ಹಿಂದು ಗಳಾದ ನಮಗೆ ಮುಸ್ಲಿಮರನ್ನು ನೋಡಿ ಕಲಿಯಲು ಬಹಳಷ್ಟಿದೆ..”””””””!
ಮೈಸೂರು ಆಜಂನೇಯ ದೇವಾಲಯ ಸರ್ಕಾರದ ಆದೇಶ ಮೇರೆಗೆ ಹೊಡೆದುರುಳಿಸಿದಾಗ ನಮ್ಮ ಹಲವು ಹಿಂದು ನಾಯಕರು ತಾಕತ್ತಿದ್ದರೆ ಮಸೀದಿಯನ್ನು ದ್ವಂಸ ಮಾಡಿ ಎಂದು ಸವಾಲೆಸೆದಿದ್ದರು.ಮಸೀದಿಯನ್ನು ದ್ವಂಸ ಮಾಡಿದರೆ ಅದನ್ನು ಹಿಂದೂ ದೇವಾಲಯದ ದ್ವಂಸಕ್ಕೆ ಪರಿಹಾರವಾಗುತ್ತದೆಯೇ ? ಮಸೀದಿ ದ್ವಂಸ ಮಾಡಿದರೆ ಮನಸ್ಸು ಖುಷಿಪಡುವಷ್ಟು ಸಣ್ಣತನವಾಯಿತೇ ನಮ್ಮ ಮನಸ್ಸುಗಳು.
ಆದರೆ, ದೇವಸ್ಥಾನ ದ್ವಂಸಗೊಂಡಾಗ ಯಾವ ಮುಸ್ಲಿಮನೂ ಸಂತೋಷ ವ್ಯಕ್ತ ಪಡಿಸಲಿಲ್ಲ. ಅದನ್ನು ಖಂಡಿಸಿದ್ದರು.ಗುಜರಾತ್ ನಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮಸೀದಿಗಳನ್ನು ,ದರ್ಗಾಗಳನ್ನು ದ್ವಂಸ ಮಾಡಿದಾಗ ನಾವು ಸಂಭ್ರಮ ಪಟ್ಟೆವು. ಅವರು ದೇವಾಲಯ ವಿರುದ್ಧ ಮಾತನಾಡಲಿಲ್ಲ. ಅಕ್ರಮವಾಗಿ ನಿರ್ಮಿಸಿದ ಯಾವ ಮಂದಿರ ಗಳ ವಿರುದ್ಧವೂ ದೂರು ದಾಖಲಿಸಿದ್ದು ಕಾಣಲು ಸಾಧ್ಯವಿಲ್ಲ.
ಮುಸ್ಲಿಮರಿಗೆ ಸರ್ಕಾರ ಯಾವ ಸವಲತ್ತು ನೀಡಿದರೂ ತಕ್ಷಣ ಹಿಂದು ಸಂಘಟನೆಯ ನಾಯಕರು ಅದರ ವಿರುದ್ಧ ಮಾತನಾಡುತ್ತಾರೆ,ಶಾದಿ ಭಾಗ್ಯ ಇರಲಿ,ವಕ್ಪ್ ವತಿಯಿಂದ ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ಒಂದು ಲಕ್ಷ ಅನುದಾನ ಇರಲಿ ಹಿಂದು ಸಂಘಟನೆಯ ನಾಯಕರ ವಿರೋಧ ವ್ಯಕ್ತ ಪಡಿಸಿದ್ದರು.ಈ ಸವಲತ್ತು ಪಡೆಯುವವರು ಈ ದೇಶವನ್ನು ಪ್ರೀತಿಸುವ ಬಡವರ್ಗ ಮುಸ್ಲಿಮರು. ನಾವು ದೇಶ ದ್ರೋಹಿ ಮುಸ್ಲಿಮರ ವಿರುದ್ಧ ಎನ್ನುವ ಹಿಂದೂ ನಾಯಕರು ಬಡ ಮುಸ್ಲಿಮರಿಗೆ ಸಿಗುವ ಸವಲತ್ತನ್ನು ವಿರೋಧಿಸುತ್ತಾರೆ.
