ಪತ್ರಿಕಾ ಹಾಗೂ ಮಾಧ್ಯಗಳಿಂದ ದೂರ ಸರಿಯುತ್ತಿರುವ ಇಲಾಖೆಗಳ ನಡೆ..ನಿಗೂಡ.
ವಿಜಯನಗರ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಪೊಲೀಸ್ ಇಲಾಖೆ ಮೊದಲ್ಗೊಂಡು,ಬಹುತೇಕ ಇಲಾಖೆಗಳು ಪತ್ರಕರ್ತರಿಂದ ಹಾಗೂ ಮಾಧ್ಯದವರಿಂದ ಬಹುದೂರ ಹಿಂದಕ್ಕೆ ಸರಿಯುತ್ತಿದ್ದಂತೆ ಕಾಣುತ್ತಿದೆ.ಸರ್ಕಾರದಿಂದ ಸಾರ್ವಜನಿಕರ ಸೇವರಗೆಂದೇ ನಿಯೊಜಿಸಲ್ಪಡಯವ ಇಲಾಖೆಗಳು,ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಸಂಪರ್ಕ ಸೇತುವೆಯಾಗಿರುವ ಪತ್ರಿಕೆ ಹಾಗೂ ಮಾಧ್ಯಮ ಕ್ಷೇತ್ರದಿಂದ ಬಹು ದೂರಸರಿತ್ತಿವೆ.ಇಲಾಖೆಗಳ ಸೇವಾ ಸೌಪಭ್ಯಗಳು ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸುವಲ್ಲಿ,ತಾಲೂಕಿನ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.ಸಂಬಂಧಿಸಿದಂತೆ ಹಿರಿಯ ಪತ್ರಕರ್ತರು ಮಾತನಾಡಿ,ಸಾಮಾಜಿಕ ಕಾಳಜಿ ವಹಿಸಿ ವಸ್ತುನಿಷ್ಠ ವರದಿ ಮಾಡೋ ವರದಿಗಾರರಿಗೆ,ಹಲವು ಇಲಾಖಾಧಿಕಾರಿಗಳು ಮಾಹಿತಿಗಳನ್ನು ನೀಡುವುದಿಲ್ಲ.ಸಂಪರ್ಕ ಹೊಂದಿಲ್ಲ ಇದರಿಂದಾಗಿ ಸರ್ಕಾರಿ ಸೌಲಭ್ಯಗಳ ಮಾಹಿತಿ ಸಾರ್ವಜನಿಕ ವಲಯಕ್ಕೆ ಲಭ್ಯವಾಗುವುದಿಲ್ಲ,ಅವು ಕೇವಲ ಪ್ರಭಾವಿಗಳ ಮಧ್ಯವರ್ತಿಗಳ ಭ್ರಷ್ಟ ರಾಜಕಾರಣಿಗಳ ಪಾಲಾಗುವ ಸಾಧ್ಯತೆ ಅಧಿಕವಾಗಿರುತ್ತದೆ.ಇದರಿಂದಾಗಿ ಇಲಾಖಾಧಿಕಾರಿಗಳು ಕೂಡ ಭ್ರಷ್ಟರ ಏಜೆಂಟ್ ರಂತೆ ವರ್ತಿಸಿದಂತಾಗುತ್ತದೆ. ಶಿಕ್ಷಣ ಕಂದಾಯ ,ತಾಲೂಕು ಪಂಚಾಯ್ತಿ,ಸೇರಿದಂತೆ ಎಲ್ಲಾ ಇಲಾಖೆಗಳು ಪತ್ರಕರ್ತರಿಗೆ ಸೂಕ್ತ ಮಾಹಿತಿಗಳನ್ನು ಒದಗಿಸಬೇಕಿದೆ.ಇದನ್ನು ಜಿಲ್ಲಾಧಿಕಾರಿ ಗಳು ಶೀಘ್ರವಾಗಿ ಗಮನಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ,ತಾಲೂಕು ಮಟ್ಟದ ಎಲ್ಲಾ ಇಲಖೆಗಳ ಅಧಿಕಾರಿಗಳು ತಾಲೂಕಿನ ಎಲ್ಲಾ ಪತ್ರಿಕೆ ಹಾಗೂ ಮಾಧ್ಯಮಗಳ ಜೊತೆ. ನಿಖಟ ಸಂಪರ್ಕ ಹೊಂದುವಂತೆ ಕ್ರಮ ಜರುಗಿಸಬೇಕಿದೆ ಎಂದಿದ್ದಾರೆ,ಈ ಮೂಲಕ ಸರ್ಕಾರದ ಸೌಲಭ್ಯಗಳು ಹಾಗೂ ಯೋಜನೆಗಳ ಮಾಹಿತಿ ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವಂತೆ ಸೂಕ್ತ ಕ್ರಮವನ್ನು ಜಿಲ್ಲಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜರುಗಿಬೇಕೆಂದು ಹಿರಿಯ ಪತ್ರಕರ್ತರು ಈ ಮೂಲಕ ಒತ್ತಾಯಿಸಿದ್ದಾರೆ. ಸುವ್ಯವಸ್ಥೆ.