ರಾಮದುರ್ಗ: ರೈಲ್ವೆ ಮಾರ್ಗ ಸರ್ವೆ ಕಾರ್ಯ ನೆನೆಗುದಿಗೆ…!!”

ರಾಮದುರ್ಗ: ರೈಲ್ವೆ ಮಾರ್ಗ ಸರ್ವೆ ಕಾರ್ಯ ನೆನೆಗುದಿಗೆ

ಇತ್ತೀಚೆಗೆ ಬಾಗಲಕೋಟೆಯ ರಾಜ್ಯ ರೈಲು ವ್ಯವಸ್ಥೆ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷರು ಕುತ್ಬುದ್ಧೀನ್ ಖಾಜಿ ಕಾರಣಾಂತರಗಳಿಂದ ರಾಮದುರ್ಗಕ್ಕೆ ಆಗಮಿಸಿದ್ದರು. ಅವರು ಕರೆ ಮಾಡಿದ ತಕ್ಷಣವೇ ಮೌಲ್ಯಸಂಪದ ನಿಯೋಗ ಖಾಜಿಯವರನ್ನು ಭೆಟ್ಟಿಯಾದ ಕೂಡಲೇ ಖಾಜಿಯವರು ರಾಮದುರ್ಗಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯ ವಿಷಯದ ಬಗ್ಗೆ ಕೆಲ ಸಮಯ ನಮ್ಮೊಂದಿಗೆ ಮಾತನಾಡಿದರು. ಮೊದಲು ಅವರು ರಾಮದುರ್ಗದ ಒಬ್ಬ ಹೋರಾಟಗಾರರು ಗುರುಸಿದ್ದಪ್ಪ ತೊಗ್ಗಿಯವರನ್ನು ಸಂಪರ್ಕಿಸಿದ್ದರು. ಅವರೊಂದಿಗೆ ರಾಮದುರ್ಗದ ಜನರಿಗೆ (ತಾಲೂಕಿನ ಜನರಿಗೆ) ರೈಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಕೇಂದ್ರ ಸರ್ಕಾರದ ಯೋಜನೆ ಹಾಗೂ ಕಾರ್ಯಗಳ ಬಗ್ಗೆ ಮಾತನಾಡಿದ್ದರು.*

*ಈಗಾಗಲೇ ಮುಂಜೂರಾಗಿರುವ “ಕುಡಚಿ ಬಾಗಲಕೋಟ” ರೈಲ್ವೆ ಸಂಪರ್ಕವು ರಾಮದುರ್ಗ ಮಾರ್ಗವಾಗಿ ನಿರ್ಮಾಣಗೊಳ್ಳುವಂತಾಗಬೇಕೆಂಬ ಬೇಡಿಕೆಯನ್ನು ಜನರು ಈ ಕಾರ್ಯ ವ್ಯವಸ್ಥೆಯಲ್ಲಿ ಜನಧ್ವನಿಯಾಗಿ ತೂರಿಸಬೇಕು. ರೈಲ್ವೆ ಬಜೆಟ್ ಮಂಡನೆಯ ಸಂದರ್ಭದಲ್ಲಿ ನಾವು ನೀವುಗಳು ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕೆಂದು ಹೇಳಿದರು. ಈಗಾಗಲೇ ನಡೆಯಬೇಕಾದ ಕುಡಚಿ ಬಾಗಲಕೋಟ ರೈಲು ಮಾರ್ಗ ನಿರ್ಮಾಣ ಕಾರ್ಯ ಸಾಕಷ್ಟು ನೆನೆಗುದಿಗೆ ಬಿದ್ದಿದೆ. ಜನರ ಕೂಗಿನ ಮೂಲಕ ಇದಕ್ಕೆ ಚುರುಕು ತರುವಂತಾಗಬೇಕೆಂದರು. ಈ ಭಾಗದ ಜನರ ಆರಾಧ್ಯ ದೈವ ಗೊಡಚಿಯ ಶ್ರೀ ವೀರಭದ್ರೇಶ್ವರ, ಶಿರಸಂಗಿ ಕಾಳಿಕಾ ದೇವಸ್ಥಾನ ಹಾಗೂ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ಗುಡ್ಡ ದೇವಸ್ಥಾನದ ಮಹತ್ವ ಹಾಗೂ ಸಾರ್ವಜನಿಕನಿಕರಿಗೆ ಆಗುವ ಪ್ರಯಾಣದ ಅನುಕೂಲ, ಉತ್ತರ ಕರ್ನಾಟಕದ ಬಹುದೊಡ್ಡ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಪ್ರಯಾಣಿಸುವ ಜನರಿಗೆ, ರೈತರಿಗೆ, ಬಡ ಕಾರ್ಮಿಕರು ಹಾಗೂ ಕೂಲಿಕಾರರಿಗೆ ರೈಲು ಸಾರಿಗೆ ತುಂಬಾ ಅಗ್ಗವಾಗಿರುವುದರಿಂದ ಅನುಕೂಲವಾಗುವುದು ಎಂಬ ಮೂಲಭೂತ ವಿಷಯ, ವಿಚಾರಗಳನ್ನು ಅರ್ಜಿಯಲ್ಲಿ ಬರೆದು.. ಅಧಿಕಾರಿಗಳ ಗಮನ ಸೆಳೆಯುವಂತಾಗಬೇಕೆಂದು ಖಾಜಿಯವರು ರಾಮದುರ್ಗದ ರೈಲು ಸಂಪರ್ಕದ ವ್ಯವಸ್ಥೆಯ ಬಗ್ಗೆ ಹೋರಾಟ ಮಾಡುವವರಿಗೆ ಈ ಕೆಲ ವಿಷಯಗಳ ಕಿವಿಮಾತು ಹೇಳಿದರು. ಇಂತಹ ಜನೋಪಯೋಗಿ ಕಾರ್ಯಕ್ಕೆ ನಾವು ನಮ್ಮ ಸಂಸ್ಥೆ ಯಾವತ್ತೂ ಜನರೊಂದಿಗೆ ಇರುತ್ತೇವೆಂದು ಕುತ್ಬುದ್ಧೀನ್ ಖಾಜಿ ಹೇಳಿದರು. ಮೌಲ್ಯಸಂಪದ ಸಂಸ್ಥೆ ಹಾಗೂ ಪತ್ರಿಕೆಯು ನಮ್ಮೊಂದಿಗೆ ಇದ್ದರೆ ಒಳಿತು ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಉಪಸಂಪಾದಕರು ಬಿ. ಬಿ. ಹಾಜಿ ಹಾಗೂ ಇತರ ಸ್ಥಳೀಯ ಗಣ್ಯರು ನಮ್ಮೊಂದಿಗಿದ್ದರು…

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend