ದಲಿತರಿಗೆ ಜಮೀನು ಮಂಜೂರಾಗುವುದನ್ನು ಸಹಿಸದೇ ಮಾರಣಾಂತಿಕ ಹಲ್ಲೆ ನಡೆಸಿದ ಮೇಲ್ವರ್ಗದ ಹಿಂದೂಗಳು!!!!!!!!!!!!!?
ಎಲ್ಲಿದ್ದರಾರೆ ಹಿಂದೂ ಹಿಂದೂ ಅಂತ ನಾವೆಲ್ಲ ಒಂದೇ ಒಂದೇ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಾಚಿಕೆ ಆಗಬೇಕು ಇವರ ಜನ್ಮಕ್ಕೆ ದಲಿತ ವಿರೋಧಿ ಸರ್ಕಾರಕ್ಕೆ ದಿಕ್ಕಾರವಿರಲಿ.
ಹಾಸನ: ಪರಿಶಿಷ್ಟ ಜಾತಿ, ಪಂಗಡದ ಸಮುದಾಯಕ್ಕೆ ಸರ್ಕಾರಿ ಜಮೀನು ಮಂಜುರಾತಿ ವಿಚಾರವಾಗಿ ಸರ್ವೇ ಮಾಡುತ್ತಿದ್ದ ವೇಳೆ ಮೇಲ್ವರ್ಗದ ಹಿಂದೂಗಳು ದಲಿತ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸಾಣೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಾಣೇನಹಳ್ಳಿ ಗ್ರಾಮದ ಸರ್ವೇ ನಂಬರ್ 25ರಲ್ಲಿ ಪರಿಶಿಷ್ಟ ಜಾತಿ ಪಂಗಡ ಸಮುದಾಯಕ್ಕೆ 3.20 ಗುಂಟೆ ಜಮೀನು ಮಂಜೂರು ಮಾಡಲು ತಹಶೀಲ್ದಾರ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಮೇಲ್ವರ್ಗದ ಹಿಂದೂಗಳ ಗುಂಪೊಂದು ದಲಿತ ಕುಟುಂಬಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಹಲವು ದಲಿತರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ವರದಿಗಳಿಂದ ತಿಳಿದು ಬಂದಿದೆ. ಗಾಯಾಳುಗಳನ್ನು ಬೇಲೂರು ತಾಲೂಕಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ದಲಿತರು ಜಮೀನು ಹೊಂದುವುದನ್ನು ಸಹಿಸದೇ ಮೇಲ್ವರ್ಗದ ಹಿಂದೂಗಳು ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಹಳೆಬೀಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗಾಯಾಳುಗಳನ್ನು ಭೇಟಿ ಮಾಡಿ, ಮಾಹಿತಿ ಪಡೆದುಕೊಂಡಿದ್ದಾರೆ..

ವರದಿ. ಪ್ರತಾಪ್ ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