ಆರಕ್ಷರ ಗುಪ್ತ ಗುಪ್ತ ನಡೆ ಅನುಮಾನಗಳಿಗೆ ಎಡೆ..!?-ಸದಾ ಸಾರ್ವಜನಿಕರೊಂದಿಗೆ ಬೆರೆತು ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಆರಕ್ಷಕರು, ಸಾರ್ವಜನಿಕ ಸಂಪರ್ಕ ಸೇತುವೆಯಂತೆ ಸೇವೆ ಸಲ್ಲಿಸುವ ಬಹುತೇಕ ಪತ್ರಕರ್ತರ ಹಾಗೂ ಮಾಧ್ಯಮದರ ಸಂಪರ್ಕದಿಂದ ದೂರ ಸರಿದಿದ್ದಾರೆ. ಯಾವುದೇ ಸಬೆಗಳ ಮಾಹಿತಿ ಅಧಿಕಾರಿಗಳು ಬೆಟ್ಟಿ ನೀಡಿದ ಮಾಹಿತಿ,ಅಪರಾಧ ಜಾಗೃತಿ ಸಂದೇಶ ರವಾನೆ ಸೇರಿದಂತೆ.ಇಲಾಖೆಯಿಂದ ಆಯೋಜಿಸಲ್ಪಡುವ ಯಾವುದೇ ಕಾರ್ಯಚಟುವಟಿಕೆಗಳ ಮಾಹಿತಿ ಪತ್ರಕರ್ತರಿಗೆ ಅಲಭ್ಯ, ಸರ್ಕಾರಿ ಮೊಬೈಲ್ ನಂ ಬದಲಾಗಿ ವಾತವೇ ಕಳೆದರೂ ಅದರ ಬಗ್ಗೆ ಮಾಹಿತಿ ಸಾರ್ವಜನಿಕರಿಗೆ ಲಭ್ಯವಿಲ್ಲ. ಸಾರ್ವಜನಿಕ ವಲಯಕ್ಕೆ ಪ್ರಚುರ ಪಡಿಸಬಹುದಾಗಿರುವಂತಹ ಯಾವುದೇ ಅಪರಾಧ ಪ್ರಕರಣಗಳ ಅಗತ್ಯ ಮಾಹಿತಿ,ಪತ್ರಕರ್ತರಿಗೆ ಹಾಗೂ ಮಾಧ್ಯಮದವರಿಗೆ ನೀಡುವಲ್ಲಿ ತಾರತಮ್ಯ ಹಾಗೂ ನಿರಾಕರಣೆ ಮತ್ತು ಅನಗತ್ಯ ವಿಳಂಬ.ಕಾರಣ ಕೇಳಿದರೆ ಉನ್ನತಾಧಿಕಾರಿಗಳ ನಿರ್ಧೇಶನವೆಂದು ಹೇಳಿ ಜಾರಿಕೊಳ್ಳುತ್ತಾರೆ.ಇದು ಪತ್ರಕರ್ತರಲ್ಲಿ ಇಲಾಖಾಧಿಕಾರಿಗಳ ನಡೆಯ ನಿಷ್ಠೆ ಪ್ರಾಮಾಣಿಕತೆಯ ಮೇಲೆ ಶಂಕೆ ಮೂಡಿಸಲು ಕಾರಣವಾಗಲಿದೆ,ಪತ್ರಕರ್ತರನ್ನು ಮಾಧ್ಯಮದವರನ್ನು ತಮ್ಮ ಕೆಲ ಕಾರ್ಯಕ್ರಮಗಳ ಪ್ರಚಾರಕ್ಕೆ ಬಳಸಿಕೊಳ್ಳೋ ಆರಕ್ಷಕರು. ಸಾರ್ವಜನಿಕ ರಲ್ಲಿ ಜಾಗ್ರತೆ ಮೂಡಿಸುವ ಇಲಾಖೆಯು ಸಾರ್ವಜನಿಕರ ಹಿತಕ್ಕಾಗಿ ಆಯೋಜಿಸುವ ಸಭೆಗಳ ಮಾಹಿತಿಗಳನ್ನು,ಅಪರಾಧ ಪ್ರಕರಣಗಳನ್ನು ಭೇದಿಸಿರುವ ಕುರಿತ ಮಾಹಿತಿಗಳನ್ನು ನಿಯಮನುಸಾರ ಪತ್ರಕರ್ತರಿಗೆ ನೀಡುತ್ತಿಲ್ಲ ಎಂದು ಕೆಲ ಹಿರಿಯ ಪತ್ರಕರ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ಇದು ಕೂಡ್ಲಿಗಿ ಹಾಗೂ ಹೊಸಹಳ್ಳಿ ಮತ್ತು ಗುಡೇಕೋಟೆ ಪೊಲೀಸ್ ಠಾಣೆಗಳ ಪಿಎಸ್ಐ ಹಾಗೂ ಸಂಬಂಧಿಸಿದ ಸಿಪಿಐ ರವರ ಗುಪ್ತ ಗುಪ್ತ ನಡೆಗೆ ಸಾಕ್ಷಿಯಾಗಿದೆ,ಪೊಲೀಸ್ ಇಲಾಖೆ ಸಾರ್ವಜನಿಕರ ಸೇವೆಗೆಂದೇ ನಿಯೋಜಿಸಿರುವ ಇಲಾಖೆಯಾಗಿದೆ.ಕಾರಣ ಸಾರ್ವಜನಿಕ ವಲಯದ ಸಂಪರ್ಕ ಸೇತುವೆಯಂತೆ ಸೇವೆಸಲ್ಲಿಸುವ ಪತ್ರಕರ್ತರಿಗೆ ಆರಕ್ಷಕರು ಮಾಹಿತಿ ನೀಡುವಲ್ಲಿ ಏಕೆ ಇಂಜರಿಯುತ್ತಾರೋ ತಿಳಿಯದಾಗಿದೆ,ಆರಕ್ಷರ ಈ ಹಿಂಜರಿಕೆಯ ನಡೆ ಬಹುತೇಕ ಪ್ರಾಮಾಣಿಕ ಪತ್ರಕರ್ತರಲ್ಲಿ ಹತ್ತು ಹಲವು ಅನುಮಾನಗಳನ್ನು ಮೂಡಿಸಿದೆ.ಎಸ್ಟಿ.ಎಸ್ಸಿ ಸಭೆ, ಕುಂದು ಕೊರತೆಗಳ ಅಹವಾಲು ಆಲಿಸುವ ಸಭೆ,ಕಾನೂನು ಅರಿವು ಅಪರಾಧ ತಡೆ ಜಾಗ್ರತೆ.ಇತರೆ ಕಾರ್ಯಕ್ರಮಗಳ ಮಾಹಿತಿ ಮತ್ತು ಹಿರಿಯ ಅಧಿಕಾರಿಗಳ ಭೆಟ್ಟಿ,ಅಪರಾಧ ಪ್ರಕರಣ ಭೇದಿಸಿದ ಬಗ್ಗೆ ಅಗತ್ಯ ಮಾಹಿತಿ ನೀಡುವಲ್ಲಿ ಹಿಂಜರಿಕೆ.ಇದು ಸಾರ್ವಜನಿಕ ವಲಯಕ್ಕೆ ಹಾಗೂ ಪತ್ರಿಕೆ ರಂಗದಲ್ಲಿ ಸೇವೆಸಲ್ಲಿಸುವವರಲ್ಲಿ ಹತ್ತಾರು ಅನುಮಾನ ಮೂಡಿಸುತ್ತಿದೆ. ಪೊಲೀಸ್ ಇಲಾಖೆ ಖಾಸಗೀಕರಣ ಹೊಂದಿದೆನಾ..!?ಎಂಬ ಪ್ರೆಶ್ನೆ ನಾಗರೀಕರಲ್ಲಿ ಹಲವು ಪತ್ರಕರ್ತರಲ್ಲಿ ಮೂಡುವಂತೆ ಮಾಡಿದೆ ಎಂದು ಹಿರಿಯ ಪತ್ರಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ವಿಜಯನಗರ ಜಿಲ್ಲೆಯಾದ ಮೇಲೆ ಪೊಲೀಸ್ ಇಲಾಖೆಯ ಸಾರ್ವಜನಿಕರ ಸೇವೆಗಾಗಿ ಸಂಪರ್ಕಿಸಲು, ಸರ್ಕಾರ ನೀಡಿರುವ ಮೊಬೈಲ್ ನಂಬರ್ ಗಳು ವಾರದ ಹಿಂದೆ ಬದಲಾಗಿದ್ದು,ಅದರ ಕುರಿತು ಮಾಹಿತಿ ನೀಡಬೇಕಿರುವ ಇಲಾಖಾಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ.ಇಂತಹ ಅಲವು ನಿದರ್ಶನಗಳಿದ್ದು ಇದು ಹೀಗಿಯೇ ಮುಂದುವರಿಯ ಬಾರದು.ಇಲಾಖೆ ಸಾರ್ವಜನಿಕರೊಂದಿಗೆ ಹಾಗೂ ಪತ್ರಕರ್ತರೊಂದಿಗೆ ನಿಖಟ ಸಂಪರ್ಕ ಹೊಂದುವಂತೆ,ಜಿಲ್ಲಾಪೊಲೀಸ್ ವರಿಷ್ಠಾದಿಕಾರಿಗಳು ಕ್ರಮ ಜರುಗಿಸಬೇಕಿದೆ,ಈ ಮೂಲಕ ಪೊಲೀಸ್ ಇಲಾಖೆ ಜನಸಾಮಾನ್ಯರೊಂದಿಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡಬಹುದಾಗಿದೆ ಮತ್ತು ಜನಸ್ನೇಹಿ ಪೊಲೀಸ್ ಸೇವೆ ನೀಡಬೆಕಿದೆ ಎಂದು ಹಿರಿಯ ಪತ್ರಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

ವರದಿ.ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
