ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ (ಸೆಪ್ಟೆಂಬರ್-3) ಇಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರ ವತಿಯಿಂದ ವಿವಿಧ ಹಕ್ಕೊತ್ತಾಯ ಗಳಿಗಾಗಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು. ರೈತರ ಪಂಪ್ಸೆಟ್ಗಳಿಗೆ ಮೀಟರ್ ಹಾಕುವುದನ್ನು ನಿಲ್ಲಿಸಬೇಕು. ಭಾಗ್ಯಜ್ಯೋತಿ ಕುಟೀರ ಯೋಜನೆಯ ಮನೆಗಳಿಗೆ ವಿದ್ಯುತ ಮೀಟರ್ ಹಾಕುವುದನ್ನು ನಿಲ್ಲಿಸಬೇಕು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾಲೂಕಿನಾದ್ಯಂತ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು. ತಾಲೂಕಿನ ಆಯಾ ಗ್ರಾಮ ಪಂಚಾಯಿತಿಗಳಿಗೆ ಜಾತಿ ಪ್ರಮಾಣಪತ್ರ ಹಾಗೂ ಆಧಾರ್ ಕಾರ್ಡ್ ನೀಡಲು ಪ್ರತ್ಯೇಕ ಕೌಂಟರ್ ನ್ನು ಸ್ಥಾಪಿಸಬೇಕು, ವಿದ್ಯುತ್ ಖಾಸಗೀಕರಣ ಹಾಗೂ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಿಕೆ ಕೈಬಿಡಬೇಕು, ವಸತಿ ಹೀನರಿಗೆ ವಸತಿ ಒದಗಿಸಿ ಕೊಡಬೇಕು, ತಾಲೂಕಿನಲ್ಲಿ ಆರು ಹಳ್ಳಿಗಳಿಗೆ ಸ್ಮಶಾನಗಳು ಇರುವುದಿಲ್ಲ, ಪ್ರತಿಭಟನಾಕಾರರು ಒತ್ತಾಯಿಸಿದರು ತಾಲೂಕು ಕಚೇರಿಯ ತಾಸಿಲ್ದಾರ್ ಟಿ ಸುರೇಶ್ ಕುಮಾರ್ ಅವರಿಗೆ ಮನವಿ ನೀಡಿದರು. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ತಾಲೂಕು ಅಧ್ಯಕ್ಷರಾದ ಕೆ ಟಿ ನಾಗರಾಜಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲಿಯಪ್ಪ, ತಾಲೂಕು ಉಪಾಧ್ಯಕ್ಷರಾದ ಮಾರಣ್ಣ, ದಾನಸೂರನಾಯಕ, ತಿಮ್ಮಣ್ಣ, ಹನುಮಂತರೆಡ್ಡಿ ನಾಗೇಶ್, ತಿಪ್ಪೇಸ್ವಾಮಿ, ರಾಮಾಂಜಿನಪ್ಪ, ಆಂಜಿನಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು….
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
