ಜಿಲ್ಲಾ ಮಟ್ಟದ ಸೆಮಿಫೈನಲ್ ಹಾಗೂ ಫೈನಲ್ ಗಾಯನ ಸ್ಪರ್ಧೆಗೆ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಕ್ಷೇತ್ರದ ಜನಮೆಚ್ಚಿದ ನಾಯಕಿ #ಎಂ_ಪಿ_ವೀಣಾ_ಮಹಾಂತೇಶ್!!
ಹರಪನಹಳ್ಳಿ ಪಟ್ಟಣದ ಎ.ಡಿ.ಬಿ ಕಾಲೇಜು ಸೆಮಿನಾರ್ ಹಾಲ್ ನಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಸೆಮಿಫೈನಲ್ ಹಾಗೂ ಫೈನಲ್ ಗಾಯನ ಸ್ಪರ್ಧೆಯಲ್ಲಿ ನಮ್ಮ ಪಕ್ಷದ ಜನಪ್ರಿಯ ನಾಯಕಿ, ಸದಾ ಎಲ್ಲ ವಿಷಯದಲ್ಲಿಯೂ ಆಸಕ್ತಿ ಹೊಂದಿರುವ ಪ್ರೀತಿಯ ಸೇವಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂ_ಪಿ_ವೀಣಾ_ಮಹಾಂತೇಶ್ ಅವರು ಭಾಗವಹಿಸಿ ಸ್ಪರ್ಧಾಕಾಂಕ್ಷಿಗಳಿಗೆ ಹುರಿದುಂಬಿಸಿದರು.
ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಂ.ಪಿ ವೀಣಕ್ಕನವರು, ಸಾರ್ವಜನಿಕ ಸೇವೆಯೊಂದಿಗೆ ಕಲೆಗೆ ಬಹುಪಾಲು ಪ್ರೋತ್ಸಾಹ ನೀಡುವ ಕುಟುಂಬ ನಮ್ಮದು. ಅದಕ್ಕೆ ಉದಾಹರಣೆ ಎಂಬಂತೆ ಹೂವಿನ ಹಡಗಲಿಯಲ್ಲಿ ರಂಗಭಾರತಿಯಂತ ಬಹುದೊಡ್ಡ ವೇದಿಕೆಯನ್ನು ಸ್ಥಾಪಿಸಿ ಎಲ್ಲ ವರ್ಗದ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ನಮ್ಮ ತಂದೆ ಎಂ.ಪಿ ಪ್ರಕಾಶ್ ಹಾಗೂ ಅಣ್ಣ ಎಂ.ಪಿ ರವೀಂದ್ರ ಅವರು ಸಾಂಸ್ಕೃತಿಕ ರಾಯಭಾರಿಗಳಾಗಿದ್ದರು. ಅವರ ದಾರಿಯಲ್ಲಿಯೇ ಸಾಗುತ್ತಿರುವ ನಾನು ಎಲ್ಲ ಕಲಾವಿದರಿಗೂ ಪ್ರೋತ್ಸಾಹ, ಗೌರವ ನೀಡುವುದರ ಜೊತೆಗೆ ಅವರ ಕುಂದುಕೊರತೆಗಳನ್ನು ನಿವಾರಿಸಲು ಸದಾ ಬೆನ್ನೆಲುಬಾಗಿ ನಿಲ್ಲುವೆ ಎಂದು ನುಡಿದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
