ರಾಜ್ಯ ಮಟ್ಟದ “ಮಾಧ್ಯಮ ಪ್ರಭಾ” ಪ್ರಶಸ್ತಿಗೆ ಆಯ್ಕೆಯಾದ ಲಕ್ಷ್ಮಣ್ ಕುರಕುಂದಿ…!!!

ರಾಜ್ಯ ಮಟ್ಟದ “ಮಾಧ್ಯಮ ಪ್ರಭಾ” ಪ್ರಶಸ್ತಿಗೆ ಆಯ್ಕೆಯಾದ ಲಕ್ಷ್ಮಣ್ ಕುರಕುಂದಿ.

ಸಿಂಧನೂರ : ತಾಲೂಕಿನ ಶ್ರೀ ಮಠ ಸೇವಾ ಟ್ರಸ್ಟ್(ರಿ) ಹರಟೇನೂರು ರವರು ಎಡೆಮಾಡಿಕೊಡುವ ಮಾಧ್ಯಮ ಪ್ರಭಾ ಪ್ರಶಸ್ತಿಗೆ ರಾಯಚೂರು ಧ್ವನಿ ಪತ್ರಿಕೆಯ ತಾಲೂಕು ವರದಿಗಾರ ಲಕ್ಷ್ಮಣ ಕುರಕುಂದಿ ಇವರನ್ನು ಆಯ್ಕೆ ಮಾಡಲಾಗಿದೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಸಕ್ರಿಯವಾಗಿ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇವರು ಸಾಮಾಜಿಕ ಕಳಕಳಿಯ ಕ್ರಿಯೆಗೆ ಮುನ್ನುಡಿ ಬರೆದಿದ್ದು ಜನಪರ ಕಾರ್ಯಗಳನ್ನು ಮಾಡುತ್ತಾ ಉತ್ತಮ ಬರವಣಿಗೆಗಳನ್ನು ಬರೆಯುತ್ತಾ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ನಿಷ್ಠುರ ಬರಹಗಳಿಂದ ಸರಕಾರದ ಮತ್ತು ತಾಲೂಕು ಆಡಳಿತದ ಕಣ್ಣು ತೆರೆಸುವ ಕೆಲಸವನ್ನು ಮಾಡಿದ್ದಾರೆ. ಇವರ ಸೇವೆಗೆ ಮೆಚ್ಚಿ ಕಾರುಣ್ಯ ನೆಲೆ ವೃದ್ಧಾಶ್ರಮ ,ವಯಸ್ಕರ ಬುದ್ದಿ ಮಾಂದ್ಯರ ಸೇವಾ ನೆಲೆ ಆಶ್ರಮ ದವರು ಪ್ರಸಕ್ತ ಸಾಲಿನ ಶ್ರೇಷ್ಠ ರಾಜ್ಯಪ್ರಶಸ್ತಿ “ಮಾಧ್ಯಮ ಪ್ರಭಾ” ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸಂತಸದ ಸಂಗತಿ ಆಗಿದೆ.ಇವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ವೃದ್ಧಾಶ್ರಮದ ಆಡಳಿತಾಧಿಕಾರಿಗಳು ಮತ್ತು ಸರ್ವ ಸದಸ್ಯರು ಆಶಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend