ದೇವದಾಸಿ ಪದ್ಧತಿಯನ್ನು ಸಮಾಜದಿಂದ ತೊಡೆದು ಹಾಕಬೇಕು- ಎಂಪಿ ವೀಣಾ ಮಹಾಂತೇಶ
ಹರಪನಹಳ್ಳಿ: ಅನಿಷ್ಟ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ಸಮಾಜದಿಂದ ತೊಡೆದು ಹಾಕುವ ನಿಟ್ಟಿನಲ್ಲಿ ದೇವದಾಸಿ ಮಹಿಳೆಯರಿಗೆ,ಮಕ್ಕಳಿಗೆ ಪುನರ್ವಸತಿ ಕಲ್ಪಿಸಬೇಕು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ದೇವದಾಸಿ ಕುಟುಂಬಗಳಿಗೆ ಆಥಿ೯ಕ ಹಾಗೂ ಸಾಮಾಜಿಕ ಭದ್ರತೆ ನೀಡಬೇಕು ಮತ್ತು ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಬೇಕು. ದೇವದಾಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ಅವರು ಹೇಳಿದರು.

ತಾಲೂಕಿನ ಸಮತಾ ರೆಸಾರ್ಟ್ ನಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನೆ ಸಂಘ ಮತ್ತು ಕನಾ೯ಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಹಮ್ಮಿಕೊಂಡಿದ ಮೂರು ದಿನಗಳ ದೇವದಾಸಿ ಮಕ್ಕಳ ರಾಜ್ಯಮಟ್ಟದ ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಶ್ರೀಮತಿ ಎಂಪಿ ವೀಣಾ ಮಹಾಂತೇಶ ಉದ್ಘಾಟಿಸಿ ಮಾತನಾಡಿದರು .

ಈ ಸಂದರ್ಭದಲ್ಲಿ ಶ್ರೀಮತಿ ಕೆ ನೀಲಾ ಬಂಡಾಯ ಸಾಹಿತಿಗಳು, ಶ್ರೀಮತಿ ಟಿವಿ ರೇಣುಕಮ್ಮ ಅಧ್ಯಕ್ಷರು ಕ.ರಾ.ದೇ.ಮ.ವಿ.ಸಂ,ಕೋಡಿಹಳ್ಳಿ ಭೀಮಣ್ಣ ಬುಡಕಟ್ಟು ಸಮುದಾಯದ ರಾಜ್ಯಾಧ್ಯಕ್ಷರು ಹರಪನಹಳ್ಳಿ,ಭಾಸ್ಕರ ರೆಡ್ಡಿ ಜಿಲ್ಲಾಧ್ಯಕ್ಷರು ಸಿಐಟಿಯು ವಿಜಯನಗರ, ಶ್ರೀಮತಿ ಬಿ ಮಾಳಮ್ಮ ಪ್ರಧಾನ ಕಾರ್ಯದರ್ಶಿಗಳು ಕ.ರಾ.ದೇ.ಮ.ವಿ.ಸಂ. ಹಾಗೂ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
