ಮನರೇಗಾ:-ಯೋಜನೆಯಲ್ಲಿ ಗದಗ್ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಬರೋಬ್ಬರಿ ಕರ್ಮಕಾಂಡ ನಡೆದಿರುವುದನ್ನು ನೋಡಿದರೆ ಗೊತ್ತಾಗುತ್ತದೆ ಇಲ್ಲಿನ “ಅಭಿವೃದ್ಧಿ ಅಧಿಕಾರಿ ಎಷ್ಟರ ಮಟ್ಟಿಗೆ ಮೈ ಮೇಲೆ ಕಬರನ್ನು “ಇಟ್ಟುಕೊಂಡು ಸರ್ಕಾರದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ನೋಡಿ ಇಲ್ಲೇ ಇರುವುದು ಈತನ ಅಸಲಿ ಆಟ, ಬೀದರಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮಪಂಚಾಯಿತಿಯನ್ನು ಹರಾಜಿಗಿಟ್ಟು ನನಗಿಷ್ಟು ತಮಗಿಷ್ಟು ಎನ್ನುವಂತೆ ಬೇಕಾಬಿಟ್ಟಿಯಾಗಿ ಕಾರ್ಯವನ್ನು ನಿರ್ವಹಿಸುತ್ತಾರೆ ಸರ್, ಎನ್ನುತ್ತಾರೆ ಸತ್ಯವನ್ನು ನೋಡಿದ ಹಾಗೂ ಈ ಒಬ್ಬ ಭ್ರಷ್ಟಅಧಿಕಾರಿಯ ಉಪಟಳಕ್ಕೆ ಒಳಗಾದ ಸಾರ್ವಜನಿಕರು, ನೋಡಿ ಈ ಆಸಾಮಿ “ಸತ್ತವರ ಹೆಸರಲ್ಲಿ ಕೆಲಸವನ್ನು ಮಾಡಿಸಿ ಸತ್ತವರ ಒಂದು ಬ್ಯಾಂಕ್ ಖಾತೆಗೆ ಸರ್ಕಾರದ ಹಣವನ್ನು ನನ್ನದು ನಮ್ಮಪ್ಪಂದು ಬಿಡು ಹೋದರೆ ಹೋಗಲಿ ಇದು ಯಾರಪ್ಪನ ಹಣ ಎಂದು ಸತ್ತವರ ಹೆಸರಿನ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿ ನನಗೆ ಗೊತ್ತಿಲ್ಲ ಸರ್ ನಮ್ಮ ಸಿಬ್ಬಂದಿಗಳ ಅಜಾಗರುಕತೆಯಿಂದ ಇದು ಆಗಿದೆ ಎನ್ನುವ ಉಡಾಪೆ ಉತ್ತರವನ್ನು ಕೊಟ್ಟು ನುಣುಪಾಗಿ ಜಾರಿಕೊಳ್ಳುತ್ತಾನೆ ಆಸಾಮಿ ನೋಡಿ “ಎಂತಹ ಬೇಜವಾಬ್ದಾರಿತನದ ಮಾತು ಆಗಾದರೆ ಇವರು ಇಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿರುದೇ ತುಂಬಾ ವ್ಯರ್ಥ ಅನಿಸುತ್ತೆ ಅಲ್ವಾ, ಒಬ್ಬ ಜವಾಬ್ದಾರಿತನದ ಅಧಿಕಾರಿ ಹೇಳುವ ಮಾತ ಇದು ನೀವೇ ಹೇಳಿ, ಇದರಂತೆ ಇನ್ನೆಷ್ಟು ಸತ್ತವರ, ಲಂಚವನ್ನು ಕೊಟ್ಟವರ ಖಾತೆಗೆ ಹೇನೇನು ಆಗಿರಬಹುದೊ ಆ ದೇವರಿಗೆ ಗೊತ್ತು ಬಿಡಿ ಸರ್ ಅನ್ನುತ್ತಾರೆ ಅಲ್ಲಿನ ಕೆಲ ಗ್ರಾಮಸ್ಥರು, ಹಣವನ್ನು ಕೊಟ್ಟರೆ ಮಾತ್ರ ಜಿಪಿಎಸ್, ಇಲ್ಲ ಅಂದರೆ ಎಲ್ಲಾ ಪುಸ್ ಅನ್ನುವಂತಾಗಿದೆ ನಮ್ಮ ಒಂದು ಪರಿಸ್ಥಿತಿ ಎನ್ನುತ್ತಾರೆ ಅಲ್ಲಿನ ನೋವುಂಡ ಸಾರ್ವಜನಿಕರು.
ಇಷ್ಟೆಲ್ಲಾ ಮಾಡುತ್ತಿರುವುದಕ್ಕೆ ಈ ಒಬ್ಬ ಅಭಿವೃದ್ಧಿ ಅಧಿಕಾರಿಯ ಇಂದೇ ಇನ್ನೆಷ್ಟು ಕಾಣದ ಕೈಗಳು ಕೆಲಸವನ್ನು ಮಾಡುತ್ತಿವೇಯೋ ಎನ್ನುವ ಒಂದು ಅನುಮಾನ ಎಲ್ಲರನ್ನು ಕಾಡುತ್ತಿದೆ ಹಾಗೂ ಇಷ್ಟೆಲ್ಲಾ ಆದರೂ ಸಹ ಮೇಲಾಧಿಕಾರಿಗಳು ಸರಿಯಾಗಿ ಪರಿಶೀಲನೆಯನ್ನು ಮಾಡಿದ್ದರೋ ಅಥವಾ ಇಲ್ಲವೋ ಎನ್ನುವುದನ್ನು ನೋಡಿದರೆ ಇನ್ನೂ ಸಾಕಷ್ಟು ಅನುಮಾನಗಳು ಮೂಡುವುದರಲ್ಲಿ ಎರಡು ಮಾತಿಲ್ಲ ಬಿಡಿ ಸರ್ ಎನ್ನುತ್ತಾರೆ ಅಲ್ಲಿನ ಸಾರ್ವಜನಿಕರು…

ವರದಿ.ಬಸವರಾಜ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
