ಹುಲ್ಲೂರು ತಾಂಡದ ಅಪ್ರಾಪ್ತ ಬಾಲಕಿಯನ್ನು,ಅತ್ಯಾಚಾರ ಎಸಗಿರುವ ಆರೋಪಿಗಳನ್ನು ಗಲ್ಲಿಗೇರಿಸಿ…!!!

ವಿಜಯನಗರ  ಜಿಲ್ಲೆ ಕೂಡ್ಲಿಗಿ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹುಲ್ಲೂರು ತಾಂಡದ ಅಪ್ರಾಪ್ತ ಬಾಲಕಿಯನ್ನು,ಅತ್ಯಾಚಾರ ಎಸಗಿ ಕೊಲೆಮಾಡಿದ್ದು. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು, ರಾಷ್ಟ್ರೀಯ ಗೋರ್ ಬಂಜಾರ್ ಕ್ರಾಂತಿ ಸಮಿತಿ ವಿಜಯನಗರ ಜಿಲ್ಲಾ ಘಟಕ ಆಗ್ರಹಿಸಿದೆ. ಪ್ರಕರಣ ವಿಜಯಪುರದ ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ,ಆದರೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪದಾಧಿಕಾರಿಗಳು ಆಕ್ರೋಶವ್ಯಕ್ತಪಡಿಸಿದರು.ಸಂಬಂಧಿಸಿದಂತೆ ಸೂಕ್ತ ಕ್ರಮಕ್ಕಾಗಿ ಮುಖ್ಯಮಂತ್ರಿಗಳಿಗೆ ಅವರು ಹಕ್ಕೊತ್ತಾಯ ಮಾಡಿದ್ದಾರೆ, ಹಕ್ಕೋತ್ತಾಯ ಪತ್ರವನ್ನು ಪದಾಧಿಕಾರಿಗಳು ಕೂಡ್ಲಿಗಿ ತಹಶಿಲ್ದಾರರಾದ ಟಿ.ಜಗಧೀಶರವರಿಗೆ ನೀಡಿದ್ದಾರೆ.ಸಮಿತಿ ಮುಖಂಡರು ಮಾತನಾಡಿ,

ಈ ಕೃತ್ಯದಲ್ಲಿ ಭಾಗಿಯಾದರೆನ್ನಲಾದ ಸಂಜು ಹುಲ್ಲೂರ ಮತ್ತು ಇತರರನ್ನು, ಈ ಕೂಡಲೆ ಬಂಧಿಸಿ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಿ ಕೂಡಲೆ ಗಲ್ಲು ಶಿಕ್ಷೆ ಆಗುವ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸಂತ್ರಸ್ತ ಯುವತಿಯ ಕುಟುಂಬಕ್ಕೆ ಸರ್ಕಾರದಿಂದ ಹಾಗೂ ಜಿಲ್ಲಾಡಳಿತದಿಂದ,ಕನಿಷ್ಠ 50 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು.ನಿರ್ಲಕ್ಷ್ಯ ತೋರಿದ್ದಲ್ಲಿ ಸಮಿತಿ ರಾಜ್ಯಾದ್ಯಂತ ತೀವ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗುತ್ತಿದೆ ಪದಾಧಿಕಾರಿಗಳು ಎಚ್ಚರಿಸಿದರು.

ರಾಷ್ಟ್ರೀಯ ಗೋರ್ ಬಂಜಾರ ಕ್ರಾಂತಿ ವಿಜಯನಗರ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶಿವಕುಮಾರ್,ಉಪಾಧ್ಯಕ್ಷ ಎಲ್.ವಿನಾಯಕ ಎಲ್ ಎಸ್ ಮಾತನಾಡಿದರು. ಸಮಿತಿ ಪದಾಧಿಕಾರಿಗಳು ಹಾಗು ಕೂಡ್ಲಿಗಿ ತಾಲ್ಲೂಕಿನ ಪದಾಧಿಕಾರಿಗಳು. ವಿಧ್ಯಾರ್ಥಿಗಳಾದ ಅಕ್ರಮ ಭಾಷಾ. ಗುರುರಾಜ್. ನಾಗರಾಜ್. ಮಹೇಶ್. ಪ್ರಜ್ವಲ್. ಬಸವರಾಜ್. ಅಜಯ್ ಪರಶುರಾಮ್. ವಿನೋದ್. ಮಂಜುನಾಥ್. ಇನ್ನಿತರ ವಿಧ್ಯಾರ್ಥಿಗಳು ಹಾಜರಿದ್ದರು…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend