ಮೊಳಕಾಲ್ಮುರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದಿಂದ ಪ್ರತಿಭಟನೆ.!

ಚಿತ್ರದುರ್ಗ: ಮೊಳಕಾಲ್ಮುರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದಿಂದ ಇಂದು ಜುಲೈ 6ರಂದು ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಹೌದು… ತಾಲ್ಲೂಕಿನಲ್ಲಿ ಶೇಂಗಾ ಕಿಟ್ಟನ್ನು ನೀಡುತ್ತೇವೆಂದು ಕೃಷಿ ಅಧಿಕಾರಿಗಳು ರೈತರ ಬಳಿ ಅರ್ಜಿಗಳನ್ನು ಸ್ವೀಕರಿಸಿ ಒಂದು ವಾರ ಕಳೆದರೂ ಇದುವರೆಗೂ ಶೇಂಗಾ ಕಿಟ್‌ನೀಡದೆ ಬೇಜವಾಬ್ದಾರಿತನ ತೋರುತ್ತಿರುವುದು ಖಂಡನೀಯ ಎಂದು ಸಿ.ಪಿ.ಐ.ನ ದಾನಪ್ಪ ತಿಳಿಸಿದರು. ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿ ಯಿಂದ ರೈತರಿಗೆ ಶೇಂಗಾ ಕಿಟ್ ನೀಡದೇ ಸತಾಯಿಸುತ್ತಿರುವ ಕೃಷಿ ಅಧಿಕಾರಿಗಳ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ತಾಲ್ಲೂಕಿನಲ್ಲಿ ಬಡ ರೈತರು ಹೆಚ್ಚಾಗಿದ್ದು, ಇವರು ಸರ್ಕಾರ ನೀಡುವಂತ ಬಿತ್ತನೆ ಬೀಜವನ್ನೇ ಅವಲಂಬಿಸಿ ಶೇಂಗಾ ಕೃಷಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳು ಮಾತ್ರ ರೈತರಿಗೆ ಬೆಳೆ ಇನ್ಸೂರೆನ್ಸ್, ಬೆಳೆ ಪರಿಹಾರ ಮತ್ತು ಶೇಂಗಾ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಈಮಧ್ಯೆ ಕೊರೋನಾ ಮಹಾಮಾ ರಿಯಿಂದ ಕಂಗೆಟ್ಟಿರುವ ರೈತರಿಗೆ ಅಧಿಕಾರಿಗಳು ಮಾತ್ರ ಇನ್ನು ಸಂಕಷ್ಟದ ಸುಳಿ ಯಲ್ಲಿ ಸಿಲುಕುವಂತೆ ಮಾಡುತ್ತಿರುವುದು ವಿಪರ್ಯಾಸವೇ ಸರಿ ಎಂದರು. ಕೂಡಲೇ ತಾಲ್ಲೂಕು ದಂಡಾಧಿಕಾರಿಗಳು ಇತ್ತಕಡೆ ಗಮನಹರಿಸಿ ರೈತರ ಸಂಕಷ್ಟ ನೀಗಿಸಲು ಕೃಷಿ ಅಧಿಕಾರಿಗಳ ಸಭೆ ನಡೆಸಿ ತಾಲ್ಲೂಕಿನ ರೈತರಿಗೆ ಆನುಕೂಲಮಾಡಿ ಕೊಡಬೇಕೆಂದು ಉಪ ತಹಶೀಲ್ದಾರ್ ಏಳುಕೋಟಿ ಮತ್ತು ಕೃಷಿ ಅಧಿಕಾರಿ ಉಮೇಶ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ.ತಿಮ್ಮಣ್ಣ, ಕೆ.ಟಿ.ನಾಗರಾಜ್, ಸಿದ್ದಪ್ಪ, ಸಣ್ಣ ಓಬಯ್ಯ, ಕಾಮಯ್ಯ, ಪಾಪಯ್ಯ, ಗುಂಡುಬೋರಯ್ಯ ಹಾಗೂ ರೈತರು ಉಪಸ್ಥಿತರಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend