ಇಟ್ಟಿಗಿ ರೈತ ಸಂಪರ್ಕ ಕೇಂದ್ರದಲ್ಲಿ ಸೂರ್ಯಕಾಂತಿ ಬೀಜಗಳ ವಿತರಣೆ….!!!

ಇಟ್ಟಿಗಿ ರೈತ ಸಂಪರ್ಕ ಕೇಂದ್ರದಲ್ಲಿ ಸೂರ್ಯಕಾಂತಿ ಬೀಜಗಳ ವಿತರಣೆ. ವಿಜಯನಗರ ಜಿಲ್ಲಾ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದ ರೈತ ಸಂಪರ್ಕದಲ್ಲಿ ದಿನಾಂಕ 30 ಮತ್ತು 31/5/2022 ರಂದು ಕಳೆದ ಎರಡು ದಿನಗಳಿಂದ ಈ ಭಾಗದ ರೈತರಿಗೆ ‘KBSH 44 C/S ಪ್ರಮಾಣಿತ ಸೂರ್ಯಕಾಂತಿ ಬೀಜಗಳ’ ವಿತರಣೆಯನ್ನು ಮಾಡಲಾಯಿತು. ಬೆಳ್ಳಿಗೆ 10 ಗಂಟೆಯಿಂದ ಶುರುವಾದ ಬೀಜ ವಿತರಣೆ 2ದಿನ ಸಂಜೆವರೆಗೂ ನಡೆಯಿತು. ಅಲ್ಲಿ ನೆರೆದಿದ್ದ ರೈತರಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಧಿಕಾರಿಗಳು (AO) ಕೊಟ್ರೇಶ್ ಅವರು ಮಾತಾಡಿ ರೈತರಿಗೆ ‘ನನ್ನ ಬೆಳೆ ನನ್ನ ಹಕ್ಕು’ “2022-2022 ಹಿಂಗಾರು ಬೆಳೆ ಸಮೀಕ್ಷೆ ಆರಂಭವಾಗಿದೆ.ರೈತರು ಗೂಗಲ್ ಪ್ಲೇ-ಸ್ಟೋರನಲ್ಲಿ *”Kharif season Farmer Crop Survey 2021-22″* ಆ್ಯಪ್ ಹುಡುಕಿಕೊಂಡು ಅದರಲ್ಲಿ ನೀವು ಬೆಳೆದ ಬೆಳೆಯ ವಿವರಗಳನ್ನು ಹಾಕಿ ಮುಂದಿನ ಹಂತಗಳನ್ನು ರೈತರಿಗೆ ತಿಳಿಸಿದರು. ಹೀಗೆ ಸಂಗ್ರಹಿಸಲಾದ ಮಾಹಿತಿಯಿಂದ ಎನ್.ಡಿ.ಆರ್. ಎಫ್/ಎಸ್.ಡಿ.ಆರ್.ಎಫ್ ಅಡಿಯಲ್ಲಿ ಪ್ರವಾಹ & ಬರಗಾಲ ಸಂದರ್ಭದಲ್ಲಿ ನೀಡುವ ನಷ್ಟ ಒರಿಹಾರ ವಿತರಿಸಲು,ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಶೀಲಿಸಲು.ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು.ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಬಳಸಲಾಗುವುದು ಎಂದು ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಎಲ್ಲಾ ರೈತರು ತಮ್ಮ ಹೊಲದ ಬೆಳೆಯನ್ನು *”Kharif season Farmer Crop Survey 2021-22″* ಈ ಆ್ಯಪ್ ಲ್ಲಿ ವಿವರಗಳನ್ನು ದಾಖಲಿಸಿಲು ಈ ಮೂಲಕ ಕೋರಿಕೊಂಡರು.ವರದಿ ಗಾರರೊಂದಿಗೆ ಮಾತಾಡಿದ ಅವರು ಎರಡು ದಿನಗಳಿಂದ ರೈತರಿಗೆ 920kg ಗಳಷ್ಟು ಬೀಜಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗಿದೆ ಎಂದರು.ಈ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ-ಕೊಟ್ರೇಶ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ -ಸೌಜನ್ಯ ಹಣ್ಣಿ,ಅನುವುಗರರು -ಚಂದ್ರಣ್ಣ,
ಲೆಕ್ಕ ಸಹಾಯಕರಾದ -ಮೈನುದ್ದಿನ್, ಹಾಗೂ ಅಪಾರ ರೈತರು ಭಾಗವಹಿಸಿದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend