ಕೆಬಿತಾಂಡ:ಸರ್ಕಾರಿ ಶಾಲೆಯಲ್ಲಿ ಶ್ರೀಸಂತ ಸೇವಾಲಾಲ್ ಜಯಂತಿ ಆಚರಣೆ…!!!

ಕೆಬಿತಾಂಡ:ಸರ್ಕಾರಿ ಶಾಲೆಯಲ್ಲಿ ಶ್ರೀಸಂತ ಸೇವಾಲಾಲ್ ಜಯಂತಿ ಆಚರಣೆ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಕೆ.ಬಿ.ತಾಂಡ(ದೂಪದಳ್ಳಿತಾಂಡ)ದಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಪ್ರಾರಂಭದಲ್ಲಿ ಶ್ರೀಸಂತ ಸೇವಾಲಾಲ್ ರವರ ಭಾವಚಿತ್ರಕ್ಕೆ,ಪುಷ್ಪ ಅರ್ಪಿಸಿ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು.ಶಿಕ್ಷಕಿ ಶ್ರೀಮತಿ ಅನುರಾಧ ರವರು ಮಾತನಾಡಿ, ಶ್ರೀಸಂತ ಸೇವಾಲಾಲ್ ರವರು ಬಂಜಾರ ಸಮುದಾಯಕ್ಕೆ ಸಲ್ಲಿಸಿದ ಕೊಡುಗೆ ಕುರಿತು ಮಾಹಿತಿ ನೀಡಿದರು. ಅವರ ಜೀವನ ಚರಿತ್ರೆಯಲ್ಲಿ ಬರುವ ಪ್ರಮುಖ ಸನ್ನಿವೇಶಗಳ ಕುರಿತಾದ ಸಾರಾಂಶವನ್ನು ವಿವರಿಸಿದರು. ನಂತರ ವಿದ್ಯಾರ್ಥಿಗಳು ಸೇವಾಲಾಲ್ ರವರ ಜೀವನ ಗಾಥೆಯನ್ನು, ಸಂಕ್ಷಿಪ್ತವಾಗಿ ವಿವರಿಸುವಂತಹ ಪ್ರಾರ್ಥನೆ ಗೀತೆಯನ್ನು ಹಾಡಿದರು. ಎಸ್ಡಿ ಎಮ್ಸಿ ಅಧ್ಯಕ್ಷ ಕೃಷ್ಣನಾಯ್ಕ, ಮುಖ್ಯ ಶಿಕ್ಷಕರಾದ ಬಿ.ರಾಮಚಂದ್ರ, ಎಸ್ಡಿ ಎಮ್ಸಿ ಸದಸ್ಯ ಪ್ರಕಾಶ ಸೇರಿದಂತೆ ಮತ್ತಿತರು ಹಾಗೂ ಶಿಕ್ಷಕಿ ಗೀತಾರವರು ವೇದಿಕೆಯಲ್ಲಿದ್ದರು. ಕೆಲ ಮಕ್ಕಳು ತಮ್ಮ ಸಮುದಾಯದ ಪೋಷಕವನ್ನು ಧರಿಸಿ ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಮತ್ತು ಮಕ್ಕಳ ಪೋಷಕರು,ಗ್ರಾಮದ ಮುಖಂಡರು ಹಾಗೂ ಎಸ್ಡಿ ಎಮ್ಸಿ ಸದಸ್ಯರು ಉಪಸ್ಥಿತರಿದ್ದರು…

ವರದಿ.ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend