ಸಿಂಧನೂರು :ಅಂಭಾಮಠದಲ್ಲಿ ಬಿಜೆಪಿಯಿಂದ ಸಾಧು ಸಂತರಿಗೆ ಹೊದಿಕೆ ವಿತರಣೆ.
ಭಾರತೀಯ ಜನತಾ ಪಾರ್ಟಿ ಸಿಂಧನೂರು ಗ್ರಾಮೀಣ ರೈತ ಮೋರ್ಚಾ ವತಿಯಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನದ 15ನೇ ದಿನದ ಅಂಗವಾಗಿ ಇಂದು ಸಿದ್ದ ಪರ್ವತ ಶ್ರೀ ಅಂಬಾದೇವಿ ದೇವಸ್ಥಾನ ಅಂಬಾಮಠದಲ್ಲಿ ಮನೆ ಮಠವಿಲ್ಲದೆ ಗುಡ್ಡ ಗವಿಗಳಲ್ಲಿ ಚಳಿ ಮತ್ತು ಮಳೆಯಲ್ಲಿ ವಾಸಿಸುವ ಸಾಧು ಸಂತರಿಗೆ ಹೊದಿಕೆಗಳನ್ನು( ಜಮಖಾನ ) ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಹನುಮೇಶ್ ಸಾಲಗುಂದ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ವೆಂಕನಗೌಡ ಸಾಸಲಮರಿ, ಗ್ರಾಮೀಣ ರೈತ ಮೋರ್ಚಾ ಅಧ್ಯಕ್ಷ ಗನ್ನಿ ವೀರರಾಜು ಬಂಗಾರಿಕ್ಯಾಂಪ್, ನಗರ ರೈತಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಕಾಟಗಲ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಕುಲಕರ್ಣಿ, ಮಲ್ಲಿಕಾರ್ಜುನ, ಅಂಬಾದೇವಿ ದೇವಸ್ಥಾನದ ವ್ಯವಸ್ಥಾಪನ ಕಮಿಟಿ ಸದಸ್ಯರಾದ ಶಂಬನಗೌಡನಗೌಡ ಮುಕ್ಕುಂದ, ವೆಂಕಟರೆಡ್ಡಿ ಹುಡಾ,ಹನುಮಂತಪ್ಪ ನವಲಿ ಸೋಮಲಾಪುರ,ಮಲ್ಲಿಕಾರ್ಜುನ ಭೀಮರಾಜ ಕ್ಯಾಂಪ್, ಸಂತೋಷ್ ಗೊರೆಬಾಳ್ ಮುಂತಾದವರು ಉಪಸ್ಥಿತರಿದ್ದರು.
ಭಾರತೀಯ ಜನತಾ ಪಾರ್ಟಿ ಯುವ ಮೊರ್ಚಾ ಸಿಂಧನೂರು ನಗರ ಮಂಡಲದ ವತಿಯಿಂದ ವಾರ್ಡ್ ನಂ 4 ರಲ್ಲಿ ಒಳಪಡುವ ಪುರಾತನ ಕಾಲದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಮಧ್ವರಾಜ್ ಆಚಾರ್ಯ ರಾಜ್ಯ ಯುವ ಮೋರ್ಚಾ, ಕಾರ್ಯದರ್ಶಿಗಳಾದ ಅಮರೇಶ ರೈತ ನಗರಕ್ಯಾಂಪ್, ನಗರ ಮಂಡಲ ಅಧ್ಯಕ್ಷರಾದ ಪ್ರೇಮ ಸಿದ್ಧಾಂತಿಮಠ ಹಾಗೂ ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರು ಪವನ್ ಮೇಟಿ ಹಾಗೂ ಜಿಲ್ಲಾ ಉಪಾಧ್ಯಕ್ಷರು ಸುಕುಮುನಿ ತುರವಿಹಾಳ ಮತ್ತು ಸಿಂಧನೂರು ನಗರ ಯುವ ಮೋರ್ಚಾ ಅಧ್ಯಕ್ಷ ರವಿಕುಮಾರ ಹಾಗೂ ಯುವ ಮೋರ್ಚದ ಪಧಾದಿಕಾರಿಗಳು ಭಾಗಿಯಾಗಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
