ಸಿಂಧನೂರು : ಪರಮಪೂಜ್ಯ ಶ್ರೀ ರುದ್ರಮುನಿ ಮಹಾ ಸ್ವಾಮಿ ಗಳವರ ಕಾಲಜ್ಞಾನ ಮಠದಿಂದ ಇದೇ ಮೇ 6ರಂದು ನಡೆಯುವ ಜಾತ್ರಾ ಮಹೋತ್ಸವ ಸುಕ್ಷೇತ್ರ ಬೇಡರ ಕಾರಲಕುಂಟಿ ಪೀಠಾಧ್ಯಕ್ಷರು ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಈ ದಿನ ವನಸಿರಿ ಕಾರ್ಯಾಲಯಕ್ಕೆ ಬಂದು ಆಶೀರ್ವಾದ ನೀಡಿದರು.ಜಾತ್ರಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಪರಿಸರ ಮತ್ತು ಪರಿಸರದಲ್ಲಿ ವಾಸಿಸುತ್ತಿರುವುದು ಪಕ್ಷಿಗಳಿಗೆ ನೀರುಳಿಸುವ ಕಾರ್ಯ ನೋಡಿ “ಕದಂಬ ವನಸಿರಿ ಕಾಯಕ ಯೋಗಿ”ಪ್ರಶಸ್ತಿ ನೀಡಿದ್ದಾರೆ. ಈ ಪ್ರಶಸ್ತಿ ಪ್ರತಿ ಒಬ್ಬ ವನಸಿರಿ ತಂಡಕ್ಕೆ ಮತ್ತು ಸರ್ವ ಪರಿಸರ ಪ್ರೇಮಿಗಳಿಗೆ ದೊರೆತಿದೆ. ಪ್ರತಿಯೊಬ್ಬರ ಸಹಕಾರ ಸಹಾಯ ಹೀಗೆ ಇರಲಿ ಪೂಜ್ಯರ ಜಾತ್ರಾ ಮಹೋತ್ಸದಲ್ಲಿ ನೀಡುವ ಪ್ರಶಸ್ತಿ ಇನ್ನಷ್ಟು ಹೆಚ್ಚಿನ ಜವಾಬ್ದಾರಿ ನಮಗೆ ನೀಡಿದ್ದಾರೆ. ಆ ಜವಾಬ್ದಾರಿಯನ್ನು ನಾನು ನಿಷ್ಠೆಯಿಂದ ಪರಿಸರಕ್ಕಾಗಿ ಹಗಲಿರುಳು ಶ್ರಮಿಸುತ್ತೇನೆ. ಪರಿಸರವೇ ನನ್ನ ಉಸಿರು ಪರಿಸರ ಸಂರಕ್ಷಣೆ ಉಸಿರು ಎಂದು ಅಮರೇಗೌಡ ಮಲ್ಲಾಪೂರು ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
