ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ನಾಡ ಕಛೇರಿಯಲ್ಲಿ ಸರ್ವಜ್ಞ ಜಯಂತೋತ್ಸವ ಕಾರ್ಯಕ್ರಮ…!!!

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ನಾಡ ಕಛೇರಿಯಲ್ಲಿ ಸರ್ವಜ್ಞ ಜಯಂತೋತ್ಸವ ಕಾರ್ಯಕ್ರಮ

ಹೊಸಹಳ್ಳಿ ನಾಡಕಛೇರಿ ಯಲ್ಲಿ ‘’ಸರ್ವಜ್ಞ ‘’ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತಾನಾಡಿ ಉಪತಹಶೀಲ್ದಾರರು ಚಂದ್ರ ಮೋಹನ್ ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದರು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದರು.. ಅವರು ಜನಪ್ರಿಯ ವಚನಗಳು ಅವರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿದ್ದಾರೆ.. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವರು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವರ ಉಳಿಸಿದ್ದಾರೆ ಎಂದು ನುಡಿದರು.
ಶಿಕ್ಷಕರಾದ ಕೃಷ್ಣ ಮೂರ್ತಿ ಮಾತನಾಡಿ ಸರ್ವಜ್ಞ ನ ಜೀವನ ಚರಿತ್ರೆ ಕುರಿತು ಮತ್ತು ಅವರು ನಡೆಬಂದ ದಾರಿಯ ಬಗ್ಗೆ ಸ್ವವಿವರವಾಗಿ ತಿಳಿದರು .
ಕೆ ಎಸ್ ವೀರೇಶ್ ಮಾತನಾಡಿ ಕನ್ನಡವನ್ನಾಡುವವರ ಮನಸ್ಸಿನಲ್ಲಿ ದೃಡವಾಗಿ ನೆಲಸಿದ ಕವಿ .ಸುತ್ತಲಿನ ಜನಜೀವನವನ್ನು ತೆರೆದ ಕಣ್ಣಿನಿಂದ ನೋಡಿದ ,ಸೂಕ್ಷ ಬುದ್ದಿಯಿಂದ ಪರೀಕ್ಷಿಸಿದ.ಮೂರು ಪಂಕ್ತಿಗಳಲ್ಲಿ ಅಪಾರ ಅನುಭವವನ್ನು .ವಿವೇಕವನ್ನು ತುಂಬಿಸಿ ಜನತೆಗಿತ್ತ ಮಾರ್ಗದರ್ಶಕರು ಎಂದು ಹೇಳಿದರು
ಕುಂಬಾರ್ ಬಸವರಾಜ ಮಾತನಾಡಿ
ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳು ಒಂದೊಂದು ನುಡಿಗಲಿತು
ವಿದ್ಯೆಯ ಪರ್ವತವೆ ಆದ ಸರ್ವಜ್ಞ.
ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು
ಗೋರ್ಕಲ್ಲಮೇಲೆ ಮಳೆಗರೆದರೆ
ಆಕಲ್ಲು ನೀರುಕುಡಿವುದೆ ಸರ್ವಜ್ಞ ಎಂದು ನುಡಿದರು.
ಕಂದಾಯ ಇಲಾಖೆ ಸಿಬ್ಬಂದಿ ಗಳಾದ ಶ್ರೀನಿವಾಸ ಕೊಂಡಿ .ಮುರುಗೇಶ್ .ತಳವಾರ ಬೋರಪ್ಪ .
ಇಧೇ ಸಂದರ್ಭದಲ್ಲಿ ಮುಖಂಡರಾದ ಗ್ರಾಮ ಪಂಚಾಯತಿ ಸದಸ್ಯರು ಹೊನ್ನೂರಪ್ಪ ,ನಡಲುಮನೆ ತಿಪ್ಪೇಸ್ವಾಮಿ , ಕುಂಬಾರ ಹನುಮಂತಪ್ಪ,ಪವನ್ .ವಿನಾಯಕ ಹೊಸಹಳ್ಳಿ ,ವಿರುಪಾಕ್ಷಿ ಇಮಡಾಪುರ. ವೆಂಕಟೇಶ್ ಇಮಡಾಪುರ ,ಶ್ರೀಕಾಂತ .ಮಹಾರಾಜ. ರವೀಂದ್ರ ,.ಸೂಲದಹಳ್ಳಿ ಬಸವರಾಜ ಹಾಗೂ ಸಾರ್ವಜನಿಕರು ಉಪಸ್ಧಿತರಿದ್ದರು..

ವರದಿ ಕೆ ಎಸ್ ವೀರೇಶ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend