ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಬಯಲುತುಂಬರಗುದ್ದಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಚನ್ನವೃಷಭ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಮತ್ತು ಶ್ರೀ ನಂದೀಶ್ವರ ಪರವು ಕಾರ್ಯಕ್ರಮ ನೆರವೇರಿದವು, ಉಜ್ಜಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು.
ಬಯಲುತುಂಬರಗುದ್ದಿಯಲ್ಲಿ ಧಾರ್ಮಿಕತೆಗೆ ವಿಶೇಷ ಸ್ಥಾನವಿದೆ
ಉಜ್ಜಿನಿ ಸದ್ಧರ್ಮ ಪೀಠಕ್ಕೆ 107ನೇ ಜಗದ್ಗುರುಗಳನ್ನು ನೀಡಿದ ಕೀರ್ತಿ ಬಯಲುತುಂಬರಗುದ್ದಿ ಗ್ರಾಮಕ್ಕೆ ಸಲ್ಲಲಿದ್ದು, ಗ್ರಾಮವೂ ಶ್ರೀಪೀಠಕ್ಕೆ ಜಗದ್ಗುರುಗಳನ್ನು ನೀಡುವ ಮೂಲಕ ಧಾರ್ಮಿಕತೆಯನ್ನು ಪ್ರಸರಿಸುತ್ತ ಬಂದಿದೆ ಎಂದು ಉಜ್ಜಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಬಯಲುತುಂಬರಗುದ್ದಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಚನ್ನವೃಷಭ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಮತ್ತು ಶ್ರೀ ನಂದೀಶ್ವರ ಪರವು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅಶಿರ್ವಚನ ನೀಡಿದರು
ಶ್ರೀ ಚನ್ನವೃಷಭ ಮಹಾಸ್ವಾಮಿಗಳ ಪುಣ್ಯರಾಧನೆಗಾಗಿ ಈಗಾಗಲೇ ಪ್ರತಿವರ್ಷ ಗ್ರಾಮಕ್ಕೆ ಆಗಮಿಸಿ ಅಶಿರ್ವಚನ ನೀಡುತ್ತಿದ್ದೇವೆ, ಇನ್ನು ಮುಂದೆಯೂ ಈ ಕಾರ್ಯಕ್ರಮ ಮುಂದುವರೆಯಲಿದೆ ಎಂದ ಅವರು,
ದೇಶದಲ್ಲಿ ರೈತ ಅಭಿವೃದ್ದಿಯಾದಾಗ ಮಾತ್ರ ರಾಷ್ಟ್ರ ಬೆಳೆಯುವುದು, ರೈತನ ಬದುಕು ಹಸನಗಬೇಕಿದೆ, ಉತ್ತಮ ಮಳೆ, ಬೆಳೆಯಾಗಲಿ, ಸಂತಾನ, ಆರೋಗ್ಯ, ಆಯುಶ್ಯ, ಪ್ರಾಪ್ತಿಯಾಗಲಿ, ಕೋರೋನಾ ಸೇರಿದಂತೆ ಇತರೆ ಸಾಂಕ್ರಮಿಕ ಪಿಡುಗಗಳು ದೂರವಾಗಲಿ ಎಂದು ಅವರು ಆಶಿರ್ವಚನ ನೀಡಿದರು.
ಈ ಸಂಧರ್ಭದಲ್ಲಿ ಎಚ್.ಎಂ.ವೀರಭದ್ರಯ್ಯ ಸ್ವಾಮಿ, ಎಂ ಬಸವರಾಜ, ಪಿ.ವಿ.ರುದ್ರೇಶ್, ಜಿ.ಕೊಟ್ರೇಶ್, ಮೂಗಪ್ಪ ಸೇರಿ ನೂರಾರು ಗ್ರಾಮಸ್ಥರು ಪಾಲ್ಗೊಂಡು ಶ್ರೀ ಗಳ ಅಶಿರ್ವದ ಪಡೆದರು, ಗ್ರಾಮಸ್ಥರು ಸೇರಿ ಇತರೆ ಗ್ರಾಮದವರು ಇದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
