ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಎಂಬಿ ಅಯ್ಯನಹಳ್ಳಿ.
ಕೂಡ್ಲಿಗಿ:ಅನಾದಿ ಕಾಲದಿಂದಲೂ ಶಿಕ್ಷಣದ ಜತೆಗೆ ಸಂಸ್ಕಾರ ಹಾಗೂ ಸಂಸೃತಿಯನ್ನ ಕಲಿಸುವ ಗುರುತರ ಜವಾಬ್ದಾರಿಯನ್ನು ಮಠ,ಮಾನ್ಯಗಳು ನಡೆಸಿಕೊಂಡು ಬಂದಿವೆ ಎಂದು ಪತ್ರಕರ್ತ ಹಾಗೂ ಸಾಹಿತಿ ಹಿ.ಮ.ಬಸವರಾಜ್ ಹೇಳಿದರು.ತಾಲೂಕಿನ ಎಂ.ಬಿ.ಅಯ್ಯನಹಳ್ಳಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ವಿದ್ಯಾಲಯದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಏರ್ಪಡಿಸಿದ್ದ ದತ್ತಿ ಉಪನ್ಯಾಸಗಳ ಕಾರ್ಯಕ್ರಮದಲ್ಲಿ ದಾಸೋಹ ಮಠಗಳ ಪರಂಪರೆಯ ಕುರಿತು ಉಪನ್ಯಾಸ ನೀಡಿ ಮಾತಾನಾಡಿದರು.ಹಿಂದೆ ಗುರುಕುಲ ಪದ್ದತಿ ಶಿಕ್ಷಣದ ಕಾಲದಿಂದಲೂ ಅಕ್ಷರ,ಅನ್ನ,ಹಾಗೂ ವಸತಿ ನೀಡುವ ಜತೆಗೆ ಸಾಮಾಜಿಕ ಮೌಲ್ಯದ ಪಾಠಗಳನ್ನು ಭೋದಿಸಿ,ಸಮಾಜಕ್ಕೆ ಮಠಗಳು ತನ್ನದೆ ಆದ ಕೊಡುಗೆಗಳನ್ನ ನೀಡಿವೆ,ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ದಾಸೋಹ ಮಠಗಳು ಹಸಿದವರಿಗೆ,ದೀನರಿಗೆ ಅನ್ನ ನೀಡುವ ಮುಖೇನ ದಾಸೋಹದ ಮಹತ್ವವನ್ನು ಸಾರಿವೆ ಎಂದರು.ಜಾತಿ,ಮತ,ಪಂಥಗಳನ್ನು ಎಣಿಸದೆ ಸರ್ವಧರ್ಮೀಯರಿಗೂ ತ್ರಿವಿಧ ದಾಸೋಹವನ್ನ ಕಲ್ಪಿಸುತ್ತಿದ್ದವು ಎಂದು ತಿಳಿಸಿದರು.ಆದರೆ ಇತ್ತಿಚಿಗೆ ಮಠಗಳು ತಮ್ಮ ಬದ್ದತೆಯನ್ನೆ ಮರೆತಿರುವುದು ವಿಷಾದದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.ಇದೇ ಸಂಧರ್ಭದಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಮಾತಾನಾಡಿದ ಶಿಕ್ಷಕಿ ಸಿದ್ದಗಂಗಮ್ಮ ಮಾತಾನಾಡಿ,ಭವಿಷ್ಯದ ಕುಡಿಗಳು ಪುಸ್ತಕದ ಹಾಗೂ ಸಾಹಿತ್ಯದ ಅಭಿರುಚಿ ಇಲ್ಲದೆ ಮೊಬೈಲ್ ಸಂಸೃತಿಗೆ ಬಲಿಯಾಗಿರುವುದು ಖೇದಕರ ಸಂಗತಿ ಎಂದರು.ಇಂದಿನ ಮಕ್ಕಳು ಬರೀ ಪಠ್ಯದ ಪುಸ್ತಕಗಳಿಗೆ ಸೀಮಿತರಾಗಿದ್ದು,ಸಾಹಿತ್ಯ ಸೇರಿದಂತೆ ಇತರೆ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ,ಅದರಂತೆ ಪೋಷಕರು ಸಹ ತಮ್ಮ ಮಕ್ಕಳನ್ನ ಪರೀಕ್ಷೆಯಲ್ಲಿ ಅಂಕಗಳಿಗೆ ಮಾತ್ರ ಸೀಮಿತಗೊಳಿಸಿದ್ದು,ಸಾಹಿತ್ಯ ಹಾಗೂ ಸಾಮನ್ಯ ಜ್ಞಾನದ ಶಿಕ್ಷಣವನ್ನು ಕೊಡಸದಿರುವುದು ವಿಷಾದನೀಯ ಎಂದರು.ಇದೇ ಸಂಧರ್ಭದಲ್ಲಿ ಸಾವಯವ ಕೃಷಿ ಹಾಗೂ ತೋಟಗಾರಿಕೆ ವಿಷಯವಾಗಿ ಸಾವಯವ ಕೃಷಿಕ ಎಂ.ಬಸವರಾಜ್ ಹಾಗೂ ಗಮಕ ಸಾಹಿತ್ಯದ ಕುರಿತು ಶಿಕ್ಷಕಿ ಲಕ್ಷ್ಮಿದೇವಿ ಕರಣಂ ಹಾಗೂ ಕೂಡ್ಲಿಗಿ ತಾಲೂಕಿನ ಕವಿಗಳ ಕುರಿತು ಶಿಕ್ಷಕ ಎಸ್.ವಿ.ಸಿದ್ದರಾದ್ಯ ಉಪನ್ಯಾಸ ನೀಡಿದರು.ನಂತರ ದತ್ತಿ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಕಸಾಪ ಹಿರಿಯ ಸದಸ್ಯ ಎಚ್.ಚಿದಾನಂದಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡುದರು.ಕಸಾಪ ಅಧ್ಯಕ್ಷ ವೀರೇಶ್ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಅಶ್ವಮೇಧ ಗ್ರೂಪ್ಸ್ ನ ಮಾಲೀಕ ಟಿ.ಜಿ.ಮಲ್ಲಿಕಾರ್ಜುನ ಗೌಡ,ನಿವೃತ್ತ ಶಿಕ್ಷಕ ಚಂದ್ರಯ್ಯ,ಕನ್ನಡ ಜಾನಪದ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್, ಕಸಾಪ ಕಾರ್ಯದರ್ಶಿ ನಂದಿ ಬಸವರಾಜ್, ಸಿದ್ದಗಂಗಮ್ಮ, ಎಂ ಬಸವರಾಜ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಹಿ. ಮಾ.ಬಸವರಾಜ್. ಹೊಸಮನೆ ಚಿದಾನಂದಪ್ಪ. ಲಕ್ಷ್ಮೀದೇವಿ ಕರಣಂ. ಇವರುಗಳನ್ನು ಸನ್ಮಾನಿಸಲಾಯಿತು…

ವರದಿ. ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
