ಸಿಂಧನೂರು:ಕಾರುಣ್ಯ ವ್ರದ್ದಾಶ್ರಮದಲ್ಲಿ ಪ್ರತಾಪಗೌಡ ಪಾಟೀಲ್ ಅಭಿಮಾನಿ ಬಳಗದಿಂದ ಹುಟ್ಟು ಹಬ್ಬ ಆಚರಣೆ.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ ( ರಿ) ಹರೇಟನೂರು, ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಪ್ರತಾಪ್ ಗೌಡ ಅಭಿಮಾನಿ ಬಳಗ ವತಿಯಿಂದ ಕಲ್ಯಾಣ ಕರ್ನಾಟಕದಲ್ಲಿ ತಮ್ಮದೇ ಆದಂತಹ ವರ್ಚಸ್ಸನ್ನು ಮೂಡಿಸಿಕೊಂಡು ಸರಳ ಸಜ್ಜನಿಕೆಯ ರಾಜಕಾರಣಿ ಸನ್ಮಾನ್ಯ ಶ್ರೀ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು ಮಸ್ಕಿ ಇವರ 67 ನೇ ವರ್ಷದ ಹುಟ್ಟುಹಬ್ಬವನ್ನು ಆಶ್ರಮದಲ್ಲಿ ಮಹಾಪ್ರಸಾದ ಮಾಡಿಸಿ ಎಲ್ಲಾ ವೃದ್ಧರು ಹಾಗೂ ಬುದ್ಧಿಮಾಂದ್ಯ ರಿಗೆ ಹಣ್ಣುಹಂಪಲು, ಬ್ರೆಡ್, ಬಿಸ್ಕೆಟ್, ಹಾಲನ್ನು ವಿತರಿಸುವ ಮೂಲಕ ಅನಾಥ ಜೀವಿಗಳ ಕೈಯಿಂದ ಕೇಕ್ ಕತ್ತರಿಸಿ, ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಸ್ಕಿ ಪಟ್ಟಣದಲ್ಲಿ ಪ್ರತಾಪ್ ಗೌಡ ಫೌಂಡೇಶನ್ ಉದ್ಘಾಟನಾ ಕಾರ್ಯಕ್ರಮವನ್ನು ಕೂಡಾ ನಗರದಲ್ಲಿ ಅಭಿಮಾನಿಗಳು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಹರ್ಷಗೌಡ ಉಪಾಧ್ಯಕ್ಷರು ಬಿಜೆಪಿ ಯುವ ಮೋರ್ಚಾ ರಾಯಚೂರು,ವಿಶ್ವನಾಥ ನಾಯಕ ಗೋನವಾರ, ಮಹಾದೇವನಾಯಕ, ಶಿವರಾಮಮೂರ್ತಿ ನಾಯ್ಕ ನಾಮನಿರ್ದೇಶಿತ ಸದಸ್ಯರು ನಗರಸಭೆ ಸಿಂಧನೂರು, ವಿಕ್ರಮ ನಾಯಕ, ರವಿಕುಮಾರ, ಅನಿಲ್, ವೀರೇಶ ಸುಕಾಲಪೇಟೆ , ರಾಮಣ್ಣ ಸುಕಾಲಪೇಟೆ ಹಾಗೂ ಅಭಿಮಾನಿಗಳು ಭಾಗವಹಿಸಿ ಪ್ರತಾಪಗೌಡ ಮಾಜಿ ಶಾಸಕರು ಮಸ್ಕಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಶುಭಹಾರೈಸಿದರು.
ಮಸ್ಕಿ ವಿಧಾನಸಭಾ ಕ್ಷೇತ್ರದ ಮಾಜಿ ಜನಪ್ರಿಯ ಶಾಸಕರಾದ ಶ್ರೀ ಪ್ರತಾಪಗೌಡ ಪಾಟೀಲ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿ,ಭಗವಂತನು ಉತ್ತಮ ಆಯುರಾರೋಗ್ಯ, ನೆಮ್ಮದಿಯ ಜೀವನ ಕರುಣಿಸಿ, ಮುಂಬರುವ ದಿನದಲ್ಲಿ ನಿಮ್ಮ ಎಲ್ಲಾ ಇಷ್ಟಾರ್ಥಗಳುಈಡೇರಲಿ ಹಾಗೂ ಸಮಾಜ ಸೇವೆ, ಮಾಡಲು ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲಿ ಸಮಾಜದಲ್ಲಿನ ನಮ್ಮಂತಹ ನೊಂದು-ಬೆಂದ ಜೀವಿಗಳಿಗೆ ಆಶ್ರಯ ನೀಡಿ ಅನ್ನದಾತರಾಗುವಂತಹ ಇನ್ನು ಹೆಚ್ಚಿನ ಶಕ್ತಿಯನ್ನು ಸಕಲ ದೇವರು ನೀಡಲಿ ಎಂದು ಆಶ್ರಮದಲ್ಲಿನ ಎಲ್ಲಾ ವೃದ್ಧರು ಹಾಗೂ ಬುದ್ಧಿಮಾಂದ್ಯರು ಶುಭಾ ಹಾರೈಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