ಯಡಿಯೂರಪ್ಪ ಸರ್ಕಾರ ಮುಜರಾಯಿ ಇಲಾಖೆಗೆ ಕೋಟಿ,ಕೋಟಿ ಅನುದಾನ ಕೊಟ್ಟಾದ, ಹಿಂದುಗಳ ಜಾತಿ ಲೆಕ್ಕಾಚಾರ ದಲ್ಲಿ ಮೀಸಲಾತಿ ಘೋಷಣೆ ಯಾದಾಗ ಒಂದೇ ಒಂದು ಮುಸ್ಲಿಂ ನಾಯಕ ಅದರ ವಿರುದ್ಧ ಮಾತೆತ್ತಲಿಲ್ಲ. ಜಾತ್ರೆ ಹೆಸರಲ್ಲಿ, ಯಕ್ಷಗಾನದ ಹೆಸರಲ್ಲಿ ರಾತ್ರಿ ಯಿಂದ ಬೆಳಿಗ್ಗಿನ ತನಕ ಶಬ್ದ ಉಂಟು ಮಾಡಿ ನಿದ್ರೆಗೆ ಭಂಗ ತಂದರೂ ಅದರ ಬಗ್ಗೆ ಒಂದೇ ಒಂದು ದೂರ ಮುಸ್ಲಿಮರು ದಾಖಲಿಸಿದ ಚರಿತ್ರೆ ಇಲ್ಲ.
ಇದೀಗ ಮುತಾಲಿಕ್ ಎಂಬ ಹಿಂದು ನಾಯಕ ಬಾಂಗ್ಗೆ ಮೈಕ ಬಳಸುವುದರ ವಿರುದ್ಧ ಗುಡುಗಿದ್ದಾರೆ. ಮುಸ್ಲಿಮರ ಬಾಂಗ್ ಐದು ನಿಮಿಷಗಳಲ್ಲಿ ಮುಗಿದು ಹೋಗುವಂತದ್ದು. ನಮ್ಮ ಜಾತ್ರೆಗಳ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ ಪೂರ್ತಿ ನಡೆಯುತ್ತವೆ.ನಮಗೆ ತೊಂದರೆ ಯಾಗುತ್ತದೆ ಎಂದು ಯಾವ ಮುಸ್ಲಿಮರು ಚಕಾರ ಎತ್ತಿದ ಇತಿಹಾಸ ಇಲ್ಲ.
ಹಿಂದುಗಳಾದ ನಾವು ಪರಧರ್ಮ ಸಹಿಷ್ಣುತಾವಾದಿಗಳೆನ್ನುತ್ತೇವೆ. ಆದರೆ, ನಮ್ಮ ಕೆಲವು ನಾಯಕರ ವರ್ತನೆ ನಿಜಕ್ಕೂ ಹಿಂದೂ ಸಮಾಜಕ್ಕೆ ಅಪಮಾನ ವಾಗಿದೆ. ಭಾರತದ ಕಾನೂನು ಮುಸ್ಲಿಮರಂತೆ ಹಿಂದುಗಳಿಗೂ ಅನ್ವಹಿಸುತ್ತದೆ. ನಾವು ಬಾಂಗ್ ವಿರುದ್ಧ ದೂರ ದಾಖಲಿಸುವಾಗ ಅವರ ನಮ್ಮ ಜಾತ್ರೆಗಳ ವಿರುದ್ಧ ಇತರ ಹಿಂದೂ ಕಾರ್ಯಕ್ರಮ ಗಳ ವಿರುದ್ಧ ಯಾವುದೇ ಕೇಸು ದಾಖಲಿಸುತ್ತಿಲ್ಲ ಎಂದಾದರೆ ನಿಜಕ್ಕೂ ಅವರ ನಿಲುವನ್ನು ಮೆಚ್ಚಬೇಕಲ್ಲವೇ ?
