ವಿಜಯ ನಗರ ಜಿಲ್ಲಾ ಹರಪನಹಳ್ಳಿ ತಾಲ್ಲೂಕಿನಲ್ಲಿ
ಇಂದು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ ಎಸ್ ಯುಐ) (NSUI)ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ ಅವರ ವಿರುದ್ಧ ಪ್ರತಿಭಟನೆ……….
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟದ ಎಲ್ಲ ಸಚಿವರು ವಹಿಸಿಕೊಂಡು ಮಾತಾಡಿದರೂ ಉನ್ನತ ಶಿಕ್ಷಣ ಸಚಿವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ ಎಸ್ ಯು ಐ) (NSUI) ಸದಸ್ಯರು,
ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗುತ್ತಿರುವ ಕೆಲವು ಪೊಲೀಸರನ್ನು ಕಂಡುದಿಗಿಲು ಬೀಳಬೇಡಿ. ಅಸಲಿಗೆ ಅವರು ಅಸಲಿ ಪೊಲೀಸರಲ್ಲ, ಪೊಲೀಸರ ವೇಷದಲ್ಲಿರುವ ಆದರೆ ಅಸಲಿ ಪೊಲೀಸರು ಅಲ್ಲಿಗೆ ಬಂದಾಗ ಅಸಲಿ ಯಾರು ನಕಲಿ ಯಾರು ಅಂತ ಗೊಂದಲವಾಗೋದು ಮಾತ್ರ ಸತ್ಯ.
ಪ್ರತಿಭಟನೆಕಾರರು ನೇರವಾಗಿ ಅಶ್ವಥ್ ನಾರಾಯಣ ಅವರ ವಿರುದ್ಧವೇ ಘೋಷಣೆ ಕೂಗುತ್ತಿದ್ದಾರೆ.
ಭ್ರಷ್ಟಾಚಾರಿ ನಾರಾಯಣಗೆ ಧಿಕ್ಕಾರ, ಭ್ರಷ್ಟಾಚಾರಿ ನಾರಾಯಣರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ, ಶೇಮ್ ಶೇಮ್ ನಾರಾಯಣ, 40 ಪರ್ಸೆಂಟ್ ಸರ್ಕಾರಕ್ಕೆ ಧಿಕ್ಕಾರ, ನಮಗೆ ನ್ಯಾಯ ಬೇಕು ಎಂಬ ಘೋಷಣೆಗಳು ನಿಮ್ಮ ಕಿವಿಗೆ ಬೀಳುತ್ತವೆ.
ಸಚಿವ ಕೆ ಎಸ್ ಈಶ್ವರಪ್ಪನವರ ವಿರುದ್ಧ ಮಾಡಿದಂತೆ ಸಚಿವ ಅಶ್ವಥ್ ನಾರಾಯಣ ವಿರುದ್ಧ ನೇರವಾಗಿ ಅರೋಪ ಹೊರಿಸುತ್ತಿಲ್ಲ.
ಅಶ್ವಥ್ ಗೌಡ ಮತ್ತು ನಾಗೇಶ ಗೌಡ ಹೆಸರಿನ ಸಚಿವರ ಸಂಬಂಧಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಅಂತ ಹೇಳಿದ್ದಾರೆ…
ರಾಜ್ಯಾಧ್ಯಕ್ಷರು ಕೀರ್ತಿ ಗಣೇಶ ರವರು ಮತ್ತು ಎನ್ ಎಸ್ ಯು ಐ ಜಿಲ್ಲಾಧ್ಯಕ್ಷರು ಕೆ ಆರ್ ಹುಸೇನಪ್ಪ ರವರ ಆದೇಶ ಮೇರೆಗೆ ಪಿಎಸ್ಐ ಹುದ್ದೆಗಳ ನೇಮಕದ ಅಕ್ರಮದಲ್ಲಿ ಮತ್ತು ಬಡ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ನಲ್ಲೂ ಖರೀದಿಯಲ್ಲಿ 100ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ,
ಇದರಲ್ಲಿ ಉನ್ನತ ಶಿಕ್ಷಣ ಸಚಿವರು ಡಾ” ಸಿ ಎನ್ ಅಶ್ವಥ್ ನಾರಾಯಣ್ ಶಾಮೀಲಾಗಿದ್ದಾರೆ, ಅದಕ್ಕೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ರವರೆ ಡಾ” ಸಿ ಎನ್ ಅಶ್ವಥ್ ನಾರಾಯಣ್ ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಬಳ್ಳಾರಿ ಮತ್ತು ನಡೆಸಲಾಯಿತು… ಈ ಸಂದರ್ಭದಲ್ಲಿ NSUI ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ಶ್ರೀಕಾಂತ್ ಯಾದವ್,
NSUI ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಭೋವಿ ಶಿವರಾಜ್, ಹರ್ಷ, NSUI ತಾಲ್ಲೂಕು ಅಧ್ಯಕ್ಷರು ಹರೀಶ್ ನಾಯ್ಕ, NSUI ತಾಲ್ಲೂಕು ಕಾರ್ಯದರ್ಶಿ ಮತ್ತು ಸದಸ್ಯರಾದ ಮಂಜುನಾಥ, ವೆಂಕಟೇಶ, ತಿಮ್ಮನಾಯ್ಕ,
ಗುರು,ಮನು,ಪ್ರಕಾಶ,
ಕುಮಾರ್, ಮತ್ತು ಇತರರು……

ವರದಿ. ಪ್ರತಾಪ್. ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
