ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಜೇವರ್ಗಿ ತಾಲೂಕಿನ ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಯಿತು…!!!ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಜೇವರ್ಗಿ ತಾಲೂಕಿನ ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಯಿತು.

ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಜೇವರ್ಗಿ ತಾಲೂಕಿನ ತಹಶೀಲ್ದಾರರಿಗೆ ಮನವಿ ಪತ್ರ ನೀಡಲಾಯಿತು.

ಜೇವರ್ಗಿ ತಾಲೂಕಿನಲ್ಲಿ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಬೇಡ ಜಂಗಮ ಜನಾಂಗದವರಿಗೆ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಎಂ ಬಿ ಕಳ್ಳಿ ಮಠ ಕಾರ್ಯದರ್ಶಿಗಳು ಕಲ್ಬುರ್ಗಿ ಇವರ ಮುಖಾಂತರ ಜೇವರ್ಗಿ ದಂಡಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಯಿತು.

ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆಯ ಅಡಿಯಲ್ಲಿ ಕಲ್ಬುರ್ಗಿ ಕಲಬುರಗಿ ಜಿಲ್ಲೆಯ ಕಾರ್ಯದರ್ಶಿಗಳ ಮೂಲಕ ಪತ್ರದ ಮುಖಾಂತರ ಮನವಿ ಸಲ್ಲಿಸಲಾಯಿತು ಹಾಗೂ ಪ್ರವೀಣಕುಮಾರ್ ಕುಂಟೋಜಿ ಮಠ.
ಜೇವರ್ಗಿ ತಾಲೂಕಿನ ಹೈದರಾಬಾದ್ ಕರ್ನಾಟಕದ ಬೇಡಜಂಗಮ ಸಮಾಜ ಸಂಸ್ಥೆ ಅಧ್ಯಕ್ಷರು ಹಾಗೂ ಶರಣಯ್ಯ ಕುಂಟೋಜಿ ಮಠ. ಕಾರ್ಯದರ್ಶಿಗಳು ಜೇವರ್ಗಿ ತಾಲೂಕಿನ ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ಹಾಗೂ ಸಿದ್ದಬಸಯ್ಯ ಸ್ಥಾವರ ಮಠ. ಹಾಗೂ ಸೋಮಶೇಖರಯ್ಯ ಮಳಿಮಠ ಗುಂಡಯ್ಯ ಸ್ವಾಮಿ ಜವರ್ಗಿ ಡಾಕ್ಟರ್ ಪಿ ಎಂ ಮಠ ಡಾಕ್ಟರ್ ಮಹಾಂತೇಶ್ ಮಠ ಮತ್ತು ಉಪಸ್ಥಿತರಿದ್ದರು.
ದಿನಾಂಕ 04-03-2022 ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ವಾಸಿಸುವ ಬೇಡ ಜಂಗಮ ಸಮುದಾಯದವರಿಗೆ ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆಗಳು, ನಿರ್ದೇಶನಗಳನ್ನುಹಾಗೂ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಆದೇಶವನ್ನು ಪರಿಗಣಿಸಿ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿತರಿಸಲು ಜೇವರ್ಗಿ ಗ್ರೇಡ್ -2 ತಹಸೀಲ್ದಾರರವರಿಗೆ ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ( ರಿ)ಕಲಬುರಗಿಯ ಪ್ರಧಾನ ಕಚೇರಿಯ ಎಂ.ಬಿ. ಕಳ್ಳಿಮಠ ಪ್ರಧಾನ ಕಾರ್ಯದರ್ಶಿಗಳ ನೇತ್ರತ್ವದಲ್ಲಿ ಜೊತೆಗೆ ಜೇವರ್ಗಿ ತಾಲ್ಲೂಕಿನ ಬೇಡ ಜಂಗಮ ಸಮಾಜ ಬಾಂಧವರಾದ ಪ್ರವೀಣ್ ಕುಮಾರ್ ಕುಂಟೋಜಿ ಮಠ ,ಈರಯ್ಯ ಹಿರೇಮಠ,ಡಾಕ್ಟರ್ ಪಿ .ಎಂ.ಮಠ ,ಬಸಯ್ಯ ಸ್ವಾಮಿ ,ಪಂಚಾಕ್ಷರಿ ಮಠ ,ವೀರಯ್ಯ ಚಿಕ್ಕಮಠ ,I.S.ಹಿರೇಮಠ ,S.S.ಗೊಂಬಿ ಮಠ ,ಶಿವಾನಂದ್ ಘಂಟಿಮಠ ,ಚನ್ನಬಸಯ್ಯ ಸ್ಥಾವರಮಠ ,ಈರಯ್ಯ ಘಂಟಿಮಠ,ಮಡಿವಾಳಯ್ಯ ಕಲ್ಲಮಠ ,ಮಹಾಂತಯ್ಯ ಮಾವನೂರ ,ಕರಣಯ್ಯಸ್ವಾಮಿ ಕೆಲ್ಲೂರ,ಷಣ್ಮುಖಯ್ಯ ಸ್ಥಾವರಮಠ , ಪ್ರಭುಲಿಂಗಯ್ಯ ಗಣಾಚಾರಿ ,ಮಲ್ಲಯ್ಯ ಸ್ವಾಮಿ ಹೇರೂರ್ , C.B.ಕಮರಿ ಮಠ ,ಆನಂದ್ ಘಂಟಿಮಠ,ಸಿದ್ದಬಸ್ಸಯ್ಯ ಸ್ವಾಮಿ ಸ್ಥಾವರಮಠ ರವರು ಮನವಿ ಪತ್ರ ಸಲ್ಲಿಸುವ ಸಮಯದಲ್ಲಿ ಹಾಜರಿದ್ದರು .ಅಲ್ಲದೆ ಸುತ್ತೋಲೆಗಳು , ನಿರ್ದೇಶನಗ ಳು ಹಾಗೂ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಆದೇಶವನ್ನುನಮ್ಮ ಸಮಾಜ ಬಾಂಧವರು ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣಪತ್ರ ಸಲುವಾಗಿ ಅರ್ಜಿ ಸಲ್ಲಿಸಿದಾಗ ಮೇಲಿನ ಆದೇಶಗಳನ್ನು ಸ್ಥಳ ತನಿಖೆಯಲ್ಲಿ ಪರಿಗಣಿಸಲು ತಾವುಗಳು ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅಧಿಕೃತ ಜ್ಞಾಪನ ಪತ್ರ ಹೊರಡಿಸಿ.ಸದರಿ ಜ್ಞಾಪನ ಪತ್ರ ವನ್ನು ಸಮಾಜಕ್ಕೆ ಒದಗಿಸಲು ಕೋರಲಾಯಿತು..

ವರದಿ. ಬಸವರಾಜ್ ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend