ಮೀಸಲಾತಿ ಕೊಡದಿದ್ದರೆ ಕಾನೂನು ಭಂಗ ಚಳುವಳಿ ಅನಿವಾರ್ಯ – ವೆಂಕೋಬ ನಾಯಕ…!!!

ಮೀಸಲಾತಿ ಕೊಡದಿದ್ದರೆ ಕಾನೂನು ಭಂಗ ಚಳುವಳಿ ಅನಿವಾರ್ಯ – ವೆಂಕೋಬ ನಾಯಕ.

ಸಿಂಧನೂರು : ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಳ ಮಾಡುತ್ತೇನೆಂದು ಬಿ.ಎಸ್. ಯಡಿಯೂರಪ್ಪ ಮಾತು ಕೊಟ್ಟು ತಪ್ಪಿದ್ದಾರೆ. ಈಗಿನ ಸಿಎಂ ಬೊಮ್ಮಾಯಿ ಈ ಬಗ್ಗೆ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಬೇಸತ್ತು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಮಹಾಸ್ವಾಮಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 100 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದಾಗ್ಯೂ ರಾಜ್ಯ ಸರ್ಕಾರ ನಿರ್ಲಕ್ಷಸಿದೆ. ಹೀಗೆಯೇ ಮುಂದುವರೆಸಿದರೆ ಕಾನೂನು ಭಂಗ ಚಳವಳಿ ಅನಿವಾರ್ಯ ಎಂದು ವಾಲ್ಮೀಕಿ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಯಂಕೋಬ ನಾಯಕ ಮಾತನಾಡಿದರು.

ಇಂದು ಪರಿಶಿಷ್ಟ ಜಾತಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಂಚಲನಾ ಕ್ರಿಯಾ ಸಮಿತಿ ಮಿನಿ ವಿಧಾನಸೌಧ ಕಚೇರಿಯ ಮುಂಭಾಗದಲ್ಲಿ ಬೃಹತ್‌ ಪ್ರತಿಭಟನಾ ಧರಣಿ ನಡೆಸಲಾಯಿತು.

ಎಸ್ಸಿ, ಎಸ್ಪಿ ಜನಾಂಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಸಾಕಾಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಪಕ್ಷಗಳು ಓಟು ಬ್ಯಾಂಕ್‌ಗಾಗಿ ಮಾತ್ರ ಬಳಸಿಕೊಳ್ಳುತ್ತಿವೆ. ಅನೇಕ ವರ್ಷಗಳಿಂದ ಮೀಸಲಾತಿ ಹೆಚ್ಚಳಕ್ಕಾಗಿ ನಡೆಸುತ್ತಿರುವ ಹೋರಾಟಗಳಿಗೆ ಸ್ಪಂದಿಸದಿರುವುದು ಬೇಸರ ತಂದಿದೆ.ಯಾವುದೇ ಹೋರಾಟ ಮಾಡದ, ಬೀದಿಗಿಳಿಯದ ಬ್ರಾಹ್ಮಣರಿಗೆ ಶೇ.10 ರಷ್ಟು ಮೀಸಲಾತಿ ನೀಡುವ ಮೂಲಕ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮಹಾದ್ರೋಹ ಬಗೆದಿದೆ. ಸರ್ಕಾರ ಎಸ್ಸಿ, ಎಸ್ಟಿ ವಿರೋಧಿ ಎಂಬುದಕ್ಕೆ ಇದು ನಿದರ್ಶನ. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ತಯಾರಿಸಿದ ಜಾತಿ ಜನಗಣತಿ ವರದಿಯನ್ನು ಬಿಜೆಪಿ ಸರ್ಕಾರ ಯಾಕೆ ಜಾರಿಗೊಳಿಸುತ್ತಿಲ್ಲ. ಒಂದು ವೇಳೆ ತಪ್ಪಾಗಿದ್ದರೆ ಮತ್ತೊಂದು ಬಾರಿ ಜಾತಿ ಗಣತಿ ಮಾಡಲಿ, ತಕ್ಷಣವೇ ಎಚ್ಚೆತ್ತುಕೊಂಡು ಮೀಸಲಾತಿ ಹೆಚ್ಚಳಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಒಗ್ಗಟ್ಟಾಗಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಮಾತನಾಡಿದರು.

ತಿಮ್ಮಯ್ಯನಾಯಕ ಮಾತನಾಡಿ ಎಸ್ಸಿ.ಎಸ್ಟಿ. ಸಮುದಾಯದ ಯುವ ಸಮೂಹ ಸಮಾಜ ಕಟ್ಟಬೇಕಾದರೆ ವಿದ್ಯಾಭ್ಯಾಸ ಮಾಡಬೇಕು. ಮೀಸಲಾತಿ ಕೊಡದಿದ್ದರೆ ವಿಧಾನಸೌದವನ್ನು ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಜಿ.ರಾಯಪ್ಪ ಮಾತನಾಡಿ ನಮಗೆ ದೊರಕುವ ಮೀಸಲಾತಿ ಸೌಲಭ್ಯ ಪಡೆಯುವ ಜೊತೆಗೆ ಯಾವುದೇ ಹೋರಾಟ ಮಾಡದ 3% ಇರುವ ಬ್ರಾಹ್ಮಣರಿಗೆ ನೀಡಿದ 10% ಮೀಸಲಾತಿ ತೆಗೆಯಲು ಎಲ್ಲಾ ಸಮುದಾಯದವರು ಒಂದುಗೂಡಿ ಹೋರಾಟ ಮಾಡಬೇಕಾಗಿದೆ ಎಂದರು.

