ಬಿಜೆಪಿ ಆಡಳಿತಕ್ಕೆ ಬೇಸತ್ತು, ಕಾಂಗ್ರೆಸ್ ಸೇರ್ಪಡೆಗೊಂಡ ದೊಡ್ಡನಗೌಡ, ಮತ್ತು ವೆಂಕಟರೆಡ್ದೆಪ್ಪ ತಿಗಡಿಗೋಳ…!!!

ಸಿಂಧನೂರು :ಇಂದು ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿಯವರ ನಿವಾಸದಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಂಪನಗೌಡ ಬಾದರ್ಲಿ ಮಾಜಿ ಶಾಸಕರ ಅನುಪಸ್ಥಿತಿಯಲ್ಲಿ ಪಂಪನಗೌಡ ಬಾದರ್ಲಿ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಹಾಗೂ ಆರ್ ಬಸನಗೌಡ ತುರುವಿಹಾಳ ಶಾಸಕರು ಮಸ್ಕಿ ಕ್ಷೇತ್ರ, ಹನುಮಂತಪ್ಪ ಮುದ್ದಾಪುರು ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಮಸ್ಕಿ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ಮೆಚ್ಚಿ,ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ದೊಡ್ಡನಗೌಡ ತಿಡಿಗೋಳ ಹಾಗೂ ವೆಂಕಟ ರೆಡ್ಡಪ್ಪ ತಿಡಿಗೋಳರವರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಖಾಜಿ ಮಲ್ಲಿಕ್ ಅಧ್ಯಕ್ಷರು ನಗರ ಬ್ಲಾಕ್ ಕಾಂಗ್ರೆಸ್, ಅನಿಲ್ ಕುಮಾರ್ ವೈ ಪ್ರಧಾನ ಕಾರ್ಯದರ್ಶಿ ಬ್ಲಾಕ್ ಕಾಂಗ್ರೆಸ್, ಮುಖಂಡರಾದ ಶರಣಪ್ಪ,ಕಾಸ್ ರೆಡ್ಡಪ್ಪ,ಕರೇಗೌಡ, ಕೆ. ಬಸವರಾಜಪ್ಪ,ರುದ್ರಗೌಡ, ಸೋಮಶೇಖರಗೌಡ, ನಗರಸಭಾ ಸದಸ್ಯರಾದ ಶೇಖರಪ್ಪ,ಕೆಎಂಎಸ್ ಪ್ರಭುರಾಜ್, ಆಲಮ್ ಭಾಷಾ, ಎಚ್ ಭಾಷಾ,ಶಬ್ಬಿರ್ ನಾಯಕ, ಮುನೀರ್ ಪಾಷಾ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಇನ್ನು ಮುಂತಾದವರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend