ಪಾಪರಾವ್ ಕ್ಯಾಂಪಿನಲ್ಲಿ “ಟಿಬಿ ಸೋಲಿಸಿ,ಕರ್ನಾಟಕ ಗೆಲ್ಲಿಸಿ” ಅಭಿಯಾನ.
ಸಿಂಧನೂರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ವಿಭಾಗ ರಾಯಚೂರು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪಾಪಾರಾವ್ ಕ್ಯಾಂಪ್ ಇವರ ಸಂಯುಕ್ತಾಶ್ರಯದಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ “ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ” ಅಭಿಯಾನವನ್ನು ಸಿಂಧನೂರು ಕ್ಷಯರೋಗ ಘಟಕ-2 ಸಿಂಧನೂರು ದಿ.3-01-22 ರಿಂದ 15-02-2022 ವರೆಗೆ ಹಮ್ಮಿಕೊಂಡಿದ್ದು ಇದರ ಅಂಗವಾಗಿ ಇಂದು 15-02-2022 ರಂದು ಹೆಡಗಿನಾಳ ಗ್ರಾಮದಲ್ಲಿ ಸಮುದಾಯ ಮಟ್ಟದಲ್ಲಿ ಕ್ಷಯರೋಗದ ಕುರಿತು ಅರಿವು ಮೂಡಿಸುವಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಕ್ಷಯರೋಗ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಅಮೀರ್ ಕ್ಷಯರೋಗದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಎರಡು ವಾರಗಳಿಗೂಮೇಲ್ಪಟ್ಟು ಕೆಮ್ಮು,ಸಾಯಂಕಾಲದ ಜ್ವರ ಇರುವವರನ್ನು ಕಫ ಪರೀಕ್ಷೆ ಮಾಡಿಸಿ ಕ್ಷಯರೋಗ ಪತ್ತೆಹಚ್ಚಲು ಸಹಕರಿಸಲು ಮನವಿ ಮಾಡಿದರು.
ಒಂದು ವೇಳೆ ಕ್ಷಯರೋಗ ಪತ್ತೆಯಾದಲ್ಲಿ ,ಸರಕಾರದಿಂದ ಉಚಿತವಾಗಿ ಔಷಧೋಪಚಾರ & ಪೌಷ್ಟಿಕಾ ಅಹಾರಕ್ಕಾಗಿ ಮಾಸಿಕ 500/- ರೂ ಗಳ ಧನಸಹಾಯ ‘ನಿಕ್ಷಯ ಪೋಷಣ ಯೋಜನೆ’ಯ ಅಡಿಯಲ್ಲಿ ಪಡೆಯಲು ವಿನಂತಿಸಿದರು.ಹಾಗೂ ಕ್ಷಯರೋಗದ ಲಕ್ಷಣಗಳು ಇರುವ ತಮ್ಮ ಮನೆಯವರ, ಪಕ್ಕದ ಮನೆಯವರನ್ನು ಸರಕಾರಿ ಆಸ್ಪತ್ರೆಗೆ ಕರೆತಂದು ಕಫ ಪರೀಕ್ಷೆ ಮಾಡಿಸಿ ” ಟಿಬಿ ಸೋಲಿಸಿ , ಕರ್ನಾಟಕ ಗೆಲ್ಲಿಸಿ” ಅಭಿಯಾನದಲ್ಲಿ ಪಾಲ್ಗೊಳ್ಳಲು ಕರೆನೀಡಿದರು.ಹಾಗೂ 2025 ಕ್ಕೆ ಕ್ಷಯ ಮುಕ್ತ ಭಾರತ ಮಾಡೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಕ್ಷಯರೋಗ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಶ್ರೀ ಅಬ್ದುಲ್ ಹಮೀದ್ ಹಾಗೂ ಸುರೇಖಾ HIO ಹಾಗೂ ಅಶಾ ಕಾರ್ಯಕರ್ತೆಯರು ಅಂಗನವಾಡಿ ಸಿಬ್ಬಂದಿಗಳು ಹಾಜರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
