ಡಾ. ರಾಜ್ ವಂಶ್ ಹಾಗೂ ಯುವರಾಜ್ ಪಡೆ ವತಿಯಿಂದಪುನೀತ್ ರಾಜಕುಮಾರ ಹುಟ್ಟು ಹಬ್ಬ ಅಂಗವಾಗಿ (ಮಾರ್ಚ್ 17 ವರಗೆ) 11ಸಾವಿರ ಸಸಿ ನೆಡುವ ಅಭಿಯಾನ…!!!

ಸಿಂಧನೂರು : ಇಂದು ನಗರ ಸಭೆ ವ್ಯಾಪ್ತಿಯಲ್ಲಿ ಬರುವ ಟಿಬಿಪಿ ಕ್ಯಾಂಪಿನ್ ೨೯ನೇ ವಾರ್ಡಿನ ಸ.ಕ.ಮ.ಮಾ.ಹಿ. ಪ್ರಾ.ಶಾಲೆಯಲ್ಲಿ ಡಾ॥ರಾಜ್ ವಂಶ ಯುವರಾಜ್ ಕುಮಾರ್ ಕನ್ನಡ ಸೇವಾ ಟ್ರಸ್ಟ ಹಾಗೂ ಡಾ॥ರಾಜ್ ವಂಶ ಯುವರಾಜ್ ಕುಮಾರ್ ಯುವ ಪಡೆ ವತಿಯಿಂದ ಪುನೀತ್ ರಾಜಕುಮಾರ ಹುಟ್ಟು ಹಬ್ಬ ಅಂಗವಾಗಿ (ಮಾರ್ಚ್ 17 ವರಗೆ) 11ಸಾವಿರ ಸಸಿ ನೆಡುವ ಅಭಿಯಾನವನ್ನು ವನಸಿರಿ ಪೌಂಡೇಷನ್ ರಾಜ್ಯದ್ಯಕ್ಷ ಅಮರೇಗೌಡ ಮಲ್ಲಾಪೂರು ರವರ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅಥಿತಿಯಾಗಿ ನಗರ ಪಿ.ಎಸ್.ಐ.ಸೌಮ್ಯರವರು ಸಸಿ ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ನಂತರ ಮಾತನಾಡಿ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಟ್ಟು ಅದಕ್ಕೆ ಪಾಲನೆ ಪೋಷಣೆ ಮಾಡಿದರೆ ಅನೇಕ ಬಗೆಯ ಪ್ರಾಣಿಪಕ್ಷಿಗಳು ಜೀವಿಸುತ್ತವೆ.ಕಾಲ ಕಾಲಕ್ಕೆ ಮಳೆಯಾಗುತ್ತದೆ. ನಮಗೆ ಮತ್ತು ಮಕ್ಕಳಿಗೆ ನೆರಳು ಮತ್ತು ಆಕ್ಸಿಂಜನ್ ಕೊಡುತ್ತದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದ ಅನೇಕ ಜನ ಜೀವ ಕಳೆದುಕೊಂಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಗಿಡಗಳನ್ನು ಕಡಿಯದಂತೆ ನೋಡಿಕೊಳ್ಳಬೇಕು ಮತ್ತು ವನಸಿರಿ ಪೌಂಡೇಶನ್ ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆ ಮತ್ತು ಉಳಿವಿಗಾಗಿ ಶ್ರಮಿಸುತ್ತಿದೆ ಅವರ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ ರವರ ಆದೇಶದ ಮೇರೆಗೆ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಹಾರತುರಾಯಿ, ಪಟಾಕಿ ಸಿಡಿಸುವುದು, ಹಾಲಿನ ಅಭಿಷೇಕ ಮಾಡುವ ಬದಲು ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ರಾಜ್ ಟ್ರಸ್ಟ್ ವತಿಯಿಂದ 11ಸಾವಿರ ಸಸಿ ನೆಡುವ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಹಿಂದಿನ ಕಾಲದ ಹಿರೀಕರು 90ರಿಂದ 100 ವರ್ಷಗಳ ಕಾಲ ಜೀವಿಸುತ್ತಿದ್ದರು ಆದರೆ ಇಂದು ನಾವುಗಳು 40ರಿಂದ 50 ವರ್ಷಗಳಿಗೆ ಅನೇಕ ರೋಗರುಜಿನಗಳಿಗೆ ತುತ್ತಾಗುತ್ತಿದ್ದೇವೆ. ಕಾರಣ ಪರಿಸರ ನಾಶ ಮಾಡುವುದರಿಂದ ಅತಿಯಾದ ಪಾಸ್ಟ್ ಫುಡ್ ತಿನ್ನುವುದರಿಂದ ಎಂದು ಡಾ.ರಾಜ್ ವಂಶ ಯುವರಾಜ ಪಡೆ ರಾಜ್ಯ ಸಂಚಾಲಕ ರಾಜು ಅಡವಿಭಾವಿ ಮಾತನಾಡಿದರು.

ಸಸಿ ನೆಟ್ಟು ಪ್ರಚಾರ ತೆಗೆದುಕೊಳ್ಳುವ ರಾಜಕೀಯ ನಾಯಕರು ಸ್ವಾಮೀಜಿಗಳು ಗಿಡಗಳನ್ನು ಕಡಿದಾಗ ಯಾಕೆ ಅವರ ಪರವಾಗಿ ರಕ್ಷಣೆ ಮಾಡಲು ಹೊದ ನಮಗೆ ಪೋನ ಮಾಡಿ ಅವರು ನಮ್ಮವರು ಬಿಟ್ಟು ಬಿಡಿ ಎಂದು ಮಾತನಾಡುತ್ತಿರಿ,ಅದರ ಬದಲು ಗಿಡಗಳನ್ನುಕಡಿದವರಿಗೆ ಸಸಿಗಳನ್ನು ನೆಡಲು ತಿಳಿಸಿರಿ ಎಂದು ಅಮರೇಗೌಡ ಮಲ್ಲಾಪೂರು ವಿನಂತಿಸಿಕೊಂಡರು.

ಶರಣಬಸವ ಚಿಕಲ್ಪರ್ವಿ, ಲಾರಿ ಮಾಲೀಕರಾದ ಶರಣಪ್ಪಬೇರಗಿ 40 ಸಸಿಗಳನ್ನು ಕೊಡಿಸಿದರು

ಈ ಸಂಧರ್ಭದಲ್ಲಿ ಡಾ।ರಾಜ್ ವಂಶ ಯುವರಾಜ್ ಯುವ ಪಡೆಯ ರಾಜ್ಯ ಸಂಚಾಲಕ ರಾಜು ಅಡವಿಭಾವಿ, ಮಲ್ಲಿಖಾರ್ಜುನ್ ಕನಕ ಯುವ ಸೇನೆ ಕಾರ್ಯಧ್ಯಕ್ಷರು, ಬಸವರಾಜ ರಾಜವಂಶ್ ಯುವರಾಜ ಪಡೆ ರಾಜ್ಯ ಉಪಾಧ್ಯಕ್ಷರು ಹಾಗೂ ಸಂಗೀತ ಸಾರಂಗಮಠ ವನಸಿರಿ ಪೌಂಡೇಶನ್, ಪುಷ್ಪಾ, ಕವಿತಾ ಎಕ್ಸಲೆಂಟ್ ಪದವಿ ಕಾಲೇಜು, ಮುಖ್ಯ ಗುರುಗಳು ಭಾಗ್ಯಶ್ರೀ, ದುರ್ಗಾಲಕ್ಷ್ಮೀ, ಶರಣೇಗೌಡ, ಮುದಿಯಪ್ಪ,ಎಸ್.ಡಿ.ಎಮ್.ಸಿಅದ್ಯಕ್ಷ ರಮ್ಜಾನ್ ಸಾಬ್ ಹಾಗೂ ತಂಡ ರಾಜವಂಶದ ಅಭಿಮಾನಿಗಳು ಹಾಗೂ ಶಾಲೆಯ ಮುಖ್ಯ ಗುರುಗಳು ಹಾಗೂ ಮಕ್ಕಳು ಸೇರಿದಂತೆ ಇತರರಿದ್ದರು….

 

ವರದಿ, ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend