ಹಿರೇಕುಂಬಳಗುಂಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ್ಞಾನ ಗುರು ಸರ್ವಜ್ಞರ ಜಯಂತಿಯನ್ನು ಆಚರಣೆ ಮಾಡಲಾಯಿತು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಕುಂಬಳಗುಂಟೆ.ಜ್ಞಾನ ಗುರು ಸರ್ವಜ್ಞ ರ ಜಯಂತಿ. ತಾಲೂಕಿನ ಗಡಿಗ್ರಾಮವಾದ ಹಿರೇಕುಂಬಳಗುಂಟೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ್ಞಾನ ಗುರು ಸರ್ವಜ್ಞರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಶೀ ರಫೀಕ್ ಶಿಕ್ಷಕರು ಸರ್ವಜ್ಞರ ತ್ರಿಪದಿಗಳ ಸಾರವನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ಗುರುವೆಂದರೇ ಸಾಧಕನು ತಾನು ಉಪಯೋಗಿಸುವ ಪ್ರತಿಯೊಂದು ವಸ್ತುವನ್ನು ಪರಮಾತ್ಮನಿಗೆ ಕೊಟ್ಟು ಸ್ವೀಕರಿಸುತ್ತಾನೆ.ಶಿವನಿರ್ಗಪಿಸದೇ ಏನನ್ನೂ ಉಪಯೋಗಿಸಲಾರ. ಶಿವನ ಅನುರಾಗ ಸಾಧಕರಿಗೆ ಸದಾ ಇರಬೇಕು ಅಂಥವರು ಗುರುಗಳಾಗಲು ಯೋಗ್ಯರೆಂದು ಮಹಾತ್ಮರಾದ ಸರ್ವಜ್ಞ ರು ತಿಳಿಸಿದ್ದಾರೆಂದು ತಿಳಿಸಿದರು.ಮಕ್ಕಳು ಸರ್ವಜ್ಞರ ತ್ರಿಪದಿಗಳನ್ನು ಹಂಚಿಕೊಂಡು ಅದರ್ಥಗಳನ್ನು ತಮ್ಮದೇ ಭಾಷೆಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿಯ ಅಧ್ಯಕ್ಷರು,ಸದಸ್ಯರು, ಮುಖ್ಯಗುರುಗಳಾದ ಶಾಮಸುಂದರ ಸಪಾರೆ,ಮಂಜುನಾಥ್, ಹನುಮಂತರಡ್ಡಿ, ಬಸವರಾಜ, ಶಾರದ,ರೂಪ, ಅಡುಗೆ ಸಿಬ್ಬಂದಿ,ಮಕ್ಕಳು ಹಾಜರಿದ್ದರು…

ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend