SSLC ಪರೀಕ್ಷೆಯಲ್ಲಿ,ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳು ಪಾಸ್.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಎಸ್ಎಸ್ಎಲ್ಸಿ ಎಲ್ಲಾವಿದ್ಯಾರ್ಥಿಗಳು ಪಾಸಾಗಿದ್ದು,ಶೇ100ರಷ್ಟು ಫಲಿತಾಂಶ ಲಭ್ಯವಾಗಿದೆ ಎಂದು ಇಲಾಖಾಧಿಕಾರಿ ತಿಳಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಕೂಡ್ಲಿಗಿ ವ್ಯಾಪ್ತಿಯಲ್ಲಿ ಬರುವ, ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದ 138ವಿದ್ಯಾರ್ಥಿಗಳು. 2022ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಾಜರಿದ್ದು, ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದಾರೆ ಮತ್ತು ಬಹುತೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದಿದ್ದಾರೆ. 59ವಿದ್ಯಾರ್ಥಿಗಳು ಡಿಸ್ಟೆಂಕ್ಷನ್,78ವಿದ್ಯಾರ್ಥಿಗಳು ಪ್ರಥಮ,ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
*ದಾಖಲೆ ಪ್ರಮಾಣದ ಅಂಕ ಪಡೆದವರು*- ವಿದ್ಯಾರ್ಥಿನಿ ಎನ್.ಹರ್ಷಿತಾ 621ಅಂಕಗಳನ್ನು, ವಿದ್ಯಾರ್ಥಿಗಳಾದ ಪಿ.ಅಂಬರೀಶ್ 616ಅಂಕಗಳನ್ನು, ಎಸ್.ಒ.ದೈವೇಂದ್ರ 604ಅಂಕಗಳನ್ನು ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿ ಸಾಧನೆ ಮಾಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜ್ ಆನಂದ ರೆಡ್ಡಿರವರು, ಸಾಧನೆ ಮಾಡಿದ ಹಾಗೂ ಪಾಸಾದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.ಈ ಸಂದರ್ಭದಲ್ಲಿ ಇಲಾಖೆಯ ಜಗದೀಶ ಮುಂತಾದವರು ಉಪಸ್ಥಿತರಿದ್ದರು.
—- —— —– —- — —- — —
*ಕೂಡ್ಲಿಗಿ:ಬಿಎಸ್ಎಮ್ 18ವಿದ್ಯಾರ್ಥಿಗಳು ಪ್ರಥಮ*- ಬಿಸಿಎಮ್ ಹಾಸ್ಟೆಲ್ ಒಟ್ಟು 18ವಿದ್ಯಾರ್ಥಿಗಳೆಲ್ಲರೂ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದು, ಟಿ.ರುದ್ರೇಶ,ಜೆ.ಚಿತ್ರಲಿಂಗ,ಜಿ.ದೊಡ್ಡಪ್ಪರವರು ತಲಾ 625ಅಂಕಗಳನ್ನು ಪಡೆದಿದ್ದಾರೆ. ಮೂವರು ವಿದ್ಯಾರ್ಥಿಗಳು 625ಅಂಕಗಳನ್ನು ಪಡೆದು ದಾಖಲು ಮಾಡಿದ್ದಾರೆ.ಈ ಮೂಲಕ ಅವರು ವಸತಿ ಶಾಲೆಗೆ ಹೆಸರನ್ನು ತಂದಿದ್ದಾರೆ, ಅದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಇಲಾಖಾಧಿಕಾರಿ ಪಂಪಾಪತಿ ತಿಳಿಸಿದ್ದಾರೆ. ಹಾಸ್ಟೆಲ್ ಮೇಲ್ವಿಚಾರಕರಾದ ಕುಮಾರಸ್ವಾಮಿ, ಸಿರಿಬಿ ಅಂಜಿನಪ್ಪ ಮುಂತಾವರಿದ್ದರು…


ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
