ವಿದ್ಯಾರ್ಥಿನಿ ಜೊತೆಗೆ ರಾಸಲೀಲೆ ನಡೆಸುತ್ತಿರುವಾಗಲೇ ಪತ್ನಿಯ ಕೈಗೆ ಸಿಕ್ಕಿ ಬಿದ್ದ ಪ್ರಾಧ್ಯಾಪಕ! | “ರೇಪ್ ಮಾಡ್ದ” ಎಂದಿದ್ದ ವಿದ್ಯಾರ್ಥಿನಿ ಯೂಟರ್ನ್!?
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕನೋರ್ವ ವಿದ್ಯಾರ್ಥಿನಿಯ ಜೊತೆಗೆ ರಾಸಲೀಲೆಯಲ್ಲಿ ತೊಡಗಿಕೊಂಡಿರುವಾಗಲೇ ಪತ್ನಿಯ ಕೈಗೆ ಸಿಕ್ಕಿ ಬಿದ್ದಿದ್ದು, ಈ ವೇಳೆ ಪತ್ನಿಯು ಸಂತ್ರಸ್ತ ಯುವತಿಯ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ ಘಟನೆ ನಡೆದಿದೆ.
ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಮಚಂದ್ರನ ಕಾಮಶಾಸ್ತ್ರ ಇದೀಗ ಬಯಲಾಗಿದ್ದು, ಗುರುವಾರ ಕಾಲೇಜಿಗೆ ಹೋಗಿದ್ದ ಆರೋಪಿಯ ಪತ್ನಿ ಮನೆಗೆ ದಿಢೀರನೇ ವಾಪಸ್ ಆದಾಗ, ಯುವತಿಯೋರ್ವಳು ಅಳುತ್ತಾ ಬಂದು ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಾಳೆ. ಈ ಸಂಬಂಧ ರಾಮಚಂದ್ರನ ಪತ್ನಿ ಸಂತ್ರಸ್ತೆಯ ಜೊತೆಗೆ ತೆರಳಿ ದೂರು ನೀಡಿದ್ದರು.
ತನ್ನ ಪತಿಯ ವಿರುದ್ಧವೇ ದೂರು ನೀಡಿದ್ದ ಮೈಸೂರು ವಿವಿಯ ಪ್ರಾಧ್ಯಾಪಕಿಯೂ ಆಗಿರುವ ಡಾ.ಲೋಲಾಕ್ಷಿ, ಜಯಲಕ್ಷ್ಮೀಪುರಂ ಠಾಣೆಯಲ್ಲಿ ದೂರು ನೀಡಿದ್ದರು. ಇನ್ನೂ ನಿನ್ನೆ ನೀಡಿರುವ ದೂರನ್ನು ಆಧರಿಸಿ ಇಂದು ಸಂತ್ರಸ್ತ ಯುವತಿಯ ಹೇಳಿಕೆಯನ್ನು ಪೊಲೀಸರು ಪಡೆಯಲು ಮುಂದಾಗಿದ್ದಾರೆ. ಆದರೆ ಈ ವೇಳೆ ಯುವತಿ ಉಲ್ಟಾ ಹೊಡೆದಿದ್ದು, ನನ್ನನ್ನು ಬಲವಂತ ಪಡಿಸಿ ಲೋಲಾಕ್ಷಿ ಅವರು ದೂರು ಕೊಡಿಸಿದ್ದಾರೆ ಎಂದು ಹೇಳಿದ್ದಾಳೆ ಎಂದು ವರದಿಯಾಗಿದೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
