ಸಂತ ಶ್ರೀ ಸೇವಾಲಾಲ್ ಜಯಂತಿ: ಸರಳ ಆಚರಣೆ
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಸಂತ ಶ್ರೀಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸಂತಸೇವಾಲಾಲ್ ಅವರು ಸಮಾಜದಲ್ಲಿನ ಮೌಢ್ಯತೆ, ಕಂದಾಚಾರ ತೊಡೆದು ಹಾಕಲು ಶ್ರಮಿಸಿದ್ದಾರೆ ಎಂದರು.
ಬಂಜಾರ ಸಮುದಾಯದವರು ಶ್ರಮಜೀವಿಗಳಾಗಿದ್ದು, ವಿಶೇಷ ಶೈಲಿಯ ವಿನ್ಯಾಸದಿಂದ ಕೂಡಿದ ಉಡುಗೆ, ವಿಶಿಷ್ಟ ಶೈಲಿಯ ನೃತ್ಯ, ಭಾಷೆ ವಿಭಿನ್ನವಾಗಿದ್ದು ಸಂಸ್ಕøತಿಯ ಜೊತೆಗೆ ಬಂಜಾರ ಸಮುದಾಯ ಸಾಗುತ್ತಿದೆ. ಸಮುದಾಯ ಪ್ರತಿ ಹಬ್ಬಗಳು ವಿಶೇಷ ಆಚರಣೆಯಿಂದ ಕೂಡಿದ್ದು, ಉತ್ಸಾಹದೊಂದಿಗೆ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ, ಸಂತ ಸೇವಾಲಾಲ್ ಅವರ ತತ್ವಗಳು ಇಡೀ ಸಮಾಜಕ್ಕೆ ಪೂರಕವಾದ ವಿಚಾರಗಳಾಗಿವೆ. ಸಮಾಜದಲ್ಲಿ ಮೂಢನಂಬಿಕೆ, ಕಟ್ಟುಪಾಡುಗಳನ್ನು ಹೋಗಲಾಡಿಸಿ, ಸಮಾಜದ ಒಗ್ಗಟ್ಟು ಮತ್ತು ಏಳಿಗೆಗಾಗಿ ಸಂತ ಸೇವಾಲಾಲ್ ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಸಂತ ಸೇವಾಲಾಲ್ ಅವರು ವಿಶಿಷ್ಟವಾದ ಸಂಸ್ಕøತಿಯ ಅಸ್ಮಿತೆಯನ್ನು ಸಾರಿ ಬಂಜಾರ ಸಮುದಾಯವನ್ನು ಒಗ್ಗೂಡುವಿಕೆಗೆ ಕಾರಣರಾಗಿದ್ದಾರೆ. ಸೇವಾಲಾಲ್ ಅವರ ಆದರ್ಶಗಳನ್ನು ಪಾಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೊಣ ಎಂದರು.
ಬಂಜಾರ ಸಮುದಾಯ ನಿಂಗಾನಾಯ್ಕ್ ಮಾತನಾಡಿ, ಸಂತ ಸೇವಾಲಾಲ್ ಅವರು ಕರ್ನಾಟಕ, ಮಹಾರಾಷ್ಟ್ರ ಆಂದ್ರಪ್ರದೇಶ ಸೇರಿದಂತೆ ಎಲ್ಲ ಕಡೆ ಪಾದಯಾತ್ರೆ ಮೂಲಕ ಸಂಚರಿಸಿ ಜನಾಂಗದಲ್ಲಿನ ಮೂಢನಂಬಿಕೆಗಳನ್ನು, ಕಂದಾಚಾರಗಳನ್ನು ಬಗೆಹರಿಸುವಲ್ಲಿ ಮಹತ್ತರವಾದ ಕೊಡುಗೆ ಸಂದೇಶಗಳನ್ನು ನೀಡಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸತ್ಯನಾರಾಯಣ, ಡಿವೈಎಸ್‍ಪಿ ಪಾಂಡುರಂಗ, ಸಾಹಿತಿ ಮಂಜುನಾಥ್ ನಾಯಕ್, ಬಂಜಾರ ಸಮುದಾಯದ ರಾಜಾನಾಯ್ಕ್, ನಿಂಗಾನಾಯ್ಕ್, ಅರುಣ್‍ಕುಮಾರ್, ಸತೀಶ್‍ನಾಯ್ಕ್, ರಮೇಶ್ ನಾಯ್ಕ್, ಗೋವಿಂದನಾಯ್ಕ್, ಚಂದ್ರನಾಯ್ಕ್, ಪ್ರಕಾಶ್ ರಾಮಾನಾಯ್ಕ್ ಸೇರಿದಂತೆ ಮತ್ತಿತರರು ಇದ್ದರು…

ವರದಿ.ಚಕ್ರಿ ಬಸವರಾಜ್, ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
