ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕ  ದ್ವಿಚಕ್ರ ರ್ಯಾಲಿ…!!!

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕ
ದಿನಾಂಕ 9/8/2021ರಂದು ಗೂಳೂರು ವೃತ್ತದಿಂದ ದ್ವಿಚಕ್ರ ವಾಹನ ಮೆರವಣಿಗೆ ಮುಖಾಂತರ ತೆರಳಿ ತಾಲೂಕು ಕಚೇರಿ ಮುಂಭಾಗ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು ಈ ಹೋರಾಟವನ್ನು ಉದ್ದೇಶಿಸಿ ತಾಲೂಕು ಅಧ್ಯಕ್ಷರು ಬಿಟಿಸಿ ಸೀನಾ ಮಾತನಾಡುತ್ತಾ ಕರ್ನಾಟಕ ರಾಜ್ಯದಲ್ಲಿ ಬಿಜಾಪುರ (ವಿಜಿಪುರ) ಬೆಳಗಾಂ (ಬೆಳಗಾವಿ) ಗುಲ್ಬರ್ಗ (ಕಲಬುರ್ಗಿ) ಎಂದು ಮರು ನಾಮಕರಣ ಮಾಡಿರುವ ಇತಿಹಾಸ ಇರುತ್ತದೆ ಬಾಗೇಪಲ್ಲಿ ಹಳೆಗನ್ನಡ ಪದ ಹಳಗನ್ನಡವನ್ನು ಈ ಕಾಲದಲ್ಲಿ ಯಾರು ಕೂಡ ಬಳಸುತ್ತಿಲ್ಲ ದಯಮಾಡಿ ಭಾಗ್ಯನಗರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ .
ಪ್ರಧಾನ ಕಾರ್ಯದರ್ಶಿ ಜಬಿವುಲ್ಲಾ ಮಾತನಾಡುತ್ತಾ ಸುಮಾರು ವರ್ಷಗಳಿಂದ ಬಾಗೇಪಲ್ಲಿ ಹೆಸರನ್ನು *ಭಾಗ್ಯನಗರ ***ಎಂದು ಮರುನಾಮಕರಣ ಮಾಡಲು ಹೋರಾಟಗಳನ್ನು ಮಾಡಿರುವ ಇತಿಹಾಸವಿದೆ ನಮ್ಮನ್ನು ಆಳುವ ರಾಜಕಾರಣಿಗಳು ಕಿವಿ ಇದ್ರೂ ಕುರುಡರಂತೆ ವರ್ತಿಸಿರುವ ಇತಿಹಾಸವು ಇದೆ, 2019ರಲ್ಲಿ ಮಾನ್ಯ ಶಾಸಕರು ಸುಬ್ಬಾರೆಡ್ಡಿ ರವರಿಗೆ ಮನವಿ ಪತ್ರ ನೀಡಿದಾಗ ಈ ವಿಷಯವನ್ನು ವಿಧಾನಸೌಧದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಭರವಸೆಯನ್ನು ನೀಡಿದ್ದರು ಅದರ ಅಂಗವಾಗಿ ಬಾಗೇಪಲ್ಲಿ ಎಂಬ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಬದಲಾವಣೆ ಮಾಡುವ ಬಗ್ಗೆ.
ಉಲ್ಲೇಖ :_ಶ್ರೀ ಎಸ್ಎನ್ ಸುಬ್ಬಾರೆಡ್ಡಿ ಮಾನ್ಯ ಶಾಸಕರು ರವರು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಪತ್ರದ ಸಂಖ್ಯೆ ಬಾವಿ ಸರ್ಕಾ/ಶಾಭ 1249/2919 ದಿನಾಂಕ04/11/2019.. ..
ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಕಂದಾಯ ಇಲಾಖೆ (ಪುನರ್ವಸತಿ) ಗುರುಮೂರ್ತಿ ರವರಿಂದ ಚಿಕ್ಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ **ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಉಲ್ಲೇಖ* ಬಂದಿರುತ್ತದೆ, ಆದರೆ ಮಾನ್ಯ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ವಿಳಂಬ ಧೋರಣೆ ಮಾಡಿರುತ್ತರೆ ಎಂದು ಆಗ್ರಹಿಸಿ ಬಾಗೇಪಲ್ಲಿ ಯನ್ನು ಭಾಗ್ಯನಗರ ಅಧಿಕೃತವಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ ಇಲ್ಲದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಹೋರಾಟದಲ್ಲಿ ತಾಲೂಕು ಅಧ್ಯಕ್ಷರು ಬಿಟಿಸಿ ಸೀನ, ತಾಲೂಕು ಪ್ರಧಾನ ಕಾರ್ಯದರ್ಶಿ ಜಬೀ ವುಲ್ಲಾ, ನಗರ ಘಟಕ ಅಧ್ಯಕ್ಷರು ಸುರೇಶ್ ಬಾಬು, ಅಬ್ದುಲ್ ಮುಜೀಬ್, ರವಿ ಯಾದವ್, ಸುಧಾಕರ್ ,ಜಾವಿದ್, ಅಮರನಾಥ, ಸಾದಪ್ಪ ,ಕೃಷ್ಣಪ್ಪ, ರಾಮಚಂದ್ರ,( ಚಂದ್ರು )ನಾಗಿ ರೆಡ್ಡಿ ,ಬಾಬಾ ಫಕ್ರುದ್ದಿನ್, ಬಾಬಾ ಜಾನ್, ಲಕ್ಷ್ಮಣ್ಣ ,ಕಲಿಲ್ ಸಾಬ್ ಮುಂತಾದವರು ಉಪಸ್ಥಿತರು…

ವರದಿ. ಎಂ. ಕೆ. ಮೂರ್ತಿ, ಚಿಕ್ಕಬಳ್ಳಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend