ನ್ಯಾಯ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಜಿಲ್ಲಾ ಪ್ರಧಾನ ನ್ಯಾಯಾಧೀಶ ಪ್ರೇಮಾವತಿ ಹೇಳಿಕೆ.!
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಜೆ.ಎಂ.ಎಫ್ ನ್ಯಾಯಾಲಯದ ಆವರಣದಲ್ಲಿ ನಡೆದ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಶ್ರೇಣಿ ನ್ಯಾಯಪೀಠ ಚಾಲನೆ ನೀಡಿ ಮಾತನಾಡಿದರು. ಹಿರಿಯ ಶ್ರೇಣಿ ಪೀಠದ ವ್ಯಾಪ್ತಿಯ ಪ್ರಕರಣ ಇತ್ಯರ್ಥ ಕೊಳ್ಳಲು ಚಳ್ಳಕೆರೆ ಅಥವಾ ಬಳ್ಳಾರಿ ಹೋಗಬೇಕಿತ್ತು ಇದೀಗ ಆ ಸಮಸ್ಯೆ ನಿವಾರಣೆಯಾಗಿದೆ ಬಾಕಿ ಇರುವ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯಾರ್ಥ ಮಾಡಿಸಲಾಗುವುದು. ನ್ಯಾಯಾಧೀಶರಿಗೆ ವಕೀಲರು ಸಹಕಾರ ನೀಡುವ ಮೂಲಕ ಸಂವಿಧಾನದ ಆಶಯವನ್ನು ತಿಳಿಯಬೇಕು. ಕಾನೂನು ಸೇವೆಗಳು ಕಟ್ಟಕಡೆಯ ವ್ಯಕ್ತಿಯ ಮನೆ ಬಾಗಲಿಗೆ ಕೊಂಡೊಯ್ಯುವ ವ್ಯವಸ್ಥೆ ಆಗಬೇಕಿದೆ ಎಂದರು. ಚಳ್ಳಿಕೆರೆ ತಹಸಿಲ್ದಾರ್ ಎನ್ ರಘುಮೂರ್ತಿ ಮಾತನಾಡಿ ನಮ್ಮ ಚಳ್ಳಕೆರೆಯಲ್ಲಿ ಸುಮಾರು ಹತ್ತು ಹಳ್ಳಿಗಳನ್ನು ದತ್ತು ತೆಗೆದುಕೊಂಡು .ಆ ಗ್ರಾಮಗಳನ್ನು ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗ್ರಾಮಗಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ಆ ಗ್ರಾಮಗಳಿಗೆ ಯಾವುದೇ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು .
ಇದೇ ತರ ಎಲ್ಲಾ ಹಳ್ಳಿಗಳಿಗೂ ನಾವು ವಿಸ್ತರಿಸಬೇಕು ಎಂದು ಹೇಳಿದರು. ಮೊಳಕಾಲ್ಮೂರು ಚಳ್ಳಿಕೆರೆ ಹಿಂದುಳಿದ ಪ್ರದೇಶವಾಗಿದೆ ಇಲ್ಲಿ ಜನರ ದುರ್ಬಲತೆ ಅನಕ್ಷರತೆಯೇ ಮೂಲ ಕಾರಣವಾಗಿದೆ ಎಂದು ತಿಳಿಸಿದರು. ರಾಜ್ಯ ವಕೀಲ ಪರಿಷತ್ ಸದಸ್ಯ ಎಸ್ಎಫ್ ಗೌತಮ್ ಚಂದ್ ಮಾತನಾಡಿದರು .ಈ ಸಂದರ್ಭದಲ್ಲಿ ವಕೀಲ ಸಂಘದ ತಾಲೂಕು ಅಧ್ಯಕ್ಷ ಆರ್ ಆನಂದ್ ,ತಹಸಿಲ್ದಾರ್ ಟಿ ಸುರೇಶ್ ಕುಮಾರ್, ಜಾನಕಿರಾಮ್ ವಿಜಯಭಾಸ್ಕರ್ ,ಚಳಕೆರೆ ನಾಯಕ ಹಿರಿಯ ಶ್ರೇಣಿ ನ್ಯಾಯದೀಶೆ ರೇಷ್ಮೆ ಕೆ ಗೋಣಿ .ಮತು ಮೊಳಕಾಲ್ಮೂರು ಎಲ್ಲಾ ವಕೀಲರು ಮತ್ತು ಚಳ್ಳಕೆರೆಯ ಕೆಲ ವಕೀಲರು ನ್ಯಾಯದ ಎಲ್ಲಾ ಸಿಬ್ಬಂಧಿಗಳು ಉಪಸ್ಥಿತರಿದ್ದರು….

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
