
ನಾಟಿ ವೈದ್ಯ ಬಡಮ್ಮರ ಹೊಸೂರಪ್ಪನ ಸಹೋದರ ಬಿ ನಾಗರಾಜ ಅವಿರೋಧ ಆಯ್ಕೆ.
ಹರಪನಹಳ್ಳಿ: ಬಾಗಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಡಮ್ಮರ ನಾಗರಾಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಬಡಮ್ಮರ ನಾಗರಾಜ ಸರಳ ಸಜ್ಜನಿಕೆಯ ಯುವ ರಾಜಕಾರಣಿ,ಇವರು ರಾಜಕಾರಣದ ಮುಂಚುಣಿಯ ನಾಯಕ ಸದಾ ಜನ ಸಾಮಾನ್ಯರ ಒಡನಾಟದಲ್ಲಿರುವ ಇವರು ಜನಾನುರಾಗಿ. ಬಾಗಳಿ ಗ್ರಾಮದಲ್ಲಿರುವ ಬಡಮ್ಮರ ಕುಟುಂಬವು ರಾಜಕಾರಣದ ಜೊತೆ ಜೊತೆ ನಿಕಟ ಸಂಪರ್ಕ ಹೊಂದಿದೆ. ಈ ಹಿಂದೆ ದಿ!! ಬಡಮ್ಮರ ಕೆಂಚಪ್ಪ ಅಧ್ಯಕ್ಷರಾಗಿ
ಜನಾನುರಾಗಿಯಾಗಿ ಸೇವೆ ಸಲ್ಲಿಸುವ ಮೂಲಕ ಜನ ಮನ್ನಣೆಗಳಿಸಿದವರು, ನಂತರ ಶ್ರೀ ಮತಿ ಬಿ ಗಂಗಮ್ಮ ಅಧ್ಯಕ್ಷರಾಗಿ ಜನ ಸೇವೆ ಮಾಡಿದ್ದಾರೆ. ಈಗ ಬಿ ನಾಗರಾಜ ಬಾಗಳಿ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಶ್ಲಾಘನೀಯ.
ಬಿ ನಾಗರಾಜ ದಿ.ಬಡಮ್ಮರ ಕೆಂಚಪ್ಪ ಇವರ ಪುತ್ರ ,ಹಾಗೂ ಯುವ ಜನ ನಾಯಕ , ಹರಪನಹಳ್ಳಿಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್” ಪಕ್ಷದ ಉಪಾಧ್ಯಕ್ಷ ಸರ್ವ ಜನಾಂಗದ ಯುವ ರಾಜಕಾರಣಿ ನಾಟಿ ವೈದ್ಯ ಬಡಮ್ಮರ ಹೊಸೂರಪ್ಪನ ಸಹೋದರ.
ಇವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆ ಆಗುವಾಗ ಚುನಾವಣೆ ಅಧಿಕಾರಿ ಡಾ. ಶಿವಕುಮಾರ ಬಿರಾದಾರ
ಪರಿಶೀಲಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ ಬಿ ನಾಗರಾಜ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ ಗೀತಾಮ್ಮ ಗಂಡ ಉಚ್ಚೆಂಗೆಪ್ಪ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ಉಪಧ್ಯಾಕ್ಷರು, ಸದಸ್ಯರುಗಳು,
ಪಿ ಡಿ ಓ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
14 ಸದಸ್ಯರುಗಳಾದ
ಶ್ರೀಮತಿ. ಯು. ರೇಣುಕಾ ಗಂಡ ನಾಗರಾಜ್. ಶ್ರೀ ಕೊರಚರ ನಾಗರಾಜ್. ಶ್ರೀಮತಿ ಎಲ್ ಕರಿಯಮ್ಮ ಗಂಡ ಹನುಮಂತಪ್ಪ.
ಶ್ರೀಮತಿ ಕೆ ಆಶಾ ಗಂಡ ರವೀಂದ್ರ.
ಶ್ರೀ ಎಚ್ ಶಿವರಾಮಪ್ಪ .
ಶ್ರೀ ಎಂ ಮಂಜುನಾಥ್. ಶ್ರೀಮತಿ ನೀಲಮ್ಮ ಬಸವನಗೌಡ.
ಶ್ರೀ ಹನುಮಂತಪ್ಪ ಪೂಜಾರ್.
ಶ್ರೀ ಮೂಕನವರ ಬಸವರಾಜ. ಶ್ರೀಮತಿ ಮರಿಯಮ್ಮ ಗಂಡ ಹುಲುಗಪ್ಪ.ವಿಶೇಷವಾಗಿ ಈ ರಾಜ್ಯದ ಕಾಂಗ್ರೇಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿರುವ ಶ್ರೀಮತಿ ಎಂ ಪಿ ಲತಾಮಲ್ಲಿ ಕಾರ್ಜುನರವರು ಬಾಗಳಿ ಗ್ರಾಮ ಪಂಚಾಯಿತಿಯ ನೊತನ ಅಧ್ಯಕ್ಷರಾಗಿರುವ ಬಿ ನಾಗರಾಜ ಮತ್ತು ಇವರ ಸಹೊದರ ಯುವ ರಾಜಕಾರಣಿ ನಾಟಿ ವೈದ್ಯ ಬಿ ಹೊಸರಪ್ಪ ಇವರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತು ಬಾಗಳಿ ಗ್ರಾಮದ ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಅವರ ನೆಚ್ಚಿನ ಅಭಿಮಾನಿಗಳ ಸಹಯೋಗದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
