ಚುಟುಕು ಸಾಹಿತ್ಯ ಕವಿ-ಕಾವ್ಯ ಮೇಳ: ಬಹುಮಾನ ವಿತರಣೆ* **
*ಹೊಸಕೋಟಿ (ತಾ. ರಾಮದುರ್ಗ)*
*ರಮದುರ್ಗ ತಾಲೂಕಿನ ಹೊಸಕೋಟಿಯ ಶ್ರೀ ರೇವಣಸಿದ್ದೇಶ್ವರ ಸಂಯುಕ್ತ ಪ. ಪೂ. ಮಹಾವಿದ್ಯಾಲಯದಲ್ಲಿ ದಿನಾಂಕ: ೦9-10-2021ರ ಶನಿವಾರ ಬೆಳಿಗ್ಗೆ ಚುಟುಕು ಸಾಹಿತ್ಯ ಕವಿ-ಕಾವ್ಯ ಮೇಳ ಸ್ಪರ್ಧಾತ್ಮಕ ಚುಟುಕು ಕಾವ್ಯವಾಚನ ಕಾರ್ಯಕ್ರಮ ಜರುಗಿತು. ದಸರಾ ಹಬ್ಬ-2021 ರ ಅಂಗವಾಗಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕ ರಾಮದುರ್ಗ ಹಾಗೂ ಸ್ಥಳೀಯ ಎಸ್ ಆರ್ ಪಿಯು ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಈ ಸ್ಪರ್ಧಾತ್ಮಕ ಚುಟುಕು ಸಾಹಿತ್ಯ ಕಾವ್ಯವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಚಾರ್ಯರು ವಾಯ್ ಬಿ ನಾಯಕ ಉದ್ಘಾಟಿಸಿದರು. ಸ್ಥಳೀಯ ಶ್ರೀ ರೇವಣಸಿದ್ದೇಶ್ವರ ಮಠದ ಶ್ರೀ ಅಭಿನವ ರೇವಯ್ಯ ಮಹಾಸ್ವಾಮಿಗಳು ಹಾಗೂ ತೊಂಡಿಕಟ್ಟಿಯ ಶ್ರೀ ಗಾಳೇಶ್ವರ ಮಠದ ಶ್ರೀ ವೆಂಕಟೇಶ್ವರ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ವೆಂಕಟೇಶ ಹುಣಸಿಕಟ್ಟಿ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ್ದರು. 820 ಭಕ್ತಿಗೀತೆಗಳ ಕ್ಯಾಸೆಟ್ ಬಿಡುಗಡೆ ಮಾಡಿದ ಖ್ಯಾತಿಯ ಬಾಗಲಕೋಟೆಯ ಸಿನಿ ಹಾಗೂ ಭಕ್ತಿ ಸಂಗೀತ ಗಾಯನದ ಸಾಹಿತಿ ಶ್ರೀ ಬಸವರಾಜ ಕೊಣ್ಣೂರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅತಿಥಿಗಳಾಗಿ ನಿವ್ರತ್ತ ಪ್ರಾಚಾರ್ಯರು ಎಲ್. ಎಸ್. ಕೊಳಚಿ, ಗ್ರಾ. ಪಂ. ಅಧ್ಯಕ್ಷರು ವಿಠ್ಠಲ ಪೂಜೇರ, ಉಪಾಧ್ಯಕ್ಷರು ಶ್ರೀಮತಿ ಮಂಗಲಾ ಪಾಟೀಲ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಶ್ರೀಮತಿ ವಿಜಯಲಕ್ಷ್ಮಿ ನಾಡಗೌಡ್ರ, ಉಪನ್ಯಾಸಕರು ಪಿ. ಎಸ್. ಕರ್ಕಿ, ಮುಖ್ಯೋಪಾಧ್ಯಾಯರು ಬಿ. ಪಿ. ಕಟ್ಟಿಮನಿ, ಹೊಸಕೋಟಿ ಸರ್ಕಾರಿ ಹಿ. ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರು ಎಮ್. ಎಚ್. ಕೊಪ್ಪದ, ಹಾಗೂ ಈರಣ್ಣ ಚಿಲಮಿ ಉಪಸ್ಥಿತರಿದ್ದರು. ಸಾಲಹಳ್ಳಿಯ ಹಿರಿಯ ಸಾಹಿತಿ ಹಾಗೂ ಚುಸಾಪ ನಿಕಟಪೂರ್ವ ಅಧ್ಯಕ್ಷರು ಆರ್. ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಚುಟುಕು ಸಾಹಿತ್ಯ ಕವಿ-ಕಾವ್ಯ ಮೇಳದ ಸ್ಪರ್ಧಾತ್ಮಕ ಕಾವ್ಯವಾಚನದಲ್ಲಿ ಕಿರಿಯರ ವಿಭಾಗದ ಸ್ಪರ್ಧೆಯಲ್ಲಿ ಕು. ಕಾವ್ಯಾ ಸಣ್ಣತಮ್ಮಪ್ಪಗೋಳ ಪ್ರಥಮ, ಕು. ಅಕ್ಕಮ್ಮ ಬಾಗವಾನ ದ್ವಿತೀಯ ಹಾಗೂ ಕು. ಸ್ನೇಹಾ ಕಾನನ್ನವರ ತೃತೀಯ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದರು. ಹಿರಿಯರ ವಿಭಾಗದ ಚುಟುಕು ಕಾವ್ಯವಾಚನ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ ಶಿರ್ಕೆ ಪ್ರಥಮ, ಎಲ್. ಎಸ್. ಕೊಳಚಿ ದ್ವಿತೀಯ ಹಾಗೂ ಸಿಕಂದರ ಮಹಾತ ತೃತೀಯ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಪಡೆದರು. ಚುಟುಕು ಸಾಹಿತ್ಯ ಪರಿಷತ್ತು ರಾಮದುರ್ಗ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಹಾಗೂ ಹಿರಿಯ ಸಾಹಿತಿಗಳನ್ನು ಮತ್ತು ಕಲಾವಿದರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಗಣ್ಯರು ಶ್ರೀಮತಿ ಶೈಲಾ ಯ. ಹೊಸಮನಿ, ಜಾನಪದ ಕಲಾವಿದೆ ಶ್ರೀಮತಿ ಶಂಕ್ರೆಮ್ಮ ಮುಗಳಿ, ಚುಸಾಪ ಉಪಾಧ್ಯಕ್ಷ ಬಸನಗೌಡ ಆರ್. ಪಾಟೀಲ ತಿಮ್ಮಾಪೂರ ಚುಸಾಪ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಿಸಿದ ಪ್ರ. ಕಾರ್ಯದರ್ಶಿ ಸೋಮಶೇಖರ ವೀ. ಸೊಗಲದ ಸ್ವಾಗತಿಸಿದರು. ಶಿಕ್ಷಕರು ಬಿ. ವಿ. ಕೊಪ್ಪದ ವಂದಿಸಿದರು…

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ ಜಿಲ್ಲಾ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
