ಯುವಕರಿಗೆ ಮತದಾನದ ಹಕ್ಕನ್ನು 18 ವರ್ಷ ಕ್ಕೆ ಇಳಿಸಿದ ವ್ಯಕ್ತಿ ರಾಜೀವ್ ಗಾಂಧಿ – ಬಸನಗೌಡ ಬಾದರ್ಲಿ.
ಸಿಂಧನೂರು : ಇಂದು ತಾಲೂಕು ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಿಗಳಾದ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಪುಷ್ಪನಮನ ಸಲ್ಲಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಅವರು, ರಾಜೀವಗಾಂಧಿ ಯವರ ಕೊಡುಗೆ ಈ ದೇಶಕ್ಕೆ ಅಪಾರವಾಗಿದೆ. ಯುವಕರಿಗೆ ಮತದಾನದ ಹಕ್ಕನ್ನು 18 ವರ್ಷ ಕ್ಕೆ ಇಳಿಸಿ ಈ ದೇಶದಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ ಎಂದು ರಾಜೀವ್ ಗಾಂಧಿ ಅವರು ಹೇಳಿದ್ದರು. ಹಾಗೇನೇ ದೂರಸಂಪರ್ಕ ಕ್ಷೇತ್ರದಲ್ಲಿ ಪ್ರಪಂಚವೇ ಭಾರತದತ್ತ ನೋಡುವಂತಹ ಕ್ರಾಂತಿ ಮಾಡಿದರು, ವಿಕೇಂದ್ರಿಕರಣ ವ್ಯವಸ್ಥೆಯ ಮೂಲಕ ಎಲ್ಲಾ ವರ್ಗದ ಜನರನ್ನು ರಾಜಕೀಯ ಮೂಲವಾಗಿಸುವ ಮೂಲಕ ಅವರ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ, ಗಾಂಧಿ ಕುಟುಂಬವು ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಕುಟುಂಬವಾಗಿದೆ ಅಂತಹ ಮಹಾನ್ ನಾಯಕನನ್ನು ಸ್ಮರಿಸುವುದು ಭಾರತೀಯರೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ್ ನಾಯಕ, ಖಾಜಾಹುಸೇನ್ ರೌಡ್ಕುಂದ, ಅಮರೇಶ್ ಗಿರಿ ಜಾಲಿ, ಚನ್ನಬಸವ ಕೋಟೆ, ಯೂಸುಫ್ ಎತ್ಮಾರಿ, ಭರತ್, ಖಾಜಾಹುಸೇನ್ ಬಡಿಬೇಸ್, ಜಾವೀದ್ ಗಂಗಾನಗರ, ನಾಗರಾಜ್ ಮಾಡಶಿರವಾರ, ನಿರುಪಾದಿ ಕಿಸಾನ್ ಸೆಲ್, ರಾಜಾ ಹುಸೇನ್ ಗಾಂಧಿನಗರ, ವೀರೇಶ್ ಉಪ್ಪಲದೊಡ್ಡಿ, ಬಸವರಾಜ್ ಕುಪ್ಪೆಗುಡ್ಡ, ಡೈಮಂಡ್ ಮುದಿಯಾ, ಮಸ್ತಾನ್ ರಫಿ ಚಕ್ಲಿ ಗಲ್ಲಿ ಲಿಂಗಪ್ಪ ಬಸವರಾಜ ಗಿಣಿವಾರ ಶರೀಫ್ ತಿಪ್ಪನಹಟ್ಟಿ ಅಮೀನ್ ಶ್ಯಾಮೀದ್, ಮಹಾನಂದಿ, ಮಂಜು ಗಿರಿಜಾಲಿ, ಅನ್ನಪೂರ್ಣ, ಇತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
