ಬನಹಟ್ಟಿ ನಗರದಲ್ಲಿ ಹರ್ಷನ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಪ್ರತಿಭಟನೆ
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ಶಿವಮೊಗ್ಗದಲ್ಲಿ ಹತ್ಯಗಿಡಾದ ಹಿಂದೂ ಕಾರ್ಯಕರ್ತ ಹರ್ಷನ ಆತ್ಮಕ್ಕೆ ಮೊಂಬತ್ತಿ ಬೆಳಗಿಸಿ ಮೌನಾಚರನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ದೇಶ ವಿರೋಧಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ತೀವ್ರವಾಗಿ ಖಂಡನೆ ಮಾಡಿ ಪ್ರತಿಭಟಿಸಿ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು
ಹರ್ಷನ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಹೇಳಿ ಬನಹಟ್ಟಿ ನಗರದಲ್ಲಿ ಹಿಜಾಬ ಮತ್ತು ಕೇಸರಿ ವಿವಾದದ ನಡುವೆ ಶಿಕ್ಷಕರ ಮೇಲೆ ಆದ ಹಲ್ಲೆಯನ್ನು
ಖಂಡಿಸಿ ಹಲ್ಲೆ ಮಾಡಿದ ಎಲ್ಲ ದುಷ್ಕರ್ಮಿಗಳನ್ನು ತಕ್ಷಣವೆ ಬಂದಿಸುವಂತೆ ಪೋಲೀಸ
ಇಲಾಖೆಯನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು, ಮುಖಂಡರು, ಮಹಿಳಾ ಕಾರ್ಯಕರ್ತರು ಉಪಸ್ಥತಿಯಲ್ಲಿದ್ದರು.

ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
