ಹೂವಿನ ಹಡಗಲಿ
ಅಕ್ಕಮಹಾದೇವಿ ಜಯಂತಿ
ಹೂವಿನ ಹಡಗಲಿ: ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿ ವಚನಗಳು ಇಂದಿಗೂ ಪ್ರಸ್ತುತ ಎನಿಸುತ್ತದೆ ಎಂದು
ರಂಗಭಾರತಿ ಅಧ್ಯಕ್ಷೆ
ಎಂ ಪಿ ಸುಮಾ ಹೇಳಿದರು.
ಪಟ್ಟಣದ ಮುಂಡವಾಡ ಉಮೇಶ್ ಅವರ ಆಯಿಲ್ ಮಿಲ್ ನಲ್ಲಿ ಬಣಜಿಗ ಸಮಾಜದ ಮಹಿಳಾ ಘಟಕ ಶನಿವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಚನಗಳ ಮೂಲಕ ಸಮಾನತೆ ಸಮಾಜಮುಖಿ ಚಿಂತನೆ ವಿಶ್ವಕ್ಕೆ ಸಾರಿದ ಅಕ್ಕಮಹಾದೇವಿ ಅವರ ಆದರ್ಶಗಳನ್ನು ಮಹಿಳೆಯರು ಅನುಸರಿಸಿ
ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಉಪನ್ಯಾಸಕಿ ಶ್ರೀಲತಾ
ಮಹಿಳೆಯರಿಗೆ ಅಕ್ಕಮಹಾದೇವಿ ಮಾದರಿ.
ವಚನಗಳ ಸಾರ ಅರಿಯಲು ಎಲ್ಲಾ ವಚನಕಾರರ ವಚನಗಳನ್ನು
ಓದಿ ಮಕ್ಕಳಲ್ಲಿ ವಿಚಾರ ಮೂಡಿಸಬೇಕು ಎಂದರು.
ಉಪನ್ಯಾಸಕಿ ಡಾ ಶೈಲಜಾ ಪವಾಡ ಶೆಟ್ರು ಮಾತನಾಡಿ
ಅಕ್ಕಮಹಾದೇವಿ ಅವರು
ಅಧಿಕಾರ ಸಂಪತ್ತು ವೈಭವ ಆಡಂಬರ ಭೋಗ ಜೀವನ ಸಂಪೂರ್ಣವಾಗಿ ತಿರಸ್ಕರಿಸಿ
ಬಂಧನಗಳಿಂದ ಬಿಡುಗಡೆ ಪಡೆದು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆತು ಮುಕ್ತಿ ಹೊಂದಿದಳು ಎಂದು ತಿಳಿಸಿದರು.
ಬಣಜಿಗ ಸಮಾಜದ ಸಂಸ್ಥಾಪಕ ಅಧ್ಯಕ್ಷ ಡಾ ಜಂಬಣ್ಣ ಯಲಗಚ್ಚಿನ
ತಾಲೂಕು ಘಟಕದ ಅಧ್ಯಕ್ಷ
ಉಮೇಶ್ ಮುಂಡವಾಡ
ಮಹಿಳಾ ಘಟಕದ ಅಧ್ಯಕ್ಷೆ
ರಾಜೇಶ್ವರಿ ಗದಗ ಉಪಸ್ಥಿತರಿದ್ದರು.
ಸವಿತಾ ಅಂಗಡಿ ಸ್ವಾಗತಿಸಿದರು.
ಅರುಣಾ ಸೊಪ್ಪಿನ
ಪ್ರಾರ್ಥಿಸಿದರು.
ಮುಂಡವಾಡ ಶ್ವೇತಾ
ವಂದಿಸಿದರು.
ಕುಂಬಾರಿ ಸವಿತಾ ನಿರೂಪಿಸಿದರು…

ವರದಿ. ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