ಮೀಸಲಾತಿ ಅಂದರೆ ಬಡತನ ನಿರ್ಮೂಲನೆ ಮಾಡುವ ಕಾರ್ಯಕ್ರಮವಲ್ಲ, ಅದು ಮೂಲಭೂತ ಹಕ್ಕು ಎಂದು ಸಂವಿಧಾನತ್ಮಕವಾಗಿ ಬಾಬಾ ಸಾಹೇಬ ಅಂಬೇಡ್ಕರ್ ಅವರು14.15.16.17. ಅನುಚ್ಛೇದಗಳಲ್ಲಿ ಮೂಲಭೂತ ಹಕ್ಕು ಎಂದು ಹೇಳಿದ್ದಾರೆ.ಮೀಸಲಾತಿ ಇಂದು ನಿನ್ನೆಯ ಪ್ರಶ್ನೆಯಲ್ಲ, ಶಾಹು ಮಹಾರಾಜರು 1902 ರಲ್ಲಿ 50% ಮೀಸಲಾತಿಯನ್ನು ಘೋಷಣೆ ಮಾಡಿದ್ದರು.ಈ ದೇಶದಲ್ಲಿಯೇ 2500 ವರ್ಷಗಳ ಕಾಲ ಎಸ್. ಸಿ. /ಎಸ್. ಟಿ. ಸಮೂದಾಯಗಳು ಮೀಸಲಾತಿ ಇಲ್ಲದೆ ಜೀವನ ನಡೆಸಿವೆ.ಆದರೆ ಇಂದು ಕೇಳುವ ಉದ್ದೇಶ ಬ್ರಾಹ್ಮಣ ಜಾತಿಯ ದ್ರೋಣಾಚಾರ್ಯ ಗುರುಗಳ ಸೋಗಿನಲ್ಲಿ ಏಕಲವ್ಯನ ಗುರು ದಕ್ಷಿಣೆ ನೆಪದಲ್ಲಿ ಜೀವನವನ್ನೇ ಹಾಳು ಮಾಡಿದ, ಇಂತಹ ಅನಾಹುತಗಳನ್ನು ತಪ್ಪಿಸಲು ಮೀಸಲಾತಿ ಅವಶ್ಯಕತೆ ಇದೆ ಎಂದು ಬಿ. ಎಸ್. ಪಿ. ಮುಖಂಡ ಹುಲುಗಪ್ಪ ಮಲ್ಕಾಪೂರು ಮಾತನಾಡಿದರು.

ಈ ಸಂದರ್ಭದಲ್ಲಿ ಎಂ ಗಂಗಾಧರ್ ತಂಡದವರಿಂದ ಮೀಸಲಾತಿ ಕೊಡದಿದ್ದರೆ ಸರ್ಕಾರ ಕೆಡವತೀವಿ ಎಂಬ ಕ್ರಾಂತಿಗೀತೆ ಹೋರಾಟಗಾರರಿಗೆ ಹುರುಪು ತುಂಬಿದರು.

ನಂತರ ಧರಣಿ ಸ್ಥಳಕ್ಕೆ ತಹಶೀಲ್ದಾರ್ ಮಂಜುನಾಥ ಭೋಗಾವತಿ ಬಂದು ಮನವಿ ಪತ್ರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಯದ್ದಲದೊಡ್ಡಿ ನಂಜಯಸ್ವಾಮಿ, ಗೋನವಾರ ಮಲ್ಲಯ್ಯತಾತ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಬಾಬುಗೌಡ ಬಾದರ್ಲಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ನಗರಸಭೆ ಸದಸ್ಯ ಕೆ.ರಾಜಶೇಖರ, ನದಿಮುಲ್ಲಾ, ಎಚ್.ಎನ್. ಬಡಿಗೇರ್, ರಾಮಣ್ಣ ಗೋನ್ವಾರ, ವೆಂಕಟೇಶ್ ರಾಗಲಪರ್ವಿ, ಆಶೋಕ ಉಮಲೂಟಿ, ಕರೇಗೌಡ ಕುರುಕುಂದಿ, ದೇವೇಂದ್ರಪ್ಪ ನಾಯಕ, ಹನುಮಂತಪ್ಪ ಮಲದಿನ್ನಿ, ಅಲ್ಲಮಪ್ರಭು ಪೂಜಾರಿ, ಮರಿಯಪ್ಪ ಜಾಲಿಹಾಳ, ಭೀಮೇಶ ಕವಿತಾಳ, ಹಂಸರಾಜ, ದೇವೇಂದಪ್ಪ, ಸುರೇಶ ಜಾಧವ್, ವೆಂಕಟೇಶ ಬಂಡಿ, ಮಹಾದೇವ ಧುಮತಿ, ಬಸವರಾಜ ಬಾದರ್ಲಿ, ಅಲಂಸಾಬ, ತಿಮ್ಮಣ್ಣ ರಾಮತ್ನಾಳ, ಡಾ.ಬಸವರಾಜ ಪಿ. ನಾಯಕ, ಅರುಣಕುಮಾರ, ಅನಿಲಕುಮಾರ ವೈ, ಲಕ್ಷಣ ಭೋವಿ, ಎಂ.ಕೆ.ಜಗ್ಗೇಶ, ನಿರುಪಾದಿ ಸಾಸಲಮರಿ, ಶರಣಬಸವ ಮಲ್ಲಾಪೂರು, ಇದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend