ಮಗನ ನೇತ್ರದಾನ ಮೂಲಕ ಸಮಾಜಕ್ಕೆ ಮಾದರಿಯಾದ ಹಿರೇಮಠ ಕುಟುಂಬ.
ರಾಯಚೂರು : ಜೂನ್ 2.ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಚಿಕಿತ್ಸೆ ಫಲಕಾರಿಯಾಗದೆ ಓಪೆಕ್ ಆಸ್ಪತ್ರೆಯಲ್ಲಿ ಮೃತನಾಗಿದ್ದು. ದುಃಖದ ಸಮಯದಲ್ಲಿಯೂ ಮಗನ ನೇತ್ರದಾನ ಮಾಡಿ ಸಮಾಜಕ್ಕೆ ಪಾಲಕರು ಮಾದರಿಯಾಗಿದ್ದಾರೆ.
ರಾಯಚೂರು ನಗರದ ಸೋಮಶೇಖರ ಹಿರೇಮಠ ಹಾಗೂ ಗಾಯತ್ರಿ ಹಿರೇಮಠ ರವರು ತಮ್ಮ ಮಗ ಶಶಾಂಕನ ನೇತ್ರದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.ಕುಟುಂಬ ಸದಸ್ಯರಾದ ಮಹಾಂತೇಶ ಹಿರೇಮಠ, ಶಶಿಧರ ಸುರಗಿಮಠ ,ಶಾಂತಯ್ಯ ಹಿರೇಮಠ ಸಹಕಾರದೊಂದಿಗೆ ಸ್ಥಳೀಯ ನವೋದಯ ವೈದ್ಯಕೀಯ ಸಂಸ್ಥೆಯ ನೇತ್ರ ವಿಭಾಗ ಮುಖ್ಯಸ್ಥರಾದ ಡಾ ಅನುಪಮಾ ವಾಲ್ವೆಕರ್ ಅವರ ಮಾರ್ಗದರ್ಶನದಲ್ಲಿ ಡಾ.ಸ್ನೇಹ ವಸಂತ. ಡಾ.ಆಶಾ ನಿಕಾತ, ಡಾ.ಮೇಘನಾ, ಡಾ.ಹರ್ಷ ರವರ ತಂಡ ನೇತ್ರದಾನ ಪ್ರಕ್ರಿಯೆ ಪೂರ್ಣಗೊಳಿಸಿದರು .
ಶಶಾಂಕ ಹಿರೇಮಠ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಇನ್ನೊಬ್ಬರ ಬಾಳಿಗೆ ಬೆಳಕು ನೀಡಿದ್ದಾರಲ್ಲದೆ ಕಣ್ಣು ಮೂಲಕ ಇನ್ನೂ ಎಲ್ಲೋ ಜೀವಂತವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತ ಸುಟ್ಟು ಹಾಕುವ ಅಥವಾ ಹೂಳಿ ಹಾಕುವ ಬದಲಾಗಿ ನೇತ್ರದಾನ ಪರಂಪರೇಯಾಗಿಸೋಣ ಎಂದು ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ರಾಯಚೂರು ಜಿಲ್ಲಾ ಅಧ್ಯಕ್ಷ ರಾಜೇಂದ್ರಕುಮಾರ ಶೇವಾಳೆ ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
