ಕಲಿಕೆ ನಿರಂತರವಾಗಿ ಸಾಗಿದಾಗ ಮಾತ್ರ ಉದ್ಯೋಗವನ್ನು ಪಡೆಯಲು ಸಾದ್ಯ -ಮಲ್ಲಯ್ಯ ಸಾಲಗುಂದ
ಸಿಂಧನೂರು :-ಉದ್ಯೋಗವನ್ನು ಪಡೆಯಲು ನಿರಂತರವಾಗಿ ಅಭ್ಯಾಸವನ್ನು ಮಾಡುವದರ ಜೊತೆಗೆ ಪ್ರಚಲಿತ ಘಟನೆಗಳ ಬಗ್ಗೆ ಸಹವಿಸ್ತಾರವಾಗಿ ತಿಳಿದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವೆಂದು ನಗರದ ಸೃಷ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಕದಂಬ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸ್ವಾಗತ ಸಮಾರಂಭ ಹಾಗೂ ಮಿನಿ ಕದಂಬ ಕಣಜ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ಬೂದಿ ನಾಗರಾಜ ಮಾತನಾಡಿ ಜ್ಞಾನ ಹಾಗೂ ಸಂಪತ್ತು ನಮ್ಮನ್ನು ಹುಡುಕಿಕೊಂಡು ಬರಬೇಕಾದರೆ ಸತತವಾದ ಓದುವ ಹವ್ಯಾಸ ನಮ್ಮದ್ದಾಗಿರಬೇಕು ಹಾಗೂ ತಾಳ್ಮೆಯಿಂದ ಎಲ್ಲಾವನ್ನು ಗಳಿಸಲು ಸಾಧ್ಯವೆಂದರು. ಈ ಕಾರ್ಯಕ್ರಮದಅಧ್ಯಕ್ಷತೆಯನ್ನು ವಿರುಪಣ್ಣ ಜಿ. ಚನ್ನಳ್ಳಿಯವರು ವಹಿಸಿ ಮಾತನಾಡಿದರು. ರಮೇಶ್ ಹಲಗಿ ಪ್ರಾಸ್ತಾವಿಕ ನುಡಿ ನುಡಿದರು.
ಈ ಸಂದರ್ಭದಲ್ಲಿ ಅಶೋಕ್ ಗುಡುದೂರು, ಶಂಕರ್ ವಾಲಿಕಾರ, ಬಸವರಾಜ್ ಚಿಗರಿ, ಶರಣ್ ಕುಮಾರ ಹಲಗಿ ಸೂರ್ಯನಾರಾಯಣ ರಾಠೋಡ್, ಮಾರುತಿ ಸೋಮಲಾಪುರ್, ಶಿವರಾಜ್ ಗುಡುಗಲದಿನ್ನಿ, ಮಹಾಂತೇಶ್ ಭೇರಗಿ, ಶ್ರೀಮತಿ ಶೃತಿ ಮೇಡಂ ಕಾರ್ಯಕ್ರಮದ ವಂದನಾರ್ಪಣೆ ನೆರವರಿಸಿದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
