ಪಗಡದಿನ್ನಿ ಗ್ರಾ.ಪ.ಅಧ್ಯಕ್ಷರಾಗಿ ಅವಿರೋಧವಾಗಿ ರಮೀಜಾ ಆಯ್ಕೆ.
ಸಿಂಧನೂರು ಮೇ. 30: ಪಗಡದಿನ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಬೆಂಬಲಿತ ರಮೀಜಾ ಗಂಡ ಶಾಮೀದಸಾಬ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಮರೇಶ ಅಧಿಕೃತವಾಗಿ ಘೋಷಣೆ ಮಾಡಿದರು.
ತಾಲೂಕಿನ ಪಗಡದಿನ್ನಿ ಗ್ರಾಮ ಪಂಚಾಯಿತಿ ಹಿಂದಿನ ಅಧ್ಯಕ್ಷರಾಗಿದ್ದ ತಸ್ಲೀಮಾ ತಿಪ್ಪನಟ್ಟಿ 24 ಏಪ್ರಿಲ್ 2022 ರಂದು ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆಯನ್ನು ದಿನಾಂಕ 30 ಮೇ 2022 ರಂದು ನಿಗದಿಪಡಿಸಲಾಗಿತ್ತು. ನಾಮಪತ್ರ ಸ್ವೀಕರಿಸುವ ಸಮಯ 10:00 ಗಂಟೆಯಿಂದ 11-00 ಗಂಟೆಯವರೆಗೆ , ನಾಮಪತ್ರ ಪರಿಶೀಲನೆ ಮಧ್ಯಾನ್ಹ 01:10 ರಿಂದ 01:20 ರವರೆಗೆ , ನಾಮಪತ್ರ ಹಿತೆಗೆದುಕೊಳ್ಳುವ ಸಮಯ ಮಧ್ಯಾನ್ಹ 01:20 ರಿಂದ 01:30 ರವರೆಗೆ, ಗುಪ್ತ ಮತದಾನ ಮಧ್ಯಾಹ್ನ : 1-30 ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಗೊತ್ತುಪಡಿಸಲಾಗಿತ್ತು, ನಮೀಜಾ ಅವರ ನಾಮಪತ್ರ ಹೊರತು ಪಡಿಸಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ನಮೀಜಾ ಗಂಡ ಶಾಮೀದಸಾಬ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ಪ್ರಕಟಿಸಿದರು.
ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಮೀಜಾ ಇವರನ್ನು ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ ಕಾಂಗ್ರೆಸ ಮುಖಂಡರಾದ ಚಿಟ್ಟೂರು ಶ್ರೀನಿವಾಸ, ಜಾಪರ್ ಜಾಹಗೀರದಾರ,ರಾಮಾರಡ್ಡಿ, ಶಿವಪ್ಪ, ಮಾಬುಸಾಬ ಸಾಹುಕಾರ, ದೊಡ್ಡನಗೌಡ, ಮರಿಬಸಪ್ಪ, ಗ್ರಾಮ ಪಂಚಾಯತ್ ಸದಸ್ಯರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಪಗಡದಿನ್ನಿ ಗ್ರಾಮ ಪಂಚಾಯಿತಿ ಒಟ್ಟು 25 ಸದಸ್ಯರನ್ನು ಹೊಂದಿದ್ದ ಪಂಚಾಯಿತಿ 18 ಸದಸ್ಯರು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳು ಇದ್ದಿದ್ದರಿಂದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೆ ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಅದನ್ನು ಒಮ್ಮತದಿಂದ, ಒಗ್ಗಟ್ಟಿನಿಂದ ಎಲ್ಲಾ ಸದಸ್ಯರು ಕೊಟ್ಟ ಮಾತಿನಂತೆ ನಡೆದುಕೊಂಡು ಬಂದಿದ್ದೀರಿ, ರೈತರ, ಕೂಲಿಕಾರರ, ಬಡವರ, ಸಂಕಷ್ಟಕ್ಕೆ ಸ್ಪಂದಿಸಿ ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಪ್ರಯತ್ನ ನಾವೆಲ್ಲಾ ಮಾಡೋಣ ಎಂದರು.
ನಂತರ ಮಾತನಾಡಿದ ಚಿಟ್ಟೂರು ಶ್ರೀನಿವಾಸ ಕಾಂಗ್ರೆಸ್ ಪಕ್ಷದ ಸದಸ್ಯರೆಲ್ಲರು ಒಗ್ಗಟ್ಟಿನಿಂದ ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಯವರನ್ನು ಗೆಲ್ಲಿಸಿ ಅವರನ್ನು ಮಂತ್ರಿಯನ್ನಾಗಿ ಮಾಡೋಣ ಎಂದರು.
ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮೀಣ ಪಿಎಸ್. ಐ. ಯರಿಯಪ್ಪ ಅವರ ಹೆಚ್ಚಿನ ಸಿಬ್ಬಂದಿಗಳೊಂದಿಗೆ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
