ಸಲಿಕೆ ,ಗುದ್ದಲಿ, ಪುಟ್ಟಿ ಹಿಡಿದು ಕಾರ್ಮಿಕರಿಂದ ಕೆಲ್ಲೂರು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ !!
ಜೇವರ್ಗಿ :ಇಲ್ಲಿನ ಕೆಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅವರಾದ ಹಾಲಗಡ್ಲಾ, ಶಕಪೂರ್ ಸೇರಿದಂತೆ ಕೆಲ್ಲೂರ ಗ್ರಾಮಗಳ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸಿದರು ,ವೇತನ ಪಾವತಿ ಮಾಡದೆ ಇರುವುದಕ್ಕಾಗಿ ಇಲ್ಲಿನ ಗ್ರಾಮ ಪಂಚಾಯತಿ ಕಾರ್ಯಾಲಯ ಎದುರುಗಡೆ ಪ್ರತಿಭಟನೆ ನಡೆಸಿದರು.
ಸಲಿಕೆ ,ಗುದ್ದಲಿ ,ಬುಟ್ಟಿ ಇಟ್ಟು ಪ್ರತಿಭಟನೆ !
ನಾವು ಸುಡು ಬಿಸಿಲಿನಲ್ಲಿ ಬೆವರು ಸುರಿಸಿ ಕಷ್ಟಪಟ್ಟು ಮಹಿಳೆಯರು ದುಡಿದಿದ್ದೇವೆ ನಮ್ಮ ಸಂಬಳಕ್ಕೆ ಕೊಕ್ಕೆ ಹಾಕುತ್ತಿರುವುದು ಸರಿಯಲ್ಲ ಎಂದು ಶ್ರಮಿಕರ ಆಯುಧಗಳಾದ ಸಲಿಕೆ ,ಪುಟ್ಟಿ, ಗುದ್ದಲಿ ತೆಗೆದುಕೊಂಡು ಬಂದು ಇಲ್ಲಿನ ಪಂಚಾಯತ್ ಎದುರು ಇಟ್ಟು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕೆಲಸಮಾಡಿದರು ಕೈಗೆ ಬಾರದ ಕೂಲಿ ಹಣ :
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲ್ಲೂರು ಗ್ರಾಮಪಂಚಾಯತ್ ವ್ಯಾಪ್ತಿಯ ಎಲ್ಲ ಗ್ರಾಮಗಳ ಜನರು ಕೆಲಸ ಮಾಡಿದ್ದಾರೆ.ಆದರು ಸಹ ಅವರಾದ ಗ್ರಾಮದ ಕಾರ್ಮಿಕರಿಗೆ ಅವರ ಖಾತೆಗೆ ಜಮಾ ಆಗಬೇಕಾಗಿದ್ದ ಕೂಲಿ ಹಣ ಕಡಿತಗೊಳಿಸುವುದಕ್ಕೆ ಇಲ್ಲಿನ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನವೊಲಿಸಿದ ಅಭಿವೃದ್ಧಿ ಅಧಿಕಾರಿ:
ಇನ್ನು ಮುಂದೆ ಇಂಥ ಪ್ರಮಾದಗಳು ಆಗದಂತೆ ಎಚ್ಚರ ವಹಿಸುತ್ತವೆ ಹಾಗೂ ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ಅವರ ಖಾತೆಗೆ ಹಣವನ್ನು ಜಮಾ ಮಾಡುತ್ತೇವೆ ಎಂದು ಇಲ್ಲಿನ ಅಭಿವೃದ್ಧಿ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಕಾರ್ಮಿಕರಿಗೆ ಮನವೊಲಿಸಿ ಸಮಾಧಾನ ಪಡಿಸುವ ಮೂಲಕ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ವಿನಂತಿಸಿದರು.
ಪ್ರತಿಭಟನೆ ನೇತೃತ್ವವನ್ನು ಅವರಾದ ಗ್ರಾಮದ ಮುಖಂಡರಾದ ನಿಂಗು ದೊರೆ , ವಿಶ್ವರಾಧ್ಯ ಠಣಕೇದಾರ್, ದೇವೇಂದ್ರ ನಾಯ್ಕೋಡಿ ಹಾಗೂ ಸಾಬಯ್ಯ ಗುತ್ತೇದಾರ್ ಸೇರಿದಂತೆ ಮಹಿಳಾ ಕಾರ್ಮಿಕರು ಭಾಗವಹಿಸಿದ್ದರು…

ವರದಿ. ಬಸವರಾಜ್. ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
