ಚಿತ್ರದುರ್ಗ:-ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷೇಯಿಂದ, ಬಾಣಂತಿ ಸಾವು, ಸಂಬಧಿಕರು ಹಾಗೂ ಸಂಘಟನೆಗಳ ಪದಾಧಿಕಾರಿಗಳಿಂದ ಶವವನ್ನಿಟ್ಟು ಆಸ್ಪತ್ರೆ ಎದುರು ಧರಣಿ…!!!

ದಿನಾಂಕ :-14/09/2021 ರಂದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ, ಲೋಕದೊಳಲು ಎಂಬ ಗ್ರಾಮದ, ಮುರುಗೇಪ್ಪರವರ ಪತ್ನಿ ಲತಾ ಎನ್ನುವರು ತಮ್ಮ ಎರಡೆನೆಯ ಮಗುವಿನ ಆಗಮನಕೆಂದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ತೆರಳಿದರು ಹಾಗೂ ವೈದ್ಯರು ನೀಡಿರುವ ನಿಗದಿತ, ಸಮಯದಂತೆ ಅವರು ಜಿಲ್ಲಾಸ್ಪತ್ರೆಗೆ ತೆರಳಿದರು ಅದರಂತೆ, ಲತಾರವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರಾದರು ಆ ಕರುಳ ಕುಡಿಯನ್ನು ನೋಡಲು ಆಗಲಿಲ್ಲ ಅಂದರೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದನೋ ಅಥವಾ ಅಜಾಗರುಕಥೆಯಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅತಿಯಾದ ರಕ್ತ ಸ್ರಾವದಿಂದ ತಾಯಿ ಕಣ್ಣುಬಿಡಲಿಲ್ಲ ನಂತರ ಜಿಲ್ಲೆಯ ಬಸವೇಶ್ವರ ಆಸ್ಪತ್ರೆಗೆ ರವಾನೆ ಮಾಡಲು ಸೂಚನೆಯನ್ನು ನೀಡಿದರು ಅಲ್ಲಿರುವ ವೈದ್ಯರು ಸಹ, ಇಲ್ಲಿಹಾಗುವುದಿಲ್ಲವೆಂಬ ಸೂಚನೆ ನೀಡಿದರು ನಂತರ, ದಾವಣಗೆರೆ, ಹುಬ್ಬಳ್ಳಿಯ ಆಸ್ಪತ್ರೆಗೆ ತೆರಳಿದರಾದರು ಮರಳಿ ಬಾರದ ಲೋಕಕ್ಕೆ ತೆರಳಿದ ಲತಾ, ತನ್ನ ಮಕ್ಕಳನ್ನು ಅನಾಥರನ್ನಾಗಿಸಿದರು.

ಅಂದರೆ ಇದಕ್ಕೆಲ್ಲ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯರು ಕಾರಣ ಎನ್ನುವ ಒಂದು ಸೂಕ್ತ ಚಿತ್ರಣ ಕಾಣುತ್ತಿರುವುದನ್ನು ನೋಡಿದರೆ ಈ ಒಂದು ಆಸ್ಪತ್ರೆಯಲ್ಲಿರುವ ಆರೋಗ್ಯ ಸಿಬ್ಬಂದಿಗಳ ಅಜಾಗರುಕತೆಯೇ ಇದಕ್ಕೆಲ್ಲ ಕಾರಣವೆಂದು ಕುಟುಂಬಸ್ಥರು ಹಾಗೂ ಹಲವು ಸಂಘಟನೆಗಳ ಪದಾಧಿಕಾರಿಗಳು ಆರೋಗ್ಯ ಇಲಾಖೆಯ ಬೇಜವಾಬ್ದಾರಿಯನ್ನು ಖಂಡಿಸಿ ಶವವನ್ನು ಆಸ್ಪತ್ರೆಯ ಮುಂದಿಟ್ಟು ಧರಣಿ ನಡೆಸಿದರಾದರು, ನೊಂದ ಕುಟುಂಬಕ್ಕೆ ನ್ಯಾಯವನ್ನು ಒದಗಿಸಲು ಆಗಲಿಲ್ಲ ಹಾಗೂ ಮೃತ ಲತಾರವರು ತನ್ನ ಇಬ್ಬರು ಮಕ್ಕಳನ್ನು ಅನಾಥರನ್ನಾಗಿ ಮಾಡಿ ಬಾರದ ಲೋಕಕ್ಕೆ ಪಯಣ ಮಾಡಿದರು ಆದರೆ, “ವೈದ್ಯ ನಾರಾಯಣ ಹರಿ “ಎನ್ನುತ್ತಾರೆ ಆದರೆ ಕೆಲವು ವೈದ್ಯರು ಮಾಡುವ ತಪ್ಪಿನಿಂದ ವೈದ್ಯ ಲೋಕಕ್ಕೆ ಕಪ್ಪು ಚುಕ್ಕಿ ಇಟ್ಟಂತೆ,ಇಂತಹ ತಪ್ಪು ಮಾಡಿರುವ ಅಧಿಕಾರಿಗೆ ಸೂಕ್ತ ಶಿಕ್ಷೆಯನ್ನು ಕೊಟ್ಟು ನೊಂದ ಕುಟುಂಬಕ್ಕೆ ಸರ್ಕಾರದಿಂದ ಏನಾದರು ಪರಿಹಾರ ಕೊಡಲಿ. ಹಾಗೂ ತಪ್ಪು ಮಾಡಿದ ವೈದ್ಯೆಯನ್ನು ಕೆಲಸದಿಂದ ವಜಾ ಮಾಡಲಿ ಹಾಗೂ ಮುಂದಾಗುವ ಅವಘಡಗಳನ್ನು ತಪ್ಪಿಸಲಿ ಮತ್ತು ಮತ್ತಷ್ಟು ಮಕ್ಕಳನ್ನು ಅನಾಥರಾಗುವುದನ್ನು ದೂರಮಾಡಲಿ ಎಂಬುದು ಅಲ್ಲಿ ನೆರೆದ ಸಂಘಟನೆಗಳ ಹಾಗೂ ಕುಟುಂಬಸ್ಥರ ಆಗ್ರಹ…

ವರದಿ. ಅಜಯ್ ಹೊಸದುರ್ಗ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend