ಚಳ್ಳಕೆರೆ ಜೆ ಡಿ ಎಸ್ ಪಕ್ಷದ ನಾಯಕರಿಂದ ನಗರಸಭೆಯ ಮುಂಭಾಗದಲ್ಲಿ 2ಜಿ ಆಶ್ರಯ ಮನೆ ಯೋಜನೆಯನ್ನು ವಿರೋದಿಸಿ ನಿವೇಶನ ಹಾಗೂ ಖಾತೆ ಮಾಡಲು ವಿಳಂಬ ವಿರೋದಿಸಿ ಪ್ರತಿಭಟನೆ
ಚಳ್ಳಕೆರೆ ನಗರಸಭೆಯ ವ್ಯಾಪ್ತಿಯ ರಿಸರ್ವೆ ನಂಬರ್ 56 ಮತ್ತು 57ರ ಭೂಮಿಯನ್ನು ನಗರ ಆಶ್ರಯ ಯೋಜನೆ ಗೆ ಪರಿವರ್ತಿಸಿ ಮಾನ್ಯ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿ ಹಕ್ಕು ಪತ್ರ ವಿತರಿಸಿದ 198 ಆಶ್ರಯ ನಿವೇಶನ ಫಲಾನುಭವಿಗಳ ಹೆಸರಿಗೆ ಖಾತೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವ ನಗರಸಭೆ ವಿರುದ್ಧ ಹಾಗೂ ಜಿ +2 ಮನೆಗಳನ್ನು ವಿರೋಧಿಸಿ ಹಾಗೂ 198 ನಿವೇಶನಗಳ ಖಾತೆಗೆ ಒತ್ತಾಯಿಸಿ ಹಾಗೂ ರಾಜ್ಯ ಸರ್ಕಾರದ ಆಶ್ರಯ ವಸತಿ ಯೋಜನೆಯಡಿ ಅರ್ಹ ಪಡೆದ ಪಟ್ಟಣದ ನಿವೇಶನ ರಹಿತರು ಎ.ಪಿ.ಎಂ.ಸಿ ಹಮಾಲರು ಹಾಗೂ ಆಟೋ ಚಾಲಕರಿಗೆ ನಿವೇಶನ ಮಂಜೂರು ಮಾಡಲು ಪ್ರತಿಭಟನೆ ಮಾಡಿ ಮಾನ್ಯ ಚಳ್ಳಕೆರೆ ತಾಲ್ಲೂಕು ತಹಶೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು ಜೆ ಡಿ ಎಸ್ ಪಕ್ಷದ ನಾಯಕರಾದ ಪೀ ಟಿ ತಿಪ್ಪೇಸ್ವಾಮಿ ನಗರಸಭೆ ಸದಸ್ಯರಾದ ಪ್ರಮೋದ್. ಪ್ರಶಾಂತ್ ಹೊಯ್ಸಳ ಗೋವಿಂದ. ಮಾಜಿ ತಾಲ್ಲೂಕು ಸದಸ್ಯರು ಅದ ಸಮರ್ಥ್ ಹಾಗೂ ಜೇ ಡಿ ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
