಗೆಳೆಯರ ಬಳಗದ ಸಂಘದ ಸದಸ್ಯ ವೀರೇಶ ಗಡ್ಡಿಮಾಳ ಮಾತನಾಡಿ, ಪರಿಸರವನ್ನ ಸಂರಕ್ಷಿಸುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ, ಮತ್ತು ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹಿಂದು ಮುಸ್ಲಿಂ ಭಾವೈಕ್ಯದ ಸಂಕೇತವಾದ ಶ್ರೀ ಯಮನೂರಪ್ಪ ದರ್ಗಾದಲ್ಲಿ ಸಸಿ ನೆಡುವುದರ ಜೊತೆಗೆ ಸುಮಾರು 29 ವರ್ಷಗಳ ಕಾಲ ಕಳಂಕ ರಹಿತವಾಗಿ ಇತರರಿಗೆ ಮಾದರಿಯಾಗುವಂತೆ ತಮ್ಮ ಅಮೋಘ ಸೇವೆ ಸಲ್ಲಿಸಿ ನಿವೃತ್ತಿ ಗೊಂಡ ಎ.ಎಸ್.ಐ. ಹುಸೇನ್ ಸಾಬ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂಧನೂರು ‌ಗೆಳೆಯರ ಬಳಗ ಸಂಘದ ಉಪಾಧ್ಯಕ್ಷ ಸದ್ದಾಂಖಾನ್ ವಹಿಸಿದ್ದರು. ಮೌನೇಶ್ ತೋಟದ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಿಂಧನೂರು ಗೆಳೆಯರ ಬಳಗ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸುರಂಜನ್ ಭೈರಾಗಿ, ಮಹಿಬೂಬ್ ಜನತಾ ಕಾಲೋನಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend