ಹಿಂದಿ ಹೇರಿಕೆ ಮತ್ತು ಬೆಲೆ ಏರಿಕೆ ಸಾಮಾನ್ಯ ಜನರಿಗೆ ಹೊರೆ!! ಹಿರಿಯ ರಾಜಕಾರಣಿ ನಂದಿಹಳ್ಳಿ ಹಾಲಪ್ಪ !!
ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ ನವರು ಪ್ರಸ್ತುತ ವಿಧ್ಯಮಾನಗಳಿ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಾ. ಹಿಂದಿ ಹೇರಿಕೆಯನ್ನ ಕುರಿತು ‘ ನಮಗೆ ಕನ್ನಡ ನಮ್ಮ ತಾಯಿ ಮಾತೃಭಾಷೆ, ಅದನ್ನ ಎಂದೂ ಬಿಟ್ಟು ಕೊಡುವುದಿಲ್ಲ ಅದು ಹೃದಯದ ಭಾಷೆ. ಯಾವುದೇ ಭಾಷೆಯನ್ನ ಹೇರಿಕೆ ಮಾಡಿ ಒತ್ತಾಯ ಪೂರ್ವಕವಾಗಿ ಕಲಿಸುವಂತಹದ್ದಲ್ಲ ಅದು ಸ್ವಾಭಾವಿಕವಾಗಿ ಕಲಿಯುವಂತಹದ್ದು. ವ್ಯವಹಾರಿಕವಾಗಿ ಒಂದೆರಡು ಭಾಷೆ ಕಲಿಯಬಹುದು ತಪ್ಪಲ್ಲ! ಅದಕ್ಕೆ ತ್ರೀ ಭಾಷಾ ಸೂತ್ರ ಸರಿಯಾಗಿದೆ!. (ಸ್ವಾತಂತ್ರ್ಯಾನಂತರ 1952ರಲ್ಲಿ ಮೊದಲಿಯಾರ್ ಶಿಕ್ಷಣ ಆಯೋಗವು ಪ್ರಥಮ ಬಾರಿಗೆ ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡಿತ್ತು. ಅದನ್ನು ದಕ್ಷಿಣದ ರಾಜ್ಯಗಳು ವಿರೋಧಿಸಿದ್ದವು. 1968ರ ಕೊಠಾರಿ ಆಯೋಗ ಮತ್ತು 1986ರ ಶಿಕ್ಷಣ ನೀತಿಯೂ ಅದೇ ಸೂತ್ರವನ್ನು ಮಂಡಿಸಿತ್ತು) ನನ್ನ ಭಾಷೆಯ ಮುಖಾಂತರ ನಾನು ಬೇರೆ ಭಾಷೆಯನ್ನ ಕಲಿಯಬೇಕು ಬೇರೆ ಭಾಷೆಯ ಮೂಲಕ ನನ್ನ ಭಾಷೆ ಕಲಿಯೊದು ಶುಧ್ಧ ಮೂರ್ಖತನ. ಎಂದು ಟೀಕಿಸಿದರು.
ಇನ್ನೂ ಬೆಲೆ ಏರಿಕೆ ವಿಷಯಕ್ಕೆ
‘ ಮಧ್ಯಮವರ್ಗದ ಜನರು. ಮತ್ತು ಅವತ್ತು ದುಡಿದ ಅವತ್ತೆ ಉಣ್ಣುವ ಜನ ಬದುಕುವುದು ಬಹಳ ಕಷ್ಟ ವಾಗಿದೆ. ಈ ಜಿ ಎಸ್. ಟಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ತೆರಿಗೆಯಿಂದ ಸಾಮಾನ್ಯ ಜನರಿಗೆ ಯಾವ ಲಾಭವಾಗಿದೆ ?. ಎಲ್ಲರೂ ಸಂಕಷ್ಟದಲ್ಲಿರುವಾಗ ಬೆಲೆ ಏರಿಕೆ ಗಾಯದ ಮೇಲೆ ಎಳೆದೆ ಬರೆಯಾಗಿದೆ .ಹೀಗೆ ಮುಂದುವರೆದರೆ ಕ್ರಾಂತಿಯ ಇತಿಹಾಸ ಮರುಕಳಿಸುತ್ತದೆ. ಎಂದೂ ಪ್ರತಿಕ್ರಿಯಿಸಿದರು…

ವರದಿ: ಅಜಯ.ಚ
ಹೂವಿನ ಹಡಗಲಿ
(ಹುಗಲೂರು)
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