ನಾವು ಮುಸ್ಲಿಮರನ್ನು ಎಷ್ಟು ದ್ವೇಷಿಸುತ್ತೇವೆ ಅದಕ್ಕಿಂತ ಹೆಚ್ಚಾಗಿ ಅವರು ನಮ್ಮನ್ನು ಪ್ರೀತಿಸುತ್ತಾರೆ. ಹಿಂದುಗಳು ಒಂದು ಎನ್ನುತ್ತೇವೆ. ಜಾತಿಯ ವಿಷಯದಲ್ಲಿ ಮುಖಸಿಂಡರಿಸಿ ನಡೆಯುತ್ತೇವೆ. ಕೊರೋನ, ಲಾಕ್ಡಾನ್ ಸಮಯದಲ್ಲಿ ಅತೀ ಹೆಚ್ಚು ಹಿಂದುಗಳಿಗೆ ನೆರವಾದವರು ಮುಸ್ಲಿಮರು. ಶವ ಸುಡಲು ಯಾರೂ ಇಲ್ಲವಾದಾಗ ಹಿಂದುಗಳ ಶವವನ್ನು ಗೌರವಯುತವಾಗಿ ಹಿಂದೂ ಸಂಪ್ರದಾಯ ದಂತೆ ಸುಟ್ಟವರು ಮುಸ್ಲಿಮರು. ಲಾಕ್ಡಾನ್ ಸಮಯದಲ್ಲಿ ಹಿಂದುಗಳ ಮನೆಗೆ ಜಾತಿ ನೋಡದೆ ಆಹಾರ ವಸ್ತುಗಳನ್ನು ನೀಡಿದವರು ಮುಸ್ಲಿಮರು. ರಕ್ತ ಬೇಕಾದಾಗ,ಪ್ಲಾಸ್ಮಾ ಅಗತ್ಯ ಇದ್ದಾಗ ನೀಡಿ ನೆರವಾದವರು ಮುಸ್ಲಿಮರು. ಆಸ್ಪತ್ರೆ ಗಳಲ್ಲಿ ರಕ್ತ ಅಗತ್ಯ ಬಿದ್ದಾಗ ಅತೀ ಹೆಚ್ಚು ಹಿಂದು ಗಳಿಗೆ ರಕ್ತ ನೀಡಿದವರ ವಿವರ ನೋಡಿದರೆ ಅಧಿಕವೂ ಮುಸ್ಲಿಮರನ್ನೇ ಕಾಣಬಹುದು.
ಮುಸ್ಲಿಮರ ವಿರುದ್ಧ ಎಷ್ಟೇ ದ್ವೇಷ ಕಾರಿದರೂ ನಮ್ಮ ಕಷ್ಟ ಕಾಲದಲ್ಲಿ ನೆರವಾಗುವವರು ಅವರೇ. ನಾವು ಮಾತ್ರ ನಮ್ಮ ಜಾತಿ ನೋಡಿ ಸಹಾಯಮಾಡುತ್ತೇವೆ. ಬೇರೆ ಜಾತಿಯವನಾದರೆ ಆತ ಹಿಂದುವಾದರೂ ತಿರುಗಿ ನೋಡುವುದಿಲ್ಲ. ಹಿಂದೂ ಸಮಾಜ ಬದಲಾಗಬೇಕು. ಹಿಂದು ಸಂಘಟನೆಯ ನಾಯಕರು ಸಣ್ಣಪುಟ್ಟ ಕಾರ್ಯಗಳಿಗೆ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಹಿಂದು ನಾಯಕರ ವರ್ತನೆ ಹಿಂದುಗಳಿಗೆಯೇ ಅಸಹ್ಯ ಹುಟ್ಟುತ್ತವೆ ಎಂಬುದು ತಪ್ಪಲ್ಲ… ಸುಂದರ ಸುರತ್ಕಲ್ಲ
ರವಿನಂದನ
ಪ್ರದಾನ ಕಾರ್ಯದರ್ಶಿ
ಕೆ.ಪಿ.ಸಿ.ಸಿ ಸಾಮಾಜಿಕ ಜಾಲತಾಣ ಬಾಗಲಕೋಟೆ ಜಿಲ್ಲೆ..

ವರದಿ. ನ್ಯೂಸ್ ಬ್ಯುರೋ, ಪ್ರತಾಪ್, ಸಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
